ಕೆಲವು ಕಾರಣಗಳಿಂದ ಮದುವೆಯಾಗ್ತಿದ್ದೀರಾ ? ಈ ತಪ್ಪು ಮಾಡೋ ಮುನ್ನ ಯೋಚಿಸಿ

First Published Jun 25, 2021, 2:29 PM IST

ಜೀವನದಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ, ಆದರೆ ಒಂದು ವಯಸ್ಸಿನ ನಂತರ ಪೋಷಕರು ಹೆಚ್ಚು ಒತ್ತಾಯಿಸುವ ಒಂದು ವಿಷಯ ಎಂದರೆ ಮದುವೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಜೀವನದಲ್ಲಿ ಸೆಟಲ್ ಆಗಬೇಕು ಮತ್ತು ಸಂತೋಷದ ಜೀವನವನ್ನು ನಡೆಸಬೇಕೆಂದು ಬಯಸುತ್ತಾರೆ. ಆದಾಗ್ಯೂ, ಎಲ್ಲರ ಸಂತೋಷವು ಮದುವೆಯಲ್ಲಿ ಕೊನೆಗೊಳ್ಳುವುದು ಅವಶ್ಯಕವಾಗಿ ಇಲ್ಲ. ಅನೇಕ ಜನರು ಜೀವನದಲ್ಲಿ ವಿಭಿನ್ನ ಸನ್ನಿವೇಶಗಳನ್ನು ಎದುರಿಸುತ್ತಾರೆ, ಕೆಲವರು ವೃತ್ತಿಜೀವನದ ಬಗ್ಗೆ ಚಿಂತಿತರಾಗಿದ್ದಾರೆ, ಕೆಲವರು ಬ್ರೇಕ್ ಅಪ್ ನಂತರ ತಮ್ಮನ್ನು ತಾವು ನಿಭಾಯಿಸುತ್ತಿದ್ದಾರೆ ಅಥವಾ ಇನ್ನು ಕೆಲವರು ಒಂಟಿಯಾಗಿರಲು ಇಷ್ಟಪಡುತ್ತಾರೆ.

ಮಹಿಳೆಯರಿಗೆ ಹೆಚ್ಚಾಗಿ ಮದುವೆಯ ಬಗ್ಗೆ ಯೋಚನೆ ಮಾಡುವಂತಹ ಸಂದರ್ಭ ಬರುತ್ತದೆ. ಕೆಲವೊಮ್ಮೆ ಅದು ಮನೆಯವರ ಒತ್ತಾಯಕ್ಕಾಗಿ ಅಥವಾ ಇನ್ಯಾವುದೋ ವಿಚಾರವಾಗಿ ಮದುವೆ ಆಗಬೇಕಾಗುತ್ತೆ. ಈ ರೀತಿಯಾಗಿ ಮದುವೆಯಾಗುವುದು ವೈವಾಹಿಕ ಜೀವನ ಮತ್ತು ಸಂಗಾತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿಮ್ಮ ಈ ನಿರ್ಧಾರದಿಂದ ಮುಂದೊಂದು ದಿನ ನೀವೇ ವಿಷಾದಿಸುವುದಲ್ಲದೆ, ವೈವಾಹಿಕ ಜೀವನಲ್ಲಿ ಸಮಸ್ಯೆಗಳು ಉಂಟಾಗುತ್ತವೆ.
undefined
ಪೋಷಕರ ಸಂತೋಷಕ್ಕಾಗಿ ಮದುವೆಯಾಗಬೇಡಿ:ನಾವು ಹೋದಮೇಲೆ ಮಕ್ಕಳ ಗತಿ ಏನು ಎಂದು ಪ್ರತಿಯೊಬ್ಬ ಪೋಷಕರು ಸಹ ಯೋಚನೆ ಮಾಡುತ್ತಾರೆ. ಮದುವೆ ಜೀವನಕ್ಕೆ ಓರ್ವ ಸಂಗಾತಿಯನ್ನು ನೀಡುವುದು ಮಾತ್ರವಲ್ಲದೆ, ಜೀವನವನ್ನು ಸುಲಭಗೊಳಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಸಹಜವಾಗಿ, ಇದು ಸಂಭವಿಸಬಹುದು, ಆದರೆ ಬಲವಂತದ ಕ್ರಿಯೆಗಳು ಸಂತೋಷ ಮತ್ತು ಯಶಸ್ಸನ್ನು ತರುವುದಿಲ್ಲ. ಹೆತ್ತವರ ಸಂತೋಷ ಮತ್ತು ಮನಸ್ಸನ್ನು ನೋಯಿಸದಿರಲು ಮದುವೆಗೆ ಓಕೇ ಎಂದು ಹೇಳಬಹುದು, ಆದರೆ ಅಂತಹ ಸಂಬಂಧವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ.
undefined
ಮದುವೆಯಂತಹ ಸಂಬಂಧದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ, ನಂತರ ನೀವು ಸಾಕಷ್ಟು ಜವಾಬ್ದಾರಿಗಳ ಹೊರೆಯನ್ನು ಹೊರಬೇಕಾಗುತ್ತದೆ. ಆದ್ದರಿಂದಲೇ ಕೆಲವೊಮ್ಮೆ ಸಂಗಾತಿಗಳು ಮದುವೆಯ ನಂತರವೂ ಪರಸ್ಪರ ಆರಾಮವಾಗಿರುವುದಿಲ್ಲ. ಇದರಿಂದಾಗಿ ಜೀವನದುದ್ದಕ್ಕೂ ಅವರ ಮನಸ್ಸನ್ನು ನೋಯಿಸುತ್ತಲೇ ಇರುತ್ತದೆ ಮತ್ತು ವಿಚ್ಛೇದನದಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ.
undefined
ಬ್ರೇಕ್ ಅಪ್ ನಿಂದ ಚೇತರಿಸಿಕೊಳ್ಳಲು ಮದುವೆ :ಬ್ರೇಕ್ ಅಪ್ ನಂತರ ಜನರು ಕೆಟ್ಟದಾದ ಅನುಭವ ಎದುರಿಸುತ್ತಾರೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಅದರಿಂದ ಹೊರಬರಲು ಅವರು ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ, ಮತ್ತು ಒಂದು ವೇಳೆ ಮಾಜಿ ಪ್ರೇಮಿಗೆ ಮದುವೆಯಾದರೆ, ಅವನ ಎದುರು ಚೆನ್ನಾಗಿ ಇದ್ದು ತೋರಿಸಬೇಕು ಅಂತಹ ನಿರ್ಧಾರವನ್ನು ತಾವು ತೆಗೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ಹಿಂದಿನ ಸಂಬಂಧದ ನೋವಿನಿಂದ ಹೊರಬರಲು ಮದುವೆಯಾಗುವುದು ಯಾವ ವಿಧದಲ್ಲೂ ಸಹಾಯ ಮಾಡಲು ಸಾಧ್ಯವಿಲ್ಲ.
undefined
ಬ್ರೇಕ್ ಅಪ್ ನಿಂದ ಹೊರಬರಲು, ಮಾಜಿ ಸಂಗಾತಿಯನ್ನು ಎಲ್ಲಾ ನೆನಪುಗಳಿಂದ ಅಳಿಸುವುದು ಮತ್ತು ನಿಮ್ಮೊಳಗಿನ ಕಹಿಯನ್ನು ತೆಗೆದುಹಾಕಲು ಸ್ವಲ್ಪ ಸಮಯ ನೀಡುವುದು ಅಗತ್ಯವಾಗಿದೆ. ಮಾಜಿ ಸಂಗಾತಿಯ ಅದೇ ಒತ್ತಡ ಮತ್ತು ನೆನಪುಗಳೊಂದಿಗೆ ಮದುವೆಯಾದರೆ, ಅಂತಹ ಸಂಬಂಧವು ನಿಮ್ಮ ಹಿಂದಿನ ಸಂಬಂಧದಂತೆ ಮುರಿದು ಹೋಗಬಹುದು.
undefined
ಸಹೋದರಿಯರ ಮದುವೆಗೆ ವಿಳಂಬ:ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳ ಮದುವೆಯ ಕಾಳಜಿಯು ಪೋಷಕರನ್ನು ಮೊದಲು ಕಾಡುತ್ತದೆ. ಸಾಮಾನ್ಯವಾಗಿ ಹುಡುಗರಿಗಿಂತ ಹುಡುಗಿಯರು ಸ್ವಲ್ಪ ಬೇಗ ಮದುವೆಯಾಗುತ್ತಾರೆ. ನೀವು ಮನೆಯಲ್ಲಿ ದೊಡ್ಡವರಾಗಿದ್ದರೆ, ಪೋಷಕರು, ಸಹಜವಾಗಿ, ನಿಮ್ಮನ್ನು ಮೊದಲು ಮದುವೆಯಾಗುವುದನ್ನು ಪರಿಗಣಿಸಿ, ನಂತರ ನಿಮ್ಮ ಉಳಿದ ಒಡಹುಟ್ಟಿದವರಿಗೆ ಮದುವೆ ಮಾಡುತ್ತಾರೆ. ನೀವು ಮದುವೆಯಾದರೆ ಮಾತ್ರ ಸಹೋದರಿಯರಿಗೆ ಮದುವೆ ಮಾಡಲು ಸಾಧ್ಯ ಎಂದು ಒತ್ತಡ ಹೇರುತ್ತಿದ್ದರೆ ಮತ್ತು ಆ ಅಸಹಾಯಕತೆಯಲ್ಲಿ ಜೀವನದ ಇಷ್ಟು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ ಎನ್ನುವುದರಲ್ಲಿ ಅರ್ಥವಿಲ್ಲ.
undefined
ಮದುವೆಯಂತಹ ದೊಡ್ಡ ಜವಾಬ್ದಾರಿಗೆ ನೀವು ಸಿದ್ಧರಾಗದ ಹೊರತು ಭಾವನೆಗಳಿಂದ ದೂರಹೋಗಬೇಡಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮತ್ತು ಅವರ ಸಂಬಂಧವನ್ನು ಹಾಳಾಗಬಹುದು. ಮೊದಲು ಸಹೋದರಿಯರಿಗೆ ಮದುವೆ ಮಾಡುವಂತೆ ಹೇಳಿ, ಇದರಲ್ಲಿ ತಪ್ಪೇನಿಲ್ಲ ಎಂದು ಮನವರಿಕೆ ಮಾಡಿಕೊಡಿ.
undefined
ಸಾಮಾಜಿಕ ಸ್ಥಾನಮಾನ :ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸ್ಥಾನಮಾನವನ್ನು ಸಹ ದೊಡ್ಡ ವಿಷಯವೆಂದು ಪರಿಗಣಿಸಲಾಗಿದೆ. ನಿಮ್ಮ ಸ್ನೇಹಿತರೆಲ್ಲರೂ ಒಂದು ವಯಸ್ಸಿನ ನಂತರ ಮದುವೆಯಾಗಿದ್ದರೆ, ನೀವು ಮದುವೆಯಾಗಲು ಬಯಸದಿದ್ದರೂ, ಜನರ ಮಾತುಗಳು ನಿಮ್ಮನ್ನು ಹಾಗೆ ಮಾಡುತ್ತವೆ. 'ವೃದ್ಧಾಪ್ಯದಲ್ಲಿ ಮದುವೆಯಾಗುತ್ತೀರಾ?', 'ನೀವು ಇನ್ನೂ ಮದುವೆಯಾಗಿಲ್ಲವೇ?' ಅಥವಾ 'ನಿಮಗೆ ಒಂದು ಹುಡುಗಹುಡುಗಿ ಸಿಗುವುದಿಲ್ಲ ಎಂದು ತೋರುತ್ತಿದೆ' ಎಂದು ಅನೇಕರು ಮೂದಲಿಸಬಹುದು, ಅದಕ್ಕಾಗಿ ಜೀವನದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ ಎನ್ನುವುದು ಸರಿಯಲ್ಲ.
undefined
ಜಗತ್ತಿಗೆ ತೋರಿಸಲು ನೀವು ಮದುವೆಯಾಗಬಹುದು, ಆದರೆ ನೀವು ಅದನ್ನು ಚೆನ್ನಾಗಿ ಮುನ್ನಡೆಸಿಕೊಂಡು ಹೋಗಲು ಅವರಿಗೆ ಸಾಧ್ಯವಿಲ್ಲ. ವೈವಾಹಿಕ ಸ್ಥಾನಮಾನಕ್ಕಾಗಿ ಅಲ್ಲ, ಮನಸ್ಸಿನ ಸಂತೋಷಕ್ಕಾಗಿ ಮದುವೆ ಆಗಬೇಕು ಎಂದು ಜನರಿಗೆ ಮನವರಿಕೆ ಮಾಡಿದಾಗ, ಅವರು ಖಂಡಿತವಾಗಿಯೂ ನೀವು ಹೇಳುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
undefined
click me!