ಸೋಶಿಯಲ್ ಮೀಡಿಯಾದಿಂದ ರೊಮ್ಯಾಂಟಿಕ್ ಲೈಫೂ ಹಾಳು!

First Published Jun 30, 2023, 1:03 PM IST

ಸಾಮಾಜಿಕ ಮಾಧ್ಯಮವು ನಿಮ್ಮ ರೊಮ್ಯಾಂಟಿಕ್ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೆಚ್ಚು ಸಾಮಾಜಿಕ ಮಾಧ್ಯಮಗಳ ಬಳಕೆಯು ಆರೋಗ್ಯಕರ ಸಂಬಂಧವನ್ನು (Healthy Relationship) ಹೇಗೆ ಹಾಳು ಮಾಡುತ್ತದೆ ಅನ್ನೋದನ್ನು ನೋಡಿ. 
 

ಸೋಶಿಯಲ್ ಮಿಡಿಯಾ ಅನ್ನೋದು ಇಂದಿನ ಜನರ ಲೈಫ್ ಸ್ಟೈಲ್ ನ ಪ್ರಮುಖ ಭಾಗವಾಗಿದೆ. ಜನ ಸೋಶಿಯಲ್ ಮೀಡೀಯಾ ಕಡೆಗೆ ಎಷ್ಟೊಂದು ಹುಚ್ಚರಾಗಿದ್ದಾರೆ ಅಂದ್ರೆ ಮಲಗಲು, ಎದ್ದೇಳಲು, ತಿನ್ನಲು, ಕುಡಿಯಲು ಎಲ್ಲವನ್ನು ಸೋಶಿಯಲ್ ಮೀಡಿಯಾದೊಂದಿಗೆ ಮಾಡ್ತಾರೆ. 

ಕೆಲವು ಜನರಿಗೆ, ಸಾಮಾಜಿಕ ಮಾಧ್ಯಮವು (social media) ಸಂತೋಷ ನೀಡುತ್ತೆ, ಉದಾಹರಣೆಗೆ ಕೆಲವರು ಸೋಶಿಯಲ್ ಮಿಡಿಯಾದಲ್ಲಿಯೇ ತಮ್ಮ ಪ್ರೇಮಿಯನ್ನು ಕಂಡುಕೊಳ್ಳುತ್ತಾರೆ ಮತ್ತು ಇನ್ನೂ ಕೆಲವರಿಗೆ ಈ ಸೋಶಿಯಲ್ ಮೀಡಿಯಾದಿಂದಲೇ ದೂರ ಸಂಬಂಧ ಸಹ ಹತ್ತಿರವಾಗುತ್ತೆ. ಆದರೆ ನಿಮ್ಮ ರೊಮ್ಯಾಂಟಿಕ್ ಜೀವನದಲ್ಲಿ (Romantic Life) ಸಾಮಾಜಿಕ ಮಾಧ್ಯಮವು ಹೇಗೆ ನಕಾರಾತ್ಮಕ ಪರಿಣಾಮ (Negiative Vibes) ಬೀರುತ್ತದೆ ಅನ್ನೋದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಹೆಚ್ಚು ಸೋಶಿಯಲ್ ಮಿಡಿಯಾ ಬಳಕೆ ಆರೋಗ್ಯಕರ ಸಂಬಂಧವನ್ನು (healthy relationship) ಹೇಗೆ ಹಾಳುಮಾಡುತ್ತದೆ ಅನ್ನೋದನ್ನು ತಿಳಿಯೋಣ. 

ಸಂಬಂಧಗಳ ಮೇಲೆ ಸೋಶಿಯಲ್ ಮಿಡಿಯಾದ ಪ್ರಭಾವ
ಅಭದ್ರತೆಯ ಭಾವ ಬೆಳೆಯುತ್ತೆ (insecurity)

ಯಾವ ಸೋಶಿಯಲ್ ಮೀಡಿಯಾ ನಿಮ್ಮನ್ನು ಯಾವಾಗಲೂ ನಿಮ್ಮ ಸಂಗಾತಿಗೆ ಹತ್ತಿರವಾಗಿಸಿತ್ತೆ, ಅದೇ ಸೋಶಿಯಲ್ ಮಿಡಿಯಾ ಜಗಳಕ್ಕೂ ಕಾರಣವಾಗುತ್ತದೆ. ಅನೇಕ ಬಾರಿ ನಾವು ಆನ್ ಲೈನ್ ನೋಡುವ ಮೂಲಕ ಯಾವುದೇ ಕಾರಣವಿಲ್ಲದೆ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸುತ್ತೇವೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ.

ಪ್ರೈವೇಸಿ ಇರೋದಿಲ್ಲ (no privacy)
ಇತ್ತೀಚಿನ ದಿನಗಳಲ್ಲಿ ಜನರ ಖಾಸಗಿ ಜೀವನವೂ ಸಾರ್ವಜನಿಕವಾಗಿದೆ. ಪರ್ಸನಲ್ ಅಂತ ಏನೂ ಇಟ್ಟುಕೊಳ್ಳೋದೆ ಇಲ್ಲ ಜನ. ತಮ್ಮ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ತಮ್ಮ ಖಾಸಗಿ ಜೀವನವನ್ನು ಸಹ ತೆರೆದಿಡುತ್ತಾರೆ. ಇದರಿಂದ ಜೀವನದಲ್ಲಿ ಪ್ರೈವೇಸಿ ಇರೋದೆ ಇಲ್ಲ. ಜೊತೆಗೆ ಎಲ್ಲವನ್ನೂ ಸೋಶಿಯಲ್ ಮಿಡೀಯಾಕ್ಕೋಸ್ಕರ ಮಾಡೊದರಿಂದ ಪ್ರೀತಿ ಉಳಿಯೋದಿಲ್ಲ. 

ಮಿಸ್ ಕಮ್ಯುನಿಕೇಷನ್ (Miss communication)
ಅನೇಕ ಬಾರಿ ನಾವು ಯಾವ ಮೂಡ್‌ನಲ್ಲಿ ಮಾತನಾಡುತ್ತಿದ್ದೇವೆ ಅನ್ನೋದು ಮೆಸೇಜ್ ಮೂಲಕ ಅರ್ಥವಾಗೋದಿಲ್ಲ. ಮೆಸೇಜ್‌ನಿಂದಾಗಿ ಇನ್ನೊಬ್ಬ ವ್ಯಕ್ತಿ ನಿಮ್ಮ ಭಾವನೆಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ತಾರೆ. ನಿಮ್ಮ ಸಂಗಾತಿಯೊಂದಿಗೆ ಆರೋಗ್ಯಕರ ಸಂಬಂಧ ಕಾಪಾಡಿಕೊಳ್ಳಲು, ಏನೆ ಮಾತುಕತೆ ನಡೆಸೋದಿದ್ರೂ ನೇರವಾಗಿ ಕುಳಿತು ಮಾತನಾಡಿ.

ಸೋಶಿಯಲ್ ಮೀಡಿಯಾ ಅಡಿಕ್ಟ್ (Social media addict)
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾಕ್ಕೆ ಅಡಿಕ್ಟ್ ಆಗಿದ್ದಾರೆ. ತಿನ್ನುವಾಗ ಜನರು ರೀಲ್ ಗಳು ಅಥವಾ ಶಾರ್ಟ್ ಗಳನ್ನು ನೋಡಿ ಸಮಯ ಕಳೆಯುತ್ತಾರೆ. ತುಂಬಾ ಸಾಮಾಜಿಕ ಮಾಧ್ಯಮಗಳ ಬಳಕೆಯು ನಿಮ್ಮ ಸಂಗಾತಿಗೆ ಕಿರಿಕಿರಿ ಉಂಟುಮಾಡಬಹುದು ಮತ್ತು ಇದು ನಿಮ್ಮ ಸಂಬಂಧವನ್ನು ಸಹ ಹಾಳುಮಾಡಬಹುದು. 

ಕಂಪೇರ್ ಮಾಡೋದು (comparing to other)
ಜನರು ನಿಜ ಜೀವನದಲ್ಲಿ ಹೇಗಿರುತ್ತಾರೋ ಗೊತ್ತಿಲ್ಲ, ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತಾವು ತುಂಬಾ ಒಳ್ಳೆಯವರೆಂದೇ ತೋರಿಸುತ್ತಾರೆ. ಅಂತಹ ವೀಡಿಯೋ ನೋಡಿದ ನಂತರ ನಾವು ನಮ್ಮ ಸಂಗಾತಿಯನ್ನು ಇತರರೊಂದಿಗೆ ಹೋಲಿಕೆ ಮಾಡಲು ಪ್ರಾರಂಭಿಸುತ್ತೇವೆ. ಈ ಕಾರಣಕ್ಕಾಗಿ, ಇಬ್ಬರ ನಡುವೆ ಜಗಳ, ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚುತ್ತದೆ. 
 

click me!