ಹೊಸ ವಿಷಯಗಳನ್ನು ಪ್ರಯತ್ನಿಸಲು ಯಾವಾಗಲೂ ಒಳಗಿನಿಂದ ಉತ್ಸುಕನಾಗಿರುವ ವ್ಯಕ್ತಿ ಮತ್ತು ಯಾವಾಗಲೂ ಮುಂದುವರಿಯಲು ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸಲು ತನ್ನ ಸಂಗಾತಿಯನ್ನು ಪ್ರೇರೇಪಿಸುವ ವ್ಯಕ್ತಿ ಅತ್ಯುತ್ತಮ ಪ್ರೇಮಿಯಾಗುತ್ತಾನೆ(Lover). ಹುಡುಗಿಯರು ಯಾವ ರೀತಿಯ ಹುಡುಗ ತುಂಬಾನೆ ಇಷ್ಟ ಆಗ್ತಾನೆ ಅನ್ನೋದನ್ನು ನೋಡೋಣ.
ಕಲೆ, ಸಂಸ್ಕೃತಿ ಮತ್ತು ಸಂಗೀತದ ಬಗ್ಗೆ ಪ್ರೀತಿ ಮತ್ತು ಉತ್ಸಾಹ ಹೊಂದಿರುವ ವ್ಯಕ್ತಿಯನ್ನು ಹೆಚ್ಚಿನ ಹುಡುಗಿಯರು ಇಷ್ಟಪಡುತ್ತಾರೆ. ಯಾಕಂದ್ರೆ ಹೆಚ್ಚಿನ ಎಲ್ಲಾ ಹುಡುಗಿಯರಿಗೆ ಕಲೆ, ಸಂಸ್ಕೃತಿ ಅನ್ನೋದು ತುಂಬಾನೆ ಇಷ್ಟ. ತನ್ನಂತೆ ಆಸಕ್ತಿ ಹೊಂದಿರುವ ವ್ಯಕ್ತಿಯನ್ನು ಹುಡುಗಿಯರು ಖಂಡಿತವಾಗಿಯೂ ಇಷ್ಟಪಡ್ತಿದ್ದಾರೆ.
ಹುಡುಗಿಯರು ಸಾಮಾನ್ಯವಾಗಿ ಗಿಫ್ಟ್ ಗಳನ್ನು(Gifts) ಇಷ್ಟಪಡ್ತಾರೆ, ಅದರಲ್ಲೂ ತಮ್ಮ ಗೆಳೆಯ ಗಿಫ್ಟ್ ಕೊಟೃರೆ ಹೇಗಿರುತ್ತೆ? ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮತ್ತು ಕಾಲಕಾಲಕ್ಕೆ ಉಡುಗೊರೆಗಳನ್ನು ನೀಡುವ ಹುಡುಗರು ಹುಡುಗಿಯರನ್ನು ತಮ್ಮತ್ತ ಆಕರ್ಷಿಸುತ್ತಾರೆ.
ಮಹಿಳೆಯರ ಅಗತ್ಯಗಳು ಮತ್ತು ಅವರ ಆಸೆಗಳನ್ನು ಅರ್ಥಮಾಡಿಕೊಳ್ಳುವ ಪುರುಷರನ್ನು ಹುಡುಗಿಯರು ತುಂಬಾ ಇಷ್ಟಪಡುತ್ತಾರೆ. ತಮ್ಮ ಅರ್ಥ ಮಾಡಿಕೊಳ್ಳುವ ಒಂದು ಜೀವ ತನ್ನ ಬಳಿ ಇದೆ ಅನ್ನೋದೆ ಹುಡುಗಿಯರಿಗೆ ಖುಷಿಯ (Happy) ವಿಚಾರ ಅಲ್ವಾ?
ಪ್ರತಿಯೊಬ್ಬ ಹುಡುಗಿಗೂ ಜೀವನದಲ್ಲಿ ತನ್ನದೆ ಆದ ಗುರಿ ಇರುತ್ತೆ. ಆದರೆ ಮದುವೆ (Marriage) ಆದ ಮೇಲೆ ಅಥವಾ ತನ್ನ ಪ್ರೀತಿ ಪಾತ್ರರಿಗಾಗಿ ತನ್ನ ಗುರಿಯನ್ನು ಆಕೆ ಮರೆತುಬಿಡುತ್ತಾಳೆ. ಆದರೆ ಹೆಚ್ಚಿನ ಮಹಿಳೆಯರು ತಮ್ಮನ್ನು ಪ್ರೇರೇಪಿಸುವ ಮತ್ತು ತಮ್ಮ ಗುರಿಯನ್ನು ತಲುಪಲು ಸಹಾಯ ಮಾಡುವ ಪುರುಷನನ್ನು ಇಷ್ಟಪಡುತ್ತಾರೆ.
ವಿದೇಶಿ ನೆಲದಿಂದ ಬಂದ ಹುಡುಗರು, ವಿಭಿನ್ನ ಭಾಷೆ ಮತ್ತು ಉಚ್ಚಾರಣೆಯೊಂದಿಗೆ ಇತರರಿಗಿಂತ ವಿಭಿನ್ನ ವ್ಯಕ್ತಿತ್ವವನ್ನು(Personality) ಹೊಂದಿರುತ್ತಾರೆ. ಹೆಚ್ಚಿನ ಹುಡುಗಿಯರನ್ನು ಅಂತಹ ಯುವಕರು ತಮ್ಮ ಕಡೆಗೆ ಆಕರ್ಷಿಸುತ್ತಾರೆ. ಹುಡುಗಿಯರು ಸಹ ಇಂತಹ ಹುಡುಗರ ಸ್ಟೈಲ್ ಗೆ ಹಾಗೆ ಬಿದ್ದೋಗ್ತಾರೆ.
ತನ್ನ ಸಾಮರ್ಥ್ಯ ಮತ್ತು ಅವನ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿರುವ ವ್ಯಕ್ತಿಯನ್ನು ಯಾವ ಹುಡುಗಿ ಇಷ್ಟಪಡದೇ ಇರುತ್ತಾರೆ ಹೇಳಿ. ಹುಡುಗರ ಈ ವ್ಯಕ್ತಿತ್ವವು ಹೆಚ್ಚಿನ ಮಹಿಳೆಯರನ್ನು ಆಕರ್ಷಿಸುತ್ತೆ(Attract). ನಿಮಗೂ ಅಂತಹ ವ್ಯಕ್ತಿ ಇಷ್ಟವಾಗ್ತಾನೆ ಅಲ್ವಾ?
ತನ್ನ ಸಂಗಾತಿಯನ್ನು ಜಗತ್ತಿಗೆ ಪರಿಚಯಿಸಲು ಬಹಳ ಹೆಮ್ಮೆ ಪಡುವ ವ್ಯಕ್ತಿ ಹೆಚ್ಚಿನ ಎಲ್ಲಾ ಹುಡುಗೀರ ಆಕರ್ಷಣೆಯ ಕೇಂದ್ರ ಬಿಂದು (Centre of attraction) ಆಗಿರ್ತಾರೆ. ಆತನನ್ನು ಉತ್ತಮ ಮತ್ತು ನಿಜವಾದ ಪ್ರೇಮಿ ಎಂದು ಹೇಳಬಹುದು. ಯಾಕಂದ್ರೆ ಕಳ್ಳ ಪ್ರೇಮಿಗಳು ಯಾವತ್ತೂ ತಮ್ಮ ಸಂಗಾತಿಯನ್ನು ಪರಿಚಯಿಸೋದೆ ಇಲ್ಲ.
ಯಾವ ವ್ಯಕ್ತಿಯನ್ನು ಯಾವುದೇ ವಿಷಯದಲ್ಲಿ ನಿಲ್ಲಿಸಲು ಕಷ್ಟವಾಗುತ್ತೋ, ಅಂದರೆ ತುಂಬಾ ಖಡಕ್ ಆಗಿರೋ ವ್ಯಕ್ತಿತ್ವ ಹೊಂದಿರೋ ಹುಡುಗನ ಕಡೆಗೆ ಹೆಚ್ಚಿನ ಹುಡುಗಿಯರು ಆಕರ್ಷಿತರಾಗುತ್ತಾರೆ. ಇಲ್ಲಿ ಹೇಳಿರುವ ವ್ಯಕ್ತಿತ್ವ ಹೊಂದಿರೋ ಹುಡುಗ ನೀವಾಗಿದ್ದರೆ, ಹುಡುಗೀರು ನಿಮ್ಮ ಹಿಂದೆ ಬೀಳೋದ್ರಲ್ಲಿ ಯಾವುದೇ ಅನುಮಾನ ಬೇಡ!