ಈ 3+1ರೂಲ್ ತಿಳ್ಕೊಂಡ್ರೆ ನಿಮ್ಮ ಗರ್ಲ್ ಫ್ರೆಂಡ್ ಆಗ್ಲಿ, ಹೆಂಡ್ತಿ ಆಗ್ಲಿ ನಿಮ್ಮಿಂದ ದೂರ ಹೋಗೋ ಮಾತೇ ಇಲ್ಲ

Published : Aug 06, 2024, 01:36 PM IST

ಮೋಟೀವೇಶನಲ್ ಸ್ಪೀಕರ್ (Motivational Speaker) ಆಗಿರುವ ಸೈಮನ್ ಸಿನೆಕ್ ರಿಲೇಶನ್’ಶಿಪ್ ಗೆ ಸಂಬಂಧಿಸಿದ 3 +1 ನಿಯಮವನ್ನು ವಿವರಿಸಿದ್ದಾರೆ. ಅದರಲ್ಲಿ, ಅವರು ಯಾವುದೇ ಸಂಬಂಧದ ಮೇಲೆ ಹೆಚ್ಚು ಪರಿಣಾಮ ಬೀರುವ ನಾಲ್ಕು ವಿಷ್ಯದ ಬಗ್ಗೆ ಹೇಳಿದ್ದಾರೆ. ದಂಪತಿ ಆ ನಾಲ್ಕು ವಿಷಯಗಳ ಬಗ್ಗೆ ಗಮನ ಹರಿಸಿದರೆ, ಅವರ ನಡುವೆ ಜಗಳವಾಗಲಿ, ಬ್ರೇಕಪ್ ಆಗಲಿ ಆಗೋದೆ ಇಲ್ಲ, ಎಂದಿದ್ದಾರೆ..   

PREV
17
ಈ 3+1ರೂಲ್ ತಿಳ್ಕೊಂಡ್ರೆ ನಿಮ್ಮ ಗರ್ಲ್ ಫ್ರೆಂಡ್ ಆಗ್ಲಿ, ಹೆಂಡ್ತಿ ಆಗ್ಲಿ ನಿಮ್ಮಿಂದ ದೂರ ಹೋಗೋ ಮಾತೇ ಇಲ್ಲ

ಇತ್ತಿಚಿಗೆ ದೀರ್ಘಕಾಲದವರೆಗೆ ಸಂಬಂಧವನ್ನು (long term relationship) ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಅದು ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಸಂಬಂಧವೇ ಆಗಿರಲಿ ಅಥವಾ ಗಂಡ-ಹೆಂಡತಿ ಸಂಬಂಧ ಆಗಿರಲಿ, ಎರಡೂ ರೀತಿಯ ಸಂಬಂಧಗಳು ಬಹಳ ವೇಗವಾಗಿ ಕುಸಿಯುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, 3 + 1 ನಿಯಮ ಅರ್ಥ ಮಾಡಿಕೊಳ್ಳೋದು ತುಂಬಾ ಮುಖ್ಯ. ಈ ರೂಲ್ಸ್ ಮುಂದೆ ಬರೋ ಸಮಸ್ಯೆಗಳನ್ನ ನಿವಾರಿಸೋದಕ್ಕೆ ಸಹಾಯ ಮಾಡುತ್ತೆ. 
 

27

ಲೇಖಕ ಮತ್ತು ಮೋಟೀವೇಶನಲ್ ಸ್ಪೀಕರ್ ಆಗಿರುವ ಸೈಮನ್ ಸಿನೆಕ್ ಹೇಳಿದ ಈ ನಿಯಮವನ್ನು ಸಂಬಂಧದ ಆರಂಭದಿಂದಲೇ ಅರ್ಥಮಾಡಿಕೊಂಡು ಅದನ್ನ ಫಾಲೋ ಮಾಡಿದ್ದೇ ಆದ್ರೆ, ಗರ್ಲ್ ಫ್ರೆಂಡ್ ಅಥವಾ ಹೆಂಡ್ತಿ ನಿಮ್ಮಿಂದ ದೂರ ಹೋಗೋದೆ ಇಲ್ಲ. ಹಾಗಿದ್ರೆ ಏನಿದು 3+1 ರೂಲ್  (3+1 rule) ಅನ್ನೋದನ್ನ ನೋಡೋಣ ಬನ್ನಿ. 
 

37

ಬೌದ್ಧಿಕ ಹೊಂದಾಣಿಕೆ (intellectual compatibility)
ಇದರರ್ಥ ಜೋಡಿಗಳಲ್ಲಿ ಕಲಿಯೋದು ಮತ್ತು ಕಲಿಸಿ ಕೊಡೋದರ ಬಗ್ಗೆ ಒಂದೇ ರೀತಿಯ ಪ್ರವೃತ್ತಿ ಇರಬೇಕು. ಇಬ್ಬರು ವ್ಯಕ್ತಿಗಳ ನಡುವೆ ಬೌದ್ಧಿಕ ಹೊಂದಾಣಿಕೆ ಇದ್ದಾಗ, ಅವರು ಯಾವಾಗಲೂ ಪರಸ್ಪರ ಬೆಳೆಯಲು ಸಹಾಯ ಮಾಡುತ್ತಾ, ಒಬ್ಬರಿಂದೊಬ್ಬರು ಹೊಸದನ್ನು ಕಲಿಯಲು ಪ್ರಯತ್ನಿಸುತ್ತಾರೆ. ಅವರ ನಡುವಿನ ಮಾತುಕತೆ ತುಂಬಾ ಡೀಪ್ ಆಗಿರುತ್ತೆ. ಈ ಗುಣಗಳು ಸಂಬಂಧದಲ್ಲಿ ಹೊಸತನ ಮತ್ತು ಗೌರವ ಇರುವಂತೆ ನೋಡಿಕೊಳ್ಳುತ್ತೆ. 

47

ಭಾವನಾತ್ಮಕ ಹೊಂದಾಣಿಕೆ (Emotional Compatibility)
ಯಾವುದೇ ಆರೋಗ್ಯಕರ ಸಂಬಂಧಕ್ಕೆ ಇದು ತುಂಬಾನೆ ಮುಖ್ಯ. ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸುವುದು ದಂಪತಿಗಳ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಕಪಲ್ಸ್ ಗಳ ಮಧ್ಯೆ ಭಾವನಾತ್ಮಕ ಹೊಂದಾಣಿಕೆ ಇಲ್ಲದೇ ಇದ್ದರೆ, ಆ ಸಂಬಂಧ ಹೆಚ್ಚು ಸಮಯ ಉಳಿಯೋದು ಇಲ್ಲ. 

57
Sexual Relationship

ಲೈಂಗಿಕ ಹೊಂದಾಣಿಕೆ (Sexual Compatibility)
ಸೈಮನ್ ಪ್ರಕಾರ, ಲೈಂಗಿಕ ಹೊಂದಾಣಿಕೆ ಕೇವಲ ದೈಹಿಕ ಆಕರ್ಷಣೆಯಲ್ಲ (Physical Attraction). ಲೈಂಗಿಕ ಹೊಂದಾಣಿಕೆ ಹೊಂದಿರುವ ಜೋಡಿಗಳು, ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ, ತಮ್ಮ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ ಮತ್ತು ತಮ್ಮ ಸಂಗಾತಿಗೆ ಬೇಕಾದುದನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಈ ವಿಷಯ ದಂಪತಿ ಅನ್ಯೋನ್ಯತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

67

ಹಾಗಾದರೆ ಈ +1 ರೂಲ್ ಯಾವುದು? 
ಮೇಲೆ ತಿಳಿಸಿದ ಮೂರು ಹೊಂದಾಣಿಕೆಯ ಹೊರತಾಗಿ, ಸಂಬಂಧದ ಮೇಲೆ ಹೆಚ್ಚು ಪರಿಣಾಮ ಬೀರುವ ಮತ್ತೊಂದು ಅಂಶವಿದೆ. ಅದಕ್ಕಾಗಿಯೇ ಸೈಮನ್ ಅದಕ್ಕೆ 3 +1 ಎಂದಿದ್ದಾರೆ. ಹಾಗಾದರೆ ಆ ಮುಖ್ಯವಾದ ಇನ್ನೊಂದು ರೂಲ್ ಯಾವುದು ನೋಡೋಣ. 

77

ಇದು ಸಮಯ, ಸಂದರ್ಭಗಳು ಇತ್ಯಾದಿಗಳಿಂದ ಉದ್ಭವಿಸುವ ಸ್ಥಿತಿ. ಯಾವುದೇ ದಂಪತಿಗೆ ಇದರ ಮೇಲೆ ನಿಯಂತ್ರಣವಿರೋದಿಲ್ಲ. ಆದಾಗ್ಯೂ, ಮೇಲೆ ತಿಳಿಸಿದ ಎಲ್ಲಾ ಮೂರು ವಿಷಯಗಳು ಸಂಬಂಧದಲ್ಲಿ ದೃಢವಾಗಿದ್ದರೆ, ದಂಪತಿಗಳು ಅನಿರೀಕ್ಷಿತ ಪರಿಸ್ಥಿತಿಯನ್ನು ಒಟ್ಟಿಗೆ ಎದುರಿಸಬಹುದು ಮತ್ತು ತಮ್ಮ ಸಂಬಂಧವನ್ನು (relationship) ಕಾಪಾಡಿಕೊಳ್ಳಬಹುದು.
 

Read more Photos on
click me!

Recommended Stories