ಈ ಗಂಡಸರಿಗೇಕೆ ಪ್ರೀತಿಯನ್ನು ಎಕ್ಸ್‌ಪ್ರೆಸ್ ಮಾಡಲು ಬರೋಲ್ಲ?

First Published | Jan 10, 2021, 1:26 PM IST

ಪತ್ನಿಯನ್ನುತುಂಬಾನೇ ಇಷ್ಟಪಡುತ್ತೀರಿ. ಆದರೆ ಅದನ್ನು ಯಾವತ್ತಾದರೂ ಎಕ್ಸ್‌ಪ್ರೆಸ್‌ ಮಾಡಿದ್ದೀರಾ? ಅವಳು ಹೆಂಡ್ತಿ ಆಲ್ವಾ, ಯಾಕೆ ಸುಮ್ನೆ ಹೇಳೋದು ಎಂದು ಸುಮ್ಮನಿದ್ದಿರಬಹುದು. ಆಕೆಯಾದರೂ ಒಳ್ಳೆಯ ಅಥವಾ ಪತಿಯ ಫೆವರಿಟ್‌ ತಿಂಡಿ ಮಾಡಿ ಅಥವಾ ಪತಿಗೆ ತಲೆನೋವು ಎಂದಾಗ ಮಸಾಜ್‌ ಮಾಡಿ, ತನ್ನ ಪ್ರೀತಿಯನ್ನು ತೋರಿಸುತ್ತಾಳೆ. ಅದೇ ರೀತಿ ಪತಿಯಾದವರೂ ಕೂಡ ಯಾಕೆ ಮಾಡಬಾರದು? ಕೆಲವು ವಿಧಾನಗಳ ಮೂಲಕ ಪ್ರೀತಿಯನ್ನು ಅವರಿಗೆ ತೋರಿಸಬೇಕು.

ಪ್ರತಿದಿನ ಅಲ್ಲದೇ ಹೋದರೂ, ಅಪರೂಪಕ್ಕೊಮ್ಮೆಯಾದರೂ ಐ ಲವ್ ಅಂತ ಹೇಳಿ. ಆಗ ಆಕೆ ಮುಖದಲ್ಲಿ ಆಗೋ ಸಂತೋಷವನ್ನು ಗಮನಿಸಿ.
ಯಾವುದಾದರೂ ಸಮಸ್ಯೆ ಬಂದರೆ ಅವರ ಸಲಹೆಯನ್ನು ಪಡೆಯಿರಿ.
Tap to resize

ಅವರಿಗೆ ಅಡುಗೆ ಮನೆಯಲ್ಲಿ, ಮನೆ ಕ್ಲೀನ್‌ ಮಾಡಲು, ಮಕ್ಕಳನ್ನು ಹೊರಡಿಸಲು ಸಹಾಯ ಮಾಡಿ.
ಪ್ರತಿದಿನ ಒಂದು ಬಾರಿ ನಿಮ್ಮ ಪ್ರಪಂಚವೇ ಅವರೆಂಬಂತೆ ಕಿಸ್‌ ಮಾಡಿ. ಆಕೆ ತನ್ನೆಲ್ಲಾ ನೋವನ್ನೂ ಮರೆಯಬಹುದು.
ಆಕೆಗೆ ಆಕೆಯ ಕೆಲಸಕ್ಕಾಗಿ ನೀವು ಕಾಂಪ್ಲಿಮೆಂಟ್‌ ಮಾಡುತ್ತಿರಿ. ಇದರಿಂದ ಆಕೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುವ ಸಾಧ್ಯತೆ ಇದೆ.
ಪ್ರತಿದಿನ ಒಂದು ಬಾರಿಯಾದರೂ ಅವರ ಜೊತೆ ಮನ ಬಿಚ್ಚಿ ಮಾತನಾಡಿ. ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ.
ಎಷ್ಟೇ ಕೆಲಸ ಇದ್ದರೂ ಸಹ ಜೊತೆಯಾಗಿ ಊಟ ಮಾಡೋದನ್ನು ಮರೆಯಬೇಡಿ. ಒಂದೇ ತಟ್ಟೆಯಲ್ಲಿ ಊಟ ಮಾಡಿ ಇದರಿಂದ ಪ್ರೀತಿ ಹೆಚ್ಚುತ್ತದೆ
ಟಿವಿ, ಮೊಬೈಲ್‌, ಕಂಪ್ಯೂಟರ್‌, ಹೆಡ್‌ಫೋನ್‌ ಇವುಗಳನ್ನೆಲ್ಲಾ ಸ್ವಲ್ಪ ಹೊತ್ತು ಬದಿಗಿಟ್ಟು, ಪೂರ್ತಿ ಸಮಯ ಆಕೆಗಾಗಿ ಮೀಸಲಿಡಿ.
ಆಕೆ ನಿಮಗಾಗಿ, ನಿಮ್ಮ ಫ್ಯಾಮಿಲಿಗಾಗಿ ನಿಸ್ವಾರ್ಥ ಸೇವೆ ಮಾಡುತ್ತಾಳೆ. ಆದುದರಿಂದ ಆಕೆಗೆ ಪ್ರತಿದಿನ ಒಂದು ಥ್ಯಾಂಕ್ಸ್‌ ಹೇಳಲು ಮರೆಯಬೇಡಿ.
ಕೋಪ ಬಂದು ಆಕೆಗೆ ಬೈದಾಗಅಥವಾ ನಿಮ್ಮಿಂದ ಏನಾದರೂ ತಪ್ಪಾದರೆ ಕೂಡಲೆ ಆಕೆಗೆ I am sorry ಎಂದು ಕೇಳಿ.
ಪತ್ನಿಗೂ ಕೂಡ ರಿಲ್ಯಾಕ್ಸ್‌ ಬೇಕಾಗುತ್ತದೆ. ಆದುದರಿಂದ ಆಕೆಗೂ ಬೆನ್ನು, ಕಾಲು, ತಲೆಗೆ ಮಸಾಜ್‌ ಮಾಡಿ. ಇದರಿಂದ ಇಬ್ಬರಿಗೂ ಜೊತೆಯಾಗಿ ಸಮಯ ಕಳೆಯಲು ಸಿಗುತ್ತದೆ.
ಅವರಿಗೆ ಏನು ಬೇಕು ಅನ್ನೋದನ್ನು ತಿಳಿದು, ಅದನ್ನು ಅವರಿಗೆ ದೊರೆಯುವಂತೆ ಮಾಡಿ. ಅವರಿಗಾಗಿ ಸೂಪರ್‌ ಹೀರೋ ಆಗಿ.
ಆಕೆ ಏನಾದರೂಹೇಳುವಾಗ ಮಧ್ಯ ಮಾತನಾಡಬೇಡಿ. ಬದಲಾಗಿ ತಾಳ್ಮೆಯಿಂದ ಕಿವಿಗೊಡಿ.
ಆಕೆ ಬೇಜಾರಲ್ಲಿದ್ದಾಗ, ಆಕೆಗೆ ಬೋರ್‌ ಎನಿಸಿದಾಗ ನೀವು ಅವರಿಗೆ ಫ್ಲರ್ಟಿ ಮೆಸೇಜ್‌ ಕಳುಹಿಸಿ.
ಪತ್ನಿಯನ್ನು ಪ್ರೀತಿಯಿಂದ ನಿಕ್ ನೇಮ್‌ಗಳನ್ನು ಇಟ್ಟು ಕರೆಯಿರಿ, ಇದರಿಂದ ರೊಮ್ಯಾಂಟಿಕ್ ಫೀಲ್ ಇರುತ್ತದೆ. ಪ್ರೀತಿಯನ್ನು ತೋರಿಸಲು ಹಿಂದೆ ಮುಂದೆ ನೋಡಬೇಡಿ. ಬದಲಾಗಿ ಪ್ರೀತಿಯ ಧಾರೆ ಎರೆಯಿರಿ.

Latest Videos

click me!