ಮದುವೆ ಯಾವಾಗ? ಹೀಗೆ ಕೇಳೋರನ್ನು ನಿಭಾಯಿಸೋದು ಹೇಗೆ?

First Published | Jan 8, 2024, 5:34 PM IST

ನೀವು ಯಾವಾಗ ಮದುವೆಯಾಗುತ್ತೀರಿ? ಸಂಬಂಧಿಕರು ಕೇಳೋ ಈ ಪ್ರಶ್ನೆಗಳಿಂದ ನೀವು ತೊಂದರೆಗೀಡಾಗಿದ್ದೀರಾ? ಹಾಗಿದ್ರೆ ಇನ್ನು ಮುಂದೆ ಅದನ್ನು ಹೇಗೆ ಎದುರಿಸೋದು ಅನ್ನೋದನ್ನು ಕಲಿಯಿರಿ. 
 

ಸರಿಯಾದ ವಯಸ್ಸಿನಲ್ಲಿ ನಿಮ್ಮ ಮದುವೆಯಾಗದಿದ್ದರೆ, ಸಂಬಂಧಿಕರಿಂದ(relatives) ಪ್ರಶ್ನೆಗಳ ಸುರಿಮಳೆಯೇ ಸುರಿಯಲು ಆರಂಭವಾಗುತ್ತೆ. ವಿಶೇಷವಾಗಿ ನೀವು ತಡವಾಗಿ ಮದುವೆಯಾದಾಗ, ನೀವು ಸಂಬಂಧಿಕರಿಂದ ಕೆಟ್ಟ ಮಾತು, ನಿಂದನೆ ಕೇಳುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು  ಸಂಬಂಧಿಕರನ್ನು ಚಾಣಕ್ಷ ತನದಿಂದ ಹೇಗೆ ನಿಭಾಯಿಸಬೇಕೆಂದು ನೀವು ಕಲಿಯಬೇಕು.
 

ಭಾರತೀಯ ಮನೆಮನೆಗಳಲ್ಲೂ ಸಂಬಂಧಿಕರಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಸಂಬಂಧಿಕರನ್ನು ಜೀವನದಲ್ಲಿ ಸಂತೋಷ ಮತ್ತು ದುಃಖದ ಸಮಯದಲ್ಲಿ ನಮ್ಮ ಜೊತೆಗಿರುವವರು ಎಂದು ನೋಡಲಾಗುತ್ತದೆ. ಆದರೆ ಕೆಲವು ಸಂಬಂಧಿಕರು ನಿಮ್ಮನ್ನು ದುಃಖದಲ್ಲಿ ನೋಡಿ ಸಂತೋಷಪಡುತ್ತಾರೆ. ಅಂತಹ ಸಂಬಂಧಿಕರಿಂದ ದೂರವಿರುವುದು ಉತ್ತಮ. ಇಲ್ಲಾಂದ್ರೆ ಅಂತಹ ಜನರು ಸಣ್ಣ ಸಮಸ್ಯೆಗಳನ್ನು ತುಂಬಾ ದೊಡ್ಡದಾಗಿ ಮಾಡುತ್ತಾರೆ. 
 

Latest Videos


ಕೆಲವು ಸಂಬಂಧಿಕರು ಜೀವನದಲ್ಲಿ ಎಷ್ಟೊಂದು ಟಾಕ್ಸಿಕ್ ಆಗಿರ್ತಾರೆ ಅಂದ್ರೆ, ಅನೇಕ ಬಾರಿ ವ್ಯಕ್ತಿಯು ಈ ಸಂಬಂಧಿಕರಿಂದಲೇ ಮಾನಸಿಕವಾಗಿ ತುಂಬಾ ತೊಂದರೆಗೀಡಾಗುತ್ತಾನೆ. ವಿಶೇಷವಾಗಿ ಇದು ಮದುವೆಯ ವಿಷಯವಾಗಿದ್ದರೆ, ಅವರ ಬಾಯಿಯನ್ನು ಮುಚ್ಚಿಸೋದು ತುಂಬಾ ಕಷ್ಟ. ನೀವು ಸಹ ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಅಂತಹ ಸಂಬಂಧಿಕರನ್ನು ಯಾವ ರೀತಿ ಎದುರಿಸೋದು ಅನ್ನೋದನ್ನು ತಿಳಿಯಿರಿ. 
 

ಸಾಧ್ಯವಾದಷ್ಟು ವಿಷಯಗಳನ್ನು ನಿರ್ಲಕ್ಷಿಸಿ
ಸಂಬಂಧಿಕರಿಂದ ನಿಂದನೆಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನಿಮಗೆ ಸಾಧ್ಯವಾದಷ್ಟು ಅವರ ಮಾತುಗಳನ್ನು ನಿರ್ಲಕ್ಷಿಸುವುದು (avoid their talk). ಏಕೆಂದರೆ ಅವರಿಗೆ ನೀವು ಎದುರಿತ್ತರ ಕೊಟ್ಟರೆ, ಅವರು ಮತ್ತೆ ಮತ್ತೆ ನಿಮಗೆ ಅದೇ ವಿಷಯ ಹೇಳಿ ಹೇಳಿ ತೊಂದರೆ ನೀಡದೇ ಇರಲಾರರು.  ನಿಜವಾಗಿಯೂ ಅವರಿಗೆ ಬೇಕಾಗಿರೋದು ಏನಂದ್ರೆ, ಅವರು ಕೇಳುವ ಪ್ರತಿಯೊಂದು ಅಸಂಬದ್ಧ ಪ್ರಶ್ನೆಗೆ ನೀವು ಉತ್ತರಿಸಬೇಕು, ನಂತ್ರ ಅದರ ಬಗ್ಗೆ ನಿಮಗೆ ಪಾಠ ಮಾಡಬೇಕು. ಹಾಗಾಗಿ ಅವರ ಮಾತನ್ನು ಅವಾಯ್ಡ್ ಮಾಡೋದು ಉತ್ತಮ. 

ನಿಮ್ಮ ಅಭಿಪ್ರಾಯವನ್ನು ಅವರಿಗೆ ತಿಳಿಸಿ
ಮದುವೆಯಾಗುವುದು ಅಥವಾ ಬೇಡವೇ ಎಂಬುದು ತುಂಬಾ ವೈಯಕ್ತಿಕ ನಿರ್ಧಾರ. ಇದನ್ನು ಎಂದಿಗೂ ಯಾರ ಪ್ರಭಾವದಿಂದ ಮಾಡಬಾರದು. ಆದ್ದರಿಂದ ಸಂಬಂಧಿಕರು ಅದರ ಬಗ್ಗೆ ನಿಮ್ಮನ್ನು ಪ್ರಶ್ನೆ ಮಾಡಿದಾಗ ಅಥವಾ ವಿವಿಧ ರೀತಿಯಲ್ಲಿ ಮದುವೆಯಾಗಲು ನಿಮ್ಮ ಮೇಲೆ ಒತ್ತಡ ಹೇರಿದಾಗ, ಶಾಂತ ಮನಸ್ಸಿನಿಂದ ನಿಮ್ಮ ಅನಿಸಿಕೆ ಏನು ಅನ್ನೊದನ್ನು ಅವರಿಗೆ ಮನದಟ್ಟು (convey your opinion) ಮಾಡುವಂತೆ ತಿಳಿಸಿ.

ಸಂಬಂಧಿಕರಿಗೆ ಅವರ ಮಿತಿಗಳನ್ನು ತಿಳಿಸಿ
ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮಿತಿಗಳಿವೆ. ಆದ್ದರಿಂದ, ಸಂಬಂಧದಲ್ಲಿ ಪ್ರೀತಿ ಹಾಗೇ ಉಳಿಯಲು ಪರಸ್ಪರ ಗೌರವಿಸುವುದು ಬಹಳ ಮುಖ್ಯ , ಸಂಬಂಧಿಕರು ಇದರ ಬಗ್ಗೆ ಕಾಳಜಿ ವಹಿಸದಿದ್ದರೆ, ನಿಮ್ಮ ಜೀವನದ ಬಗ್ಗೆ ಮಾತನಾಡಲು ಅವರಿಗೆ ಯಾವ ಹಕ್ಕಿದೆ (tell their limit) ಎಂಬುದರ ಬಗ್ಗೆ ನೀವು ಅವರಿಗೆ ಅರಿವು ಮೂಡಿಸುವುದು ಮುಖ್ಯ.

ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿ
ನೀವು ಹಲವಾರು ಬಾರಿ ಉತ್ತರ ನೀಡಿದ್ದರೂ ಸಹ ನಿಮ್ಮ ಸಂಬಂಧಿಕರು ನಿಮ್ಮನ್ನು ನಿಂದಿಸುವುದನ್ನು ನಿಲ್ಲಿಸದಿದ್ದರೆ, ನೀವು ಅವರಿಗೆ ಸೂಕ್ತವಾದ ಉತ್ತರ ನೀಡಬೇಕಾಗುತ್ತದೆ. ಏಕೆಂದರೆ ಅಂತಹ ಜನರು ನಿಮ್ಮ ಬಗ್ಗೆ ಚಿಂತಿಸುವುದಿಲ್ಲ ಆದರೆ ನೀವು ಚಿಂತಿತರಾಗಿರುವುದನ್ನು ನೋಡಿ ಸಂತೋಷಪಡುತ್ತಾರೆ. ಆದ್ದರಿಂದ, ಅವರು ನಿಮ್ಮನ್ನು ಭೇಟಿಯಾದಾಗಲೆಲ್ಲಾ, ಅವರು ಖಂಡಿತವಾಗಿಯೂ ನಿಮ್ಮ ಮನಸ್ಥಿತಿಯನ್ನು ಹಾಳುಮಾಡುವ ಏನನ್ನಾದರೂ ಹೇಳುತ್ತಾರೆ. ಹಾಗಾಗಿ ನೀವೆ ಒಂದು ಸಲ ಅವರಿಗೆ ಸರಿಯಾಗಿ ಪ್ರತ್ಯುತ್ತರ ನೀಡಿ. ಮತ್ತೆಂದು ಅವರು ನಿಮ್ಮ ಮದುವೆ ಬಗ್ಗೆ ಮಾತನಾಡಲೇ ಬಾರದು, ಆ ರೀತಿ ಉತ್ತರಿಸಿ.

click me!