ಮದುವೆ (marriage) ಬಂಧವು ತುಂಬಾ ದುರ್ಬಲವಾಗಿದ್ರೆ, ಇದನ್ನು ಸಾಕಷ್ಟು ಪ್ರೀತಿ ಮತ್ತು ವಿಶ್ವಾಸದೊಂದಿಗೆ ಜೋಡಿಸಬೇಕಾಗುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ದುರ್ಬಲಗೊಂಡರೆ, ಸಂಬಂಧವು ಮುರಿದು ಬೀಳುವುದು ಸಾಮಾನ್ಯ. ಅದೇ ಸಮಯದಲ್ಲಿ, ಕೆಲವು ಸಂದರ್ಭಗಳಲ್ಲಿ, ವಿಷಯ ವಿಚ್ಛೇದನದವರೆಗೂ ತಲುಪುತ್ತದೆ, ಕೆಲವೊಮ್ಮೆ ಏನಾಗುತ್ತೆ ಅಂದ್ರೆ, ಸಂಗಾತಿಯೂ ನಿಮ್ಮನ್ನು ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತಾನೋ? ಅಥವಾ ಜೊತೆಯಾಗಿರುತ್ತಾನೋ ಅನ್ನೋದನ್ನು ಅರ್ಥ ಮಾಡಿಕೊಳ್ಳಲು ಸಹ ಕಷ್ಟಪಡಬೇಕಾಗುತ್ತೆ. ಕೆಲವೊಮ್ಮೆ ಸಂಬಂಧವನ್ನು ಅರ್ಥಮಾಡಿಕೊಳ್ಳೋದೆ ತುಂಬಾ ಕಷ್ಟ. ಇದರಿಂದ ಅಂತರ ಉಂಟಾಗಿ ಬೇರೆ ಬೇರೆಯಾಗುವ ಸಾಧ್ಯತೆ ಕೂಡ ಇದೆ.