ಪ್ರೀತಿ ಹುಟ್ಟಲಿ, ರೊಮ್ಯಾನ್ಸ್ ಹೆಚ್ಚಾಗಲಿ, ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಒಂದು ವಾರ ಫೈಂಡ್ ಲವ್ ರಜೆ

Published : Jul 07, 2026, 11:37 AM IST

ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸ, ಓದಿನ ಕಡಗೆ ಗಮನಹರಿಸಬೇಕು ಅನ್ನೋ ಕಾಲ ಹೋಯಿತು. ಇದೀಗ ವಿಶ್ವವಿದ್ಯಾಲ ಒಂದು ತನ್ನ ವಿದ್ಯಾರ್ಥಿಗಳಿಗೆ ಪ್ರೀತಿ , ರೊಮ್ಯಾನ್ಸ್‌ಗಾಗಿ ಒಂದು ವಾರ ರಜೆ ನೀಡಿದೆ.

PREV
16
ಪ್ರೀತಿಗಾಗಿ ಒಂದು ವಾರ ರಜೆ ಘೋಷಿಸಿದ ವಿಶ್ವವಿದ್ಯಾಲಯ

ಕಾಲೇಜು ದಿನಗಳಲ್ಲಿ ಹುಟ್ಟುವ ಪ್ರೀತಿಯ ಸಕ್ಸಸ್ ರೇಟ್ ಕಡಿಮೆ ಅಂತಾರೆ. ಓದುವ ಸಮಯದಲ್ಲಿ ಪ್ರೀತಿ ಪ್ರೇಮಕ್ಕೆ ಯಾರೂ ಅವಕಾಶ ನೀಡುವುದಿಲ್ಲ. ಆದರೆ ಇಲ್ಲೊಂದು ವಿಶ್ವಿವಿದ್ಯಾಲಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸೇರಿದಂತೆ ಎಲ್ಲರಿಗೂ ವಸಂತಕಾಲದ ರಜೆ ಘೋಷಿಸಿದೆ. ಟಾಸ್ಕ್ ಇಷ್ಟೇ ಪ್ರೀತಿ ಹುಟ್ಟಬೇಕು, ರೊಮ್ಯಾನ್ಸ್ ಶುರುವಾಗಬೇಕು. ಒಂದು ವಾರಗಳ ಕಾಲ ಫೈಂಡ್ ಲವ್ ರಜೆ ನೀಡಲಾಗುತ್ತದೆ. ಈ ಬಾರಿ ಹೋವುಗಳ ವೀಕ್ಷಿಸಿ, ಪ್ರಣಯ ಅನುಭವಿಸಿ ಅನ್ನೋ ಪರಿಕಲ್ಪನೆ ಅಡಿಯಲ್ಲಿ ರಜೆ ನೀಡಲಾಗಿದೆ. ಈ ರಜಾ ದಿನದಲ್ಲಿ ಪುಸ್ತಕ, ಓದು, ಕಲಿಕೆ ಎಲ್ಲಾ ಬದಿಗಿಟ್ಟು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಪ್ರೀತಿಯಲ್ಲಿ ಬೀಳಬೇಕು. ಅಥವಾ ಪ್ರಯತ್ನ ಮಾಡಬೇಕು. ಪ್ರೀತಿಯಲ್ಲಿದ್ದರೆ, ರೊಮ್ಯಾನ್ಸ್‌ ಪ್ರಯತ್ನಕ್ಕೆ ಕೈಹಾಕಬಹುದು.

26
ಅಡ್ಮಿಷನ್‌ಗಾಗಿ ತಡಕಾಡಿದ ಹಲವರು

ವಿಶ್ವವಿದ್ಯಾಲಯದ ಈ ಘೋಷಣೆ ಹೊರಬೀಳುತ್ತಿದ್ದಂತೆ ಇದೀಗ ಹಲವರು ಈ ವಿಶ್ವಿವಿದ್ಯಾಲಯದಲ್ಲಿ ಅಡ್ಮಿಷನ್ ಮಾಡಿಕೊಳ್ಳಲು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಆದರೆ ಈ ವಿಶ್ವಿವಿದ್ಯಾಲಯ ಇರೋದು ಚೀನಾದ ಸಿಚುವಾನ್ ವೊಕೇಶನ್ ಏವಿಯೇಶನ್ ಕಾಲೇಜಿನಲ್ಲಿ. ಪ್ರತಿ ವರ್ಷ ವಸಂತಕಾಲದ ರಜೆ ಘೋಷಿಸಾಗುತ್ತದೆ. ಇದು ಪ್ರೀತಿಗಾಗಿ,ರೊಮ್ಯನ್ಸ್‌ಗಾಗಿ ಮಾತ್ರ.

36
ಚೀನಾ ವಿಶ್ವವಿದ್ಯಾಲಯವೇ ರಜೆ ನೀಡಿದ್ದು ಯಾಕೆ?

ವಿದ್ಯಾರ್ಥಿಗಳಿಗೆ ಒಂದು ವಾರದ ಪ್ರೀತಿ ರಜೆಯಲ್ಲಿ ವಿದ್ಯಾರ್ಥಿಗಳು ಪ್ರೀತಿಯಲ್ಲಿ ಮುಳುಗಿದರೆ ಉತ್ತಮ. ಆದರೆ ಈ ರಜೆಯ ಉದ್ದೇಶ ವಿದ್ಯಾರ್ಥಿಗಳ ಪ್ರೀತಿ ಅಲ್ಲ. ಪ್ರಮುಖವಾಗಿ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರಿಗೆ ಸಿಗುವ ಸ್ವಾತಂತ್ರ್ಯವಾಗಿದೆ. ಈ ಸಮಯದಲ್ಲಿ ಮತ್ತೊಂದು ಮಗುವಿಗೆ, ಅಥವಾ ಮೊದಲ ಮಗುವಿಗೆ ಪ್ರಯತ್ನಸುವ ಸಮಯ ನೀಡುವುದಾಗಿದೆ.

46
ಚೀನಾದ ಜನನ ಪ್ರಮಾಣ ಹೆಚ್ಚಿಸಲು ಕ್ರಮ

ಚೀನಾದ ಜನನ ಪ್ರಮಾಣ ಭಾರಿ ಕುಸಿತ ಕಂಡಿದೆ.ಸತತ ನಾಲ್ಕನೇ ವರ್ಷ ಜನನ ಪ್ರಮಾಣ ಗನೀಯವಾಗಿ ಇಳಿಕೆಯಾಗುತ್ತಾ ಸಾಗಿದೆ. ಹೀಗಾಗಿ ವಿಶ್ವವಿದ್ಯಾಲಯ ಈ ಕ್ರಮ ಘೋಷಿಸಿದೆ. ಇದರಿಂದ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರಿಗೆ ಸಮಯ ಸಿಗಲಿದೆ. ಈ ಮೂಲಕ ಜನನ ಪ್ರಮಾಣ ಹೆಚ್ಚಿಸಲು ರಜೆ ನೀಡಿದೆ. ಇನ್ನು ವಿದ್ಯಾರ್ಥಿಗಳಲ್ಲಿ ಪ್ರೀತಿ ಮೂಡಿ ಮದುವೆ, ಮಕ್ಕಳು ಎಂದು ಮುಂದುವರಿದರೆ ವಿಶೇಷ ಸೌಲಭ್ಯ ನೀಡಲು ಕಾಲೇಜು ಮುಂದಾಗಿದೆ. ಪ್ರತಿ ವರ್ಷ ಎಪ್ರಿಲ್ 1 ರಿಂದ 6 ವರೆಗೆ ವಸಂತಕಾಲ ರಜೆ ನೀಡುತ್ತಿದೆ.

56
ಆರ್ಥಿಕತೆಗೆ ಉತ್ತೇಜನ

ವಿದ್ಯಾರ್ಥಿಗಳು ರಜೆಯಿಂದ ಪ್ರವಾಸ ಹೆಚ್ಚಾಗಲಿದೆ. ಆಂತರಿಕ ಆರ್ಥಿಕತೆ ಉತ್ತಮವಾಗಲಿದೆ. ವಿದ್ಯಾರ್ಥಿಗಳು, ಸಿಬ್ಬಂದಿಗಳು ಪ್ರವಾಸಕ್ಕೆ ಹಣ ಖರ್ಚು ಮಾಡಲಿದ್ದಾರೆ. ವ್ಯಾಪಾರ, ಖರೀದಿ, ಮಾರಾಟಗಳು ಹೆಚ್ಚಾಗಲಿದೆ. ಇದರಿಂದ ಆಂತರಿಕ ಆರ್ಥಿಕತೆಗೆ ಉತ್ತೇಜನ ನೀಡಲು ಸಾಧ್ಯವಿದೆ. ಹೀಗಾಗಿ ಹಲವು ಕಾರಣಗಳಿಂದ ಇದೀಗ ವಿಶ್ವವಿದ್ಯಾಲಯ ಈ ರೀತಿಯ ಪ್ರಯತ್ನ ಮಾಡುತ್ತಿದೆ.

66
ರಜೆ ಮುಗಿಸಿ ಬಂದ ಮೇಲೆ ವಿದ್ಯಾರ್ಥಿಗಳಿಗೆ ಮತ್ತೊಂದು ಟಾಸ್ಕ್

ವಿದ್ಯಾರ್ಥಿಗಳು ರಜೆ ಮುಗಿಸಿ ಬಂದ ಮೇಲೆ ವಿದ್ಯಾರ್ಥಿಗಳು ಪ್ರಕೃತಿ ಹಾಗೂ ಪ್ರೀತಿ ಕುರಿತು ವ್ಲಾಗ್,ರೀಲ್ಸ್ ಮಾಡಬೇಕು. ಅನುಭವಗಳ ವಿಡಿಯೋಗಳು, ಬರಹಗಳನ್ನು ನೀಡಬೇಕು. ಈ ಮೂಲಕ ತಮ್ಮ ಒಂದು ವಾರ ರಜೆಯನ್ನು ಅರ್ಥಪೂರ್ಣವಾಗಿ ಕಳೆಯುವಂತೆ ಮಾಡಲು ವಿಶ್ವವಿದ್ಯಾಲಯ ಕೆಲ ಪ್ರಯೋಗ ಮಾಡಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories