ಒಂದು ಗಂಟೆಗೆ ಎಷ್ಟು ಸಂಪಾದಿಸ್ತೀಯಾ? ಮಗನ ಪ್ರಶ್ನೆ ಹಿಂದಿರೋ ಕಾರಣ ಕೇಳಿ ತಂದೆ ಕಣ್ಣೀರು

Published : Jun 08, 2026, 03:16 PM IST

ಮಕ್ಕಳು ಆಗಾಗ ಪ್ರಶ್ನೆ ಕೇಳ್ತಿರುತ್ತಾರೆ. ಬಹುತೇಕ ಬಾರಿ ಮಕ್ಕಳ ಮಾತನ್ನು ಪಾಲಕರು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಮುಗ್ದ ಮಗು ಕೇಳುವ ಪ್ರಶ್ನೆಯನ್ನು ಕಿವಿಗೊಟ್ಟು ಕೇಳಿದಾಗ ಅದ್ರ ಆಳ ತಿಳಿಯುತ್ತೆ. ಪಾಲಕರು ಮಾಡುವ ತಪ್ಪುಗಳು ಅರಿವಿಗೆ ಬರುತ್ತೆ. 

PREV
15
ಮುಗ್ದ ಮಗು

ಮಕ್ಕಳು ಮುಗ್ದರು. ಕಣ್ಮುಂದೆ ಕಾಣುವ ವಸ್ತು, ವಿಷ್ಯ, ಘಟನೆ ಬಗ್ಗೆ ಅವರು ಪ್ರಶ್ನೆಗಳನ್ನು ಕೇಳ್ತಿರುತ್ತಾರೆ. ಆದ್ರೆ ಪಾಲಕರಿಗೆ ಇದು ಕಿರಿಕಿರಿ ನೀಡುತ್ತದೆ. ಈಗ ಪ್ರತಿಯೊಬ್ಬರೂ ಸಮಯದ ಹಿಂದೆ ಓಡ್ತಿದ್ದಾರೆ. ಕೆಲ್ಸ, ಹಣ, ಅಧಿಕಾರದ ಗುಂಗಿನಲ್ಲಿ ಪವಿತ್ರ ಸಂಬಂಧಗಳನ್ನು ಮರೆಯುತ್ತಿದ್ದಾರೆ. ಮಗು ಹಾಗೂ ಪಾಲಕರ ಅಮೂಲ್ಯ ಸಂಬಂಧದ ಬಗ್ಗೆ ಮೋಟಿವೇಷನಲ್ ಸ್ಪೀಕರ್ ಡಾ. ಉಜ್ವಲ್ ಪಟ್ನಿ ಭಾವನಾತ್ಮಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.

25
ಅಪ್ಪನಿಗೆ ಮಗನ ಪ್ರಶ್ನೆ

8 ವರ್ಷದ ಮಗುವೊಂದು ಬಾಗಿಲ ಬಳಿ ನಿಂತು ರಾತ್ರಿ ಅಪ್ಪ ಬರುವುದನ್ನು ಕಾಯ್ತಿರುತ್ತಾರೆ. ಅಪ್ಪ ಬರ್ತಿದ್ದಂತೆ, ಅಪ್ಪಾ, ನೀವು ಒಂದು ಗಂಟೆಯಲ್ಲಿ ಎಷ್ಟು ಸಂಪಾದಿಸುತ್ತೀರಿ ಅಂತ ಕೇಳುತ್ತಾನೆ. ಮಗನ ಪ್ರಶ್ನೆಗೆ ಕೋಪಗೊಳ್ಳುವ ತಂದೆ ಕಿರಿಕಿರಿಯಲ್ಲೇ ಅಸಂಬದ್ಧ ಪ್ರಶ್ನೆ ಕೇಳ್ತಿದ್ದೀಯಾ ಅಂತ ಬೈತಾರೆ. ಮಗು ಬಿಡೋದಿಲ್ಲ. ಮಗು ಮತ್ತೆ ಅದೇ ಪ್ರಶ್ನೆ ಕೇಳುತ್ತದೆ. ಅದಕ್ಕೆ ತಂದೆ, ಒಂದು ಗಂಟೆಗೆ 1 ಸಾವಿರ ಅಂತ ಉತ್ತರ ಹೇಳಿ ರೂಮಿಗೆ ಹೋಗ್ತಾನೆ.

35
ಅಪ್ಪನ ಕೈಗೆ ದುಡ್ಡು

ಮಗು ಕೂಡ ರೂಮಿಗೆ ಹೋಗಿ, ತನ್ನ ಪಿಗ್ಗಿಯಲ್ಲಿರುವ ಹಣವನ್ನು ಒಟ್ಟು ಮಾಡುತ್ತೆ. ಕೈಗೆ ಸಿಕ್ಕ ಒಂದಿಷ್ಟು ನೋಟು, ನಾಣ್ಯ ಹಿಡಿದು ಅಳುತ್ತಾ ಅಪ್ಪನ ಬಳಿ ಬರುತ್ತೆ. ತಂದೆಗೆ ಹಣ ನೀಡಿ ಅಪ್ಪಾ, ನನ್ನ ಬಳಿ ಈಗ 1,000 ರೂಪಾಯಿಗಳಿವೆ. ನಾಳೆ ಒಂದು ಗಂಟೆ ನನಗೆ ನೀಡ್ಬಹುದಾ? ನಾನು ನಿಮ್ಮ ಜೊತೆ ಕುಳಿತು ಊಟ ಮಾಡಲು ಇಷ್ಟಪಡ್ತಿದ್ದೇನೆ ಎನ್ನುತ್ತದೆ.

45
ಮಗನ ಮಾತಿಗೆ ಕಣ್ಣೀರಿಟ್ಟ ತಂದೆ

ಮಗನ ಮಾತು ಕೇಳಿದ ತಂದೆ ಅಚ್ಚರಿಗೊಳಗಾಗ್ತಾನೆ. ಕಣ್ಣಲ್ಲಿ ನೀರು ತುಂಬಿ ಬರುತ್ತೆ. ಮಗನ ಒಂದು ಪ್ರಶ್ನೆ ತಂದೆಯ ಕಣ್ಣು ತೆರೆಸುತ್ತೆ. ಹಣ ಮತ್ತು ಯಶಸ್ಸಿನ ಓಟದಲ್ಲಿ ಮಗನ ಬಾಲ್ಯ ಹಾಗೂ ಅವನ ಜೊತೆ ಕಳೆಯಬೇಕಾಗಿದ್ದ ಅಮೂಲ್ಯ ಕ್ಷಣಗಳನ್ನು ಮಿಸ್ ಮಾಡಿಕೊಳ್ತಿರುವ ನೋವು ಕಾಡುತ್ತದೆ. ತಾನು ಮಾಡ್ತಿರುವ ತಪ್ಪಿನ ಅರಿವಾಗುತ್ತದೆ.

55
ಸಮಯ ಮೀರವ ಮುನ್ನ ಮಕ್ಕಳಿಗೆ ಸಮಯ ನೀಡಿ

ಹಣದ ಜೊತೆ ಮಕ್ಕಳ ಬಾಲ್ಯ ಅಮೂಲ್ಯವಾದದ್ದು. ಹಣದ ಓಟದಲ್ಲಿ ಲುಕಿಕೊಳ್ಳದಂತೆ ಎಚ್ಚರ ವಹಿಸಬೇಕು. ನಿಮ್ಮ ಮಕ್ಕಳಿಗೆ ಸಾಕಷ್ಟು ಪ್ರೀತಿ, ವಾತ್ಸಲ್ಯ ಮತ್ತು ಸಮಯವನ್ನು ನೀಡಿ. ಬಿಡುವಿಲ್ಲದ ಜೀವನದಿಂದ ಸ್ವಲ್ಪ ಸಮಯವನ್ನು ಮಕ್ಕಳಿಗೆ ಮೀಸಲಿಡಿ. ಕಳೆದು ಹೋದ ಬಾಲ್ಯ ಎಂದಿಗೂ ಬರೋದಿಲ್ಲ. ಮಕ್ಕಳು ದೊಡ್ಡವರಾದ್ಮೇಲೆ ಬಾಲ್ಯ ನೆನೆದು ಮರುಗುವ ಬದಲು ತಡವಾಗುವ ಮೊದಲೇ ಎಚ್ಚೆತ್ತುಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories