ಆನ್ ಲೈನ್ Sextortion ಎಂದರೇನು? ಸೋಷಿಯಲ್ ಮೀಡಿಯಾ ಬಗ್ಗೆ ಇರಲಿ ಎಚ್ಚರ!

First Published | Jun 28, 2023, 4:30 PM IST

ನೀವು ಸೋಶಿಯಲ್ ಮೀಡಿಯಾಗಳನ್ನು ಹೆಚ್ಚಾಗಿ ಬಳಸುತ್ತಿದ್ದರೆ, Sextortion ಬಲೆಗೆ ಬೀಳುವುದನ್ನು ತಪ್ಪಿಸಲು ನೀವು ಕೆಲವು ಸಲಹೆಗಳನ್ನ ಪಾಲಿಸಬೇಕು. ಇಲ್ಲಾಂದ್ರೆ ನೀವು ಅಪಾಯಕಾರಿ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ.
 

ಇತ್ತೀಚಿಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅದರಲ್ಲೂ ನಗ್ನ ಫೋಟೋ, ವಿಡಿಯೋ ಇಂತಹ ದಂಧೆಗಳಿಗೆ ಜನರು ಹೆಚ್ಚು ಬಲಿಯಾಗುತ್ತಿದ್ದಾರೆ. ಕೆಲವು ಸಮಯದ ಹಿಂದೆ, ಪುಣೆಯ ವೈದ್ಯರೊಬ್ಬರು Sextortion ಬಲೆಗೆ ಬಿದ್ದು, ಸಾವಿರಾರು ರೂಪಾಯಿಗಳನ್ನು ಕಳೆದುಕೊಳ್ಳಬೇಕಾಯಿತು. 
 

ವೈದ್ಯರಿಗೆ ಅಪರಿಚಿತ ನಂಬರ್ ನಿಂದ ವೀಡಿಯೊ ಕರೆ ಬಂದಿದೆ. ಅವರು ವೀಡಿಯೊ ಕಾಲ್ ಸ್ವೀಕರಿಸಿದ ಕೂಡಲೇ, ಒಬ್ಬ ಮಹಿಳೆ ಅವನ ಮುಂದೆ ತನ್ನ ಬಟ್ಟೆಗಳನ್ನು ಬಿಚ್ಚಲು ಪ್ರಾರಂಭಿಸಿದಳು. ನಂತರ ಅವರಿಗೆ ಈ ಕಾಲ್ ಸ್ಕ್ರೀನ್ ಶಾಟ್ ಕಳುಹಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದರು. ಹಾಗಿದ್ರೆ ಬನ್ನಿ ಈ ಅಪಾಯಕಾರಿ  ಆನ್ ಲೈನ್ ಸೆಕ್ಸ್’ಟಾರ್ಶನ್ ಎಂದರೇನು ಎಂದು ತಿಳಿಯೋಣ. 

Latest Videos


ಆನ್ ಲೈನ್ Sextortion ಎಂದರೇನು?
ಲೈಂಗಿಕ ಕಿರುಕುಳವು ಒಂದು ರೀತಿಯ ಸೈಬರ್ ಕ್ರೈಮ್ (cyber crime) ಆಗಿದ್ದು, ಇದರಲ್ಲಿ ವೀಡಿಯೊ ಕರೆಗಳು, ಫೋನ್ ಅಥವಾ ವೆಬ್ ಕ್ಯಾಮ್ ಮೂಲಕ ನಮ್ಮ ಅರಿವಿಗೆ ಬಾರದಂತೆ ವೈಯಕ್ತಿಕ ಚಟುವಟಿಕೆಗಳು ಅಥವಾ ಚಿತ್ರಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತದೆ.

ಸೈಬರ್ ಅಪರಾಧಿಗಳು (cyber criminals) ತಮ್ಮ ಫೋಟೋಗಳು ಮತ್ತು ವೀಡಿಯೊಗಳಂತಹ ಮಾಹಿತಿಯನ್ನು ಆನ್ ಲೈನ್ ನಲ್ಲಿ ಶೇರ್ ಮಾಡುತ್ತೇವೆ ಎಂದು ಜನರನ್ನು ಬೆದರಿಸುತ್ತಾರೆ. ಜನರ ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ಇದನ್ನು ಮಾಡಲಾಗುತ್ತೆ. ಡೇಟಿಂಗ್ ಅಪ್ಲಿಕೇಶನ್ಸ್,ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ಸ್ ಮತ್ತು ಮ್ಯಾಟ್ರಿಮೋನಿಯಲ್ ಸೈಟ್‌ಗಳ ಮೂಲಕ ಈ ದಂಧೆ ನಡೆಸಲಾಗುತ್ತಿದೆ.
 

ಜನರು ಹೇಗೆ ಮೋಸ ಹೋಗುತ್ತಾರೆ?
ಸೈಬರ್ ತಜ್ಞ ಶುಭಮ್ ಅಜಿತ್ ಸಿಂಗ್ ಅವರು ಅಪರಾಧಿಗಳು ಜನರನ್ನು ಬಲೆಗೆ ಬೀಳಿಸಲು ವಿಭಿನ್ನ ವಿಧಾನಗಳನ್ನು ಬಳಸುತ್ತಾರೆ ಎಂದು ಎಚ್ಚರಿಕೆ ನೀಡುತ್ತಾರೆ. ಅವರು ನಿಮ್ಮ ಖಾಸಗಿ ಫೋಟೋ ಅಥವಾ ವೀಡಿಯೊಗಳನ್ನು ಹುಡುಕುವ ಮೂಲಕ ಟೆಕ್ ಸಾಧನಗಳನ್ನು ಹ್ಯಾಕ್ (tech hack) ಮಾಡಬಹುದು ಅಥವಾ ಬ್ಲ್ಯಾಕ್‌ಮೇಲ್ ಮಾಡಬಹುದು. ಇದು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ನಡೆಯಬಹುದು ಎಚ್ಚರಿಕೆಯಿಂದಿರಿ.

Sextortion ತಪ್ಪಿಸುವುದು ಹೇಗೆ? 
Sextortion ತಪ್ಪಿಸಲು ಸುಲಭ ಮತ್ತು ಪ್ರಮುಖ ಸಲಹೆ ಏನಂದ್ರೆ ನೀವು ಯಾವುದೇ ಅಪರಿಚಿತ ವ್ಯಕ್ತಿಯ ಸ್ನೇಹಿತರ ಫ್ರೆಂಡ್ ರಿಕ್ವೆಸ್ಟ್ ಆಕ್ಸೆಪ್ಟ್ ಮಾಡಬಾರದು.. 
ನಿಮ್ಮ ಯಾವುದೇ ವೈಯಕ್ತಿಕ ಅಥವಾ ಗೌಪ್ಯ ಮಾಹಿತಿ ಮತ್ತು ಫೋಟೋಗಳನ್ನು ಇಂಟರ್ನೆಟ್‌ನಲ್ಲಿ ಪೋಸ್ಟ್ ಮಾಡಬೇಡಿ. ನೀವು ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಯಾವುದೇ ತಪ್ಪು ಮಾಹಿತಿ ನೋಡಿದರೆ, ತಕ್ಷಣ ರಿಪೋರ್ಟ್ ಆಯ್ಕೆಗೆ ಹೋಗಿ ದೂರು ನೀಡಿ.

ಆನ್ ಲೈನ್ ರಿಪೋರ್ಟ್ ಸಲ್ಲಿಸುವುದು ಹೇಗೆ?(Online report)
ಯಾವುದೇ ರೀತಿಯ ಸೈಬರ್ ಅಪರಾಧ ಇದ್ದರೆ, ನೀವು ಸೈಬರ್ ಅಪರಾಧ ವಿಭಾಗದಲ್ಲಿ ಎಫ್ಐಆರ್ (FIR) ದಾಖಲಿಸಬಹುದು. 'ಭಾರತದ ಗೃಹ ಸಚಿವಾಲಯ'ಕ್ಕೆ ಆನ್ ಲೈನ್‌ನಲ್ಲಿ ದೂರು ಸಲ್ಲಿಸಬಹುದು. ಇದರಿಂದ ಬೇಗ ಸಮಸ್ಯೆಯಿಂದ ಪರಿಹಾರ ಸಿಗುತ್ತೆ. 

click me!