ಅಂದು ಆ್ಯಂಕರ್​ ಅನುಶ್ರೀ, ಇಂದು ಸೋನು ಗೌಡ; ಮಂಚದ ವಿಷ್ಯ ಪದೇಪದೇ ಬರೋದ್ಯಾಕೆ

Published : Jun 07, 2026, 06:24 PM IST

ಯಶಸ್ಸು ಗಳಿಸಿದ ಮಹಿಳೆಯರನ್ನು, ವಿಶೇಷವಾಗಿ  ಸೆಲೆಬ್ರಿಟಿಗಳನ್ನು ಜನರು ಹೇಗೆ ಅನುಮಾನದಿಂದ ನೋಡುತ್ತಾರೆ ಎಂಬುದನ್ನು  ಲೇಖನ ವಿವರಿಸುತ್ತದೆ.  ಕಠಿಣ ಪರಿಶ್ರಮದಿಂದ ಯಶಸ್ಸು ಕಂಡಾಗ,  ಸಾಧನೆಯನ್ನು 'ಮಂಚದ ವಿಷಯ'ಕ್ಕೆ ತಳಕು ಹಾಕುವ ನೋವಿನ ಬಗ್ಗೆ ನಟಿಯರು  ಅಳಲನ್ನು ತೋಡಿಕೊಂಡಿದ್ದಾರೆ.

PREV
18
ಹೆಣ್ಣು ಸಾಧನೆ ಮಾಡಿದರೆ...

ಒಬ್ಬ ಹೆಣ್ಣು ಸಾಧನೆ ಮಾಡಿದರೆ, ಅದರ ಹಿಂದೆ ಕಥೆ ಕಟ್ಟುವವರ ಸಂಖ್ಯೆ ದೊಡ್ಡದಾಗಿಯೇ ಇದೆ. ಅದೆಷ್ಟೋ ಮಂದಿ ಜೀವನದಲ್ಲಿ ನೊಂದು ಬೆಂದು ಕೊನೆಗೆ ಹೇಗೇಗೋ ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಒಂದಷ್ಟು ಹೆಸರು, ಒಂದಿಷ್ಟು ದುಡ್ಡು ಮಾಡಿ ಸ್ವಲ್ಪ ಐಷಾರಾಮಿ ಜೀವನ ನಡೆಸಿದರಂತೂ ಮುಗಿದೇ ಹೋಯ್ತು. ಸೆಲೆಬ್ರಿಟಿಗಳಾಗಿದ್ದರಂತೂ ಅವರ ಬಗ್ಗೆ ಆಡುವ ಮಾತುಗಳಿಗೆ ಬೀಗವೇ ಇರುವುದಿಲ್ಲ. ನೇರವಾಗಿ ಪ್ರಸ್ತಾಪ ಆಗುವುದು ಮಂಚದ ವಿಷ್ಯವೇ.

28
ಅಸಾಧಾರಣ ಪ್ರತಿಭೆ

ಕೆಲ ತಿಂಗಳ ಹಿಂದೆ ಆ್ಯಂಕರ್​ ಅನುಶ್ರೀ ಅವರು ಇದೇ ವಿಷಯವಾಗಿ ತುಂಬಾ ನೊಂದುಕೊಂಡು ಮಾತನಾಡಿದ್ದರು. ಅಷ್ಟಕ್ಕೂ ಅನುಶ್ರೀ ಅವರು ಈ ಮಟ್ಟದಲ್ಲಿ ಹೆಸರು ಮಾಡಬೇಕು ಎಂದರೆ ಅದರ ಹಿಂದಿರುವ ಪರಿಶ್ರಮ ಅಷ್ಟಿಷ್ಟಲ್ಲ. ಒಂದು ಹೊತ್ತು ಊಟಕ್ಕೂ ತೊಂದರೆ ಪಟ್ಟಿದ್ದ ನಟಿ, ಈ ಮಟ್ಟದಲ್ಲಿ ಬೆಳೆಯಲು ಹೇಗೆಲ್ಲಾ ಶ್ರಮಿಸಿದ್ದಾರೆ ಎನ್ನುವ ಬಗ್ಗೆ ಎಷ್ಟೋ ಸಂದರ್ಭಗಳಲ್ಲಿ ಅನುಶ್ರೀ ಮಾತನಾಡಿದ್ದು ಉಂಟು. ಹುಟ್ಟಿಸಿದ ಅಪ್ಪ ನಡುನೀರಿನಲ್ಲಿ ಕೈಬಿಟ್ಟಾಗ ಪಟ್ಟ ವ್ಯಥೆಯ ಬಗ್ಗೆ ಮಾತನಾಡಿದ್ದಾರೆ.

38
ಅನುಶ್ರೀ ನೋವಿನ ಮಾತು

ಆದರೆ ಆ ಎಲ್ಲಾ ನೋವನ್ನು ಮರೆತು ಇಂದು ರಿಯಾಲಿಟಿ ಷೋಗಳಲ್ಲಿ ನಂಬರ್​ 1 ಆ್ಯಂಕರ್​ ಆಗಿ ಮಿಂಚುತ್ತಾ, ಎಲ್ಲರನ್ನೂ ನಗಿಸಿದರೆ ಅದೆಷ್ಟೋ ಮಂದಿಗೆ ಹೊಟ್ಟೆ ಉರಿ. ಜೀವನದಲ್ಲಿ ಎಷ್ಟೊಂದು ಕಷ್ಟಗಳನ್ನು ಅನುಭವಿಸಿ, ಮೇಲಕ್ಕೆ ಬಂದ ಹೆಣ್ಣುಮಗಳೊಬ್ಬಳಿಗೆ ಜನರು ಇಲ್ಲಸಲ್ಲದ ಪಟ್ಟ ಕಟ್ಟಿದಾಗ, ಕೆಟ್ಟ ಕೆಟ್ಟ ಕಮೆಂಟ್ಸ್​ಗಳಿಂದ ಮಾತನಾಡಿದಾಗ, ವೇದಿಕೆಯ ಮೇಲೆ ನಗುನಗುತ್ತಾ ಎಲ್ಲರನ್ನೂ ನಗಿಸುತ್ತಾ ಇರುವ ಹಿಂದಿನ ನೋವನ್ನು ತಿಳಿಯದೇ ಆಕೆಯ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದಾಗ ಅದೆಂಥ ನೋವು ಆಗುತ್ತದೆ ಎನ್ನುವ ಬಗ್ಗೆ ಆ್ಯಂಕರ್​ ಅನುಶ್ರೀ ಅವರು ಆರ್​ಜೆ ಮಯೂರ ಅವರ ಚಾನೆಲ್​ನಲ್ಲಿ ಮಾತನಾಡಿದ್ದರು. ಇದನ್ನು ಅವರು ಮೆಂಟಲ್​ ರೇಪ್​ ಎಂದು ಕರೆದಿದ್ದರು.

48
ಹೆಣ್ಣು ಮನೆ ತಗೊಂಡ್ರೆ...

ಗಂಡಸೊಬ್ಬ ಒಂದು ಕೋಟಿ ಮನೆ ತೆಗೆದುಕೊಂಡರೆ ಅದು ಸಾಧನೆ, ಅದೇ ಅನುಶ್ರೀ ಒಂದು ಕೋಟಿ ಮನೆ ತೆಗೆದುಕೊಂಡ್ರೆ ಗೊತ್ತಾಯ್ತು ಬಿಡಿ... ಅದು ಬೇರೆನೇ ಎಂದು ಮಾತನಾಡುತ್ತಾರೆ. ಇಲ್ಲಿ ನೇರವಾಗಿ ಬರುವುದು ಮಂಚದ ವಿಷ್ಯವೇ ಎಂದು ಅನುಶ್ರೀ ಪರೋಕ್ಷವಾಗಿ ನುಡಿದಿದ್ದರು. ಇದು ಅನುಶ್ರೀ ಒಬ್ಬಳ ಮಾತಲ್ಲ, ಹೆಚ್ಚಿನ ಹೆಣ್ಣುಮಕ್ಕಳಿಗೆ ಆಗ್ತಿರೋದು ಇದನ್ನೇ. ಆಕೆಯನ್ನು ಸಮಾಜ ಯಾವ ರೀತಿ ನೋಡುತ್ತದೆ ಎನ್ನುವ ಬಗ್ಗೆ ಈ ಸಂದರ್ಶನದಲ್ಲಿ ಅನುಶ್ರಿ ಹೇಳಿದ್ದರು.

58
ಬೋಲ್ಡ್​ ದೃಶ್ಯಗಳ ಬೆಡಗಿ

ಇದೀಗ ತಮ್ಮ ಬೋಲ್ಡ್​ ದೃಶ್ಯಗಳಿಂದಲೇ, ಅರೆಬರೆ ಡ್ರೆಸ್​ಗಳಿಂದಲೇ ಫೇಮಸ್​ ಆಗಿರೋ ಸೋನು ಶ್ರೀನಿವಾಸ ಗೌಡ (Sonu Shreenivasa Gowda) ಅವರೂ ಇದೇ ಮಾತನ್ನು ಹೇಳಿದ್ದಾರೆ. ಸೋನು ಗೌಡ ಎಂದರೆ ಸಾಕು ಪಡ್ಡೆ ಹುಡುಗರ ಕಣ್ಣುಗಳು ಅರಳುತ್ತವೆ. ಏಕೆಂದರೆ ಬಿಂದಾಸ್​ ಆಗಿ ಯಾರಿಗೂ ಹೆದರದೇ ವಿಡಿಯೋ ಮಾಡುವ ಮೂಲಕ ಫೇಮಸ್​ ಆಗಿರುವವರು ಸೋನು ಗೌಡ.

68
ವಿಭಿನ್ನ ರೀತಿಯ ಟ್ಯಾಲೆಂಟ್​ ಸೋನು ಗೌಡರದ್ದು!

ಆ್ಯಂಕರ್​ ಅನುಶ್ರೀ ಅವರದ್ದೇ ಒಂದು ರೀತಿಯ ಟ್ಯಾಲೆಂಟ್​ ಆಗಿದ್ದರೆ, ಸೋನು ಗೌಡರದ್ದೇ ಮತ್ತೊಂದು ರೀತಿಯ ಟ್ಯಾಲೆಂಟ್​. ಸೋನು ಗೌಡ ಅವರು ಹಿಡಿದಿರುವ ದಾರಿಗೆ ಟೀಕೆಗಳೇ ಹೆಚ್ಚು, ಅಸಭ್ಯ ಮಾತುಗಳು, ಕಮೆಂಟ್ಸ್​ಗಳೇ ಹೆಚ್ಚು. ಇಂಥ ಟ್ರೋಲ್​ಗಳನ್ನು, ಅಸಭ್ಯ, ಅಶ್ಲೀಲ ಕಮೆಂಟ್ಸ್​ಗಳನ್ನು ಎಂಜಾಯ್​ ಮಾಡುತ್ತಲೇ ಮೇಲಕ್ಕೆ ಬಂದವರು ಸೋನು ಗೌಡ.

78
ಮಂಚಕ್ಕೆ ಹೋಗಿದ್ರೆ ಇಷ್ಟು ವರ್ಷ ಬೇಕಾಗಿತ್ತಾ?

ಈಚೆಗೆ ಅವರು, ತಾವು ಕಾರೊಂದು ತೆಗೆದುಕೊಂಡಿರುವ ಬಗ್ಗೆ ಯುಟ್ಯೂಬ್​ನಲ್ಲಿ ಮಾತನಾಡಿದರು. ಜನರು ಪದೇ ಪದೇ ಮಂಚದ ವಿಷ್ಯ ಮಾತನಾಡುತ್ತಾರೆ. ನಾನು ಯಾರ ಜೊತೆಯಾದರೂ ಮಂಚಕ್ಕೆ ಹೋಗುವವಳೇ ಆಗಿದ್ದರೆ ಈ ಕಾರು ತೆಗೆದುಕೊಳ್ಳಲು ಇಷ್ಟು ವರ್ಷ ಕಾಯಬೇಕಾಗಿರಲಿಲ್ಲ. ಹೇಳುವುದಕ್ಕೂ ಒಂದು ಮಿತಿ ಇರಬೇಕು. ಬಾಯಿ ಬಿಟ್ಟರೆ ಓಯೋ ರೂಮ್​, ಮಂಚ ಎಂದೇ ಹೇಳ್ತಾರೆ ಎಂದು ನೊಂದು ನುಡಿದಿದ್ದರು ಸೋನು ಗೌಡ.

88
ಹಲವು ನಟಿಯರದ್ದು ಇದೇ ಮಾತು

ಹಾಗೆಂದು ಇದು ಅನುಶ್ರೀ ಅಥವಾ ಸೋನು ಗೌಡ ಮಾತಲ್ಲ. ಈ ಹಿಂದೆಯೇ ಸಾಕಷ್ಟು ಸೆಲೆಬ್ರಿಟಿಗಳು ವಿವಿಧ ಭಾಷೆಗಳ ತಾರೆಯರು ಸಂದರ್ಶನದಲ್ಲಿ ಇದೇ ರೀತಿಯ ನೋವನ್ನು ತೋಡಿಕೊಂಡದ್ದು ಇದೆ. ಸಮಾಜದ ಮನಸ್ಥಿತಿ ಬದಲಾಗಬೇಕು ಎನ್ನುವುದು ಅವರ ಅಭಿಪ್ರಾಯವಷ್ಟೇ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories