ಯಾವುದೇ ಸಂಬಂಧವನ್ನು ಆರೋಗ್ಯಕರವಾಗಿಡಲು ಡೇಟ್ ನೈಟ್ ತುಂಬಾ ಮುಖ್ಯ. ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ನಿಮ್ಮ ಮದುವೆ ಅಥವಾ ಸಂಬಂಧದಲ್ಲಿ ರೊಮ್ಯಾಂಟಿಕ್ ಜೀವಂತವಾಗಿಡುವುದು ಬಹಳ ಮುಖ್ಯ. ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತೆ, ಅವಾಗ ಟ್ರಿಪ್ ಹೋಗೋದು, ಡೇಟ್ ನೈಟ್ ಎಲ್ಲಾ ಹೋಗುತ್ತಿದ್ದರು. ಆದರೆ ವರ್ಷ ಕಳೆದಂತೆ ಎಲ್ಲವೂ ಕಡಿಮೆಯಾಗುತ್ತೆ. ಆದರೆ ಎಷ್ಟು ವರ್ಷಗಳಾದರೂ ಸಂಬಂಧದಲ್ಲಿ ರೋಮಾನ್ಸ್ ಹಾಗೆ ಉಳಿಯಬೇಕು ಅನ್ನೋದಾದ್ರೆ ನೀವು ಆಗೊಮ್ಮೆ, ಈಗೊಮ್ಮೆ ಡೇಟ್ ನೈಟ್ ಪ್ಲ್ಯಾನ್ ಮಾಡಬೇಕು.
ನಿಮ್ಮ ರಿಲೇಶನ್ ಶಿಪ್ ಅಥವಾ ವೈವಾಹಿಕ ಜೀವನದಲ್ಲಿ (married life) ರೊಮ್ಯಾನ್ಸ್ ಯಾವಾಗಲೂ ಹಸಿರಾಗಿರಲು ಬಯಸಿದ್ರೆ ನೀವು ರೊಮ್ಯಾಂಟಿಕ್ ಡೇಟ್ ಹೋಗ್ಲೇಬೇಕು. ಇಂದು ನಾವು ಸುಲಭವಾದ ಡೇಟ್ ನೈಟ್ ಕಲ್ಪನೆಗಳ ಮಾಹಿತಿಯನ್ನು ನಿಮಗೆ ನೀಡುತ್ತೇವೆ, ಇದು ನಿಮ್ಮ ಸಂಗಾತಿಯೊಂದಿಗೆ ಮತ್ತೆ ಉತ್ತಮ ಸಮಯ ಹೊಂದಲು ಮತ್ತು ಸಂಬಂಧದಲ್ಲಿ ಪ್ರಣಯವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
211
ಗೇಮ್ ನೈಟ್ (game night) ಪ್ಲ್ಯಾನ್ ಮಾಡಿ
ಕರೋನಾ ಸಾಂಕ್ರಾಮಿಕವು ಮನೆಯಲ್ಲೇ ಕುಳಿತು ನಾವು ಏನೆಲ್ಲಾ ಮಾಡಬಹುದು ಅನ್ನೋದನ್ನು ನಮಗೆ ತೋರಿಸಿದೆ. ಅವುಗಳಲ್ಲಿ ಒಂದು ಮನೆಯ ನಾಲ್ಕು ಗೋಡೆಗಳಲ್ಲಿ ಕುಳಿತು ನಮ್ಮನ್ನು ರಂಜಿಸುವುದು. ಈ ಸಮಯದಲ್ಲಿ ಬೋರ್ಡ್ ಆಟ ಸಾಕಷ್ಟು ಜನಪ್ರಿಯತೆ ಪಡೆಯಿತು. ಸ್ನೇಹಿತರು ಅಥವಾ ಫ್ಯಾಮಿಲಿ ಸದಸ್ಯರ ಗುಂಪು ಆನ್ಲೈನ್ ಬೋರ್ಡ್ ಆಟಗಳನ್ನು ಆಡಲು ಪ್ರಾರಂಭಿಸಿತು.
311
ದಂಪತಿಗಳು ಬಯಸಿದರೆ ಬೋಗ್ಲೆ, ಕನೆಕ್ಟ್, ಜೆಂಗಾ, ಸೀಕ್ವೆನ್ಸ್ ಅಥವಾ ಸ್ಕ್ರ್ಯಾಬಲ್ ನಂತಹ ಇಬ್ಬರು ಆಟಗಾರರ ಬೋರ್ಡ್ ಆಟಗಳನ್ನು (board game) ಆಡಬಹುದು. ನೀವು ನಿಮ್ಮ ಸ್ವಂತ ಆಟವನ್ನು ಸಹ ಆವಿಷ್ಕರಿಸಬಹುದು ಮತ್ತು ನಿಮ್ಮ ಸಂಗಾತಿಯೊಂದಿಗೆ ಅದನ್ನು ಎಂಜಾಯ್ ಮಾಡಬಹುದು. ಡೇಟ್ ನೈಟ್ ಪ್ಲ್ಯಾನ್ ಮಾಡುತ್ತಾ, ಈ ರೀತಿ ಗೇಮ್ಸ್ ಆಡುತ್ತಾ, ನೀವು ಜೊತೆಯಾಗಿ ಮಕ್ಕಳಂತೆ ಸಮಯ ಎಂಜಾಯ್ ಮಾಡಬಹುದು.
411
ಡ್ರೀಮ್ ಡೇಟ್ ಗೆ ಹೋಗಿ
ನಿಮ್ಮ ಸಂಗಾತಿಯನ್ನು ನೀವು ಮೊದಲ ಬಾರಿಗೆ ಭೇಟಿಯಾದ ಸ್ಥಳದಲ್ಲಿಯೇ ನೀವು ಕನಸಿನ ಡೇಟ್ (dream date) ಯೋಜಿಸಬಹುದು. ಒಂದೇ ರೀತಿಯ ಬಟ್ಟೆಗಳನ್ನು ಧರಿಸುವ ಮೂಲಕ ನಿಮ್ಮ ಸಂಗಾತಿಯನ್ನು ಅಚ್ಚರಿಗೊಳಿಸಿ (ನೀವು ಇನ್ನೂ ಅವುಗಳನ್ನು ಹೊಂದಿರದಿದ್ದರೆ) ಮತ್ತು ನೀವು ಮೊದಲು ಭೇಟಿಯಾದ ಸ್ಥಳದಲ್ಲಿ ಅವರನ್ನು ಅಪರಿಚಿತರಂತೆ ಭೇಟಿ ಮಾಡಿ. ಸಮಯವನ್ನು ಎಂಜಾಯ್ ಮಾಡಿ.
511
ಕಪಲ್ ಸ್ಪಾ
ಸಂಗಾತಿಯೊಂದಿಗೆ ಸಮಯ ಕಳೆಯಲು ಜೊತೆಗೆ ನಿಮಗೆ ಮಾನಸಿಕ ಶಾಂತಿಯನ್ನು ನೀಡುವುದರ ಜೊತೆಗೆ ನಿಮ್ಮ ಸ್ನಾಯುಗಳನ್ನು ವಿಶ್ರಾಂತಿಗೊಳಿಸುವ ಸ್ಪಾ (couple spa) ಅನುಭವವನ್ನು ಯಾರು ಇಷ್ಟಪಡುವುದಿಲ್ಲ ಅಲ್ವಾ? ನಿಮ್ಮ ಸಂಗಾತಿಯೊಂದಿಗೆ ಒಂದೆರಡು ಸ್ಪಾ ಎಕ್ಸ್ ಪೀರಿಯನ್ಸ್ ಅನುಭವಿಸಿ ನೋಡಿ. ಬಿಡುವಿಲ್ಲದ ಕಚೇರಿ ದಿನದ ನಂತರ ಸುವಾಸನೆಯುಕ್ತ ಮಸಾಜ್ ನೊಂದಿಗೆ ಚಿಕಿತ್ಸೆಯನ್ನು ಆನಂದಿಸಿ.
611
ಸ್ಪಾಗೆ ಹೋಗಲು ಇಷ್ಟವಿರದೇ ಇದ್ದರೆ, ನೀವು ಮನೆಯಲ್ಲಿಯೇ ಸ್ಪಾ ಅನುಭವ ಎಂಜಾಯ್ ಮಾಡಬಹುದು. ನೀವು ಸುವಾಸನೆಯುಕ್ತ ತೈಲಗಳು, ಸ್ಲೋ ಮ್ಯೂಸಿಕ್ ಮತ್ತು ಬಿಸಿ ನೀರಿನ ಬಬಲ್ ಸ್ನಾನಗಳೊಂದಿಗೆ ರೋಮ್ಯಾಂಟಿಕ್ ಇನ್-ಹೌಸ್ ಸ್ಪಾವನ್ನು (romantic in house spa) ಸಹ ಯೋಜಿಸಬಹುದು. ಇದರಿಂದ ನಿಮ್ಮ ಜೀವನದಲ್ಲಿ ರೊಮ್ಯಾನ್ಸ್ ಹೆಚ್ಚಾಗೋದು ಗ್ಯಾರಂಟಿ.
711
ನಕ್ಷತ್ರಗಳನ್ನು ನೋಡುತ್ತಾ ರಾತ್ರಿ ಕಳೆಯಿರಿ
ಮಧ್ಯರಾತ್ರಿಯಲ್ಲಿ ಇಡೀ ನಗರವು ನಿದ್ರಿಸುವಾಗ ಮತ್ತು ನೀವು ಕಡಿಮೆ ಮಾಲಿನ್ಯ ಮತ್ತು ಕಡಿಮೆ ಶಬ್ದ ಹೊಂದಿರೋ ಆಕಾಶ ಹೊಂದಿರುವಾಗ, ಅದರ ನಿಜವಾದ ಅನುಭವವನ್ನು ಪಡೆಯಬಹುದು. ಸ್ಟಾರ್-ಗೇಜಿಂಗ್ (star gazing) ಅನುಭವ ಪಡೆಯಲು ಉತ್ತಮ ಮಾರ್ಗವೆಂದರೆ ನಗರದ ಹೊರವಲಯದಲ್ಲಿ ಕ್ಯಾಂಪಿಂಗ್ ಪ್ಲ್ಯಾನ್ ಮಾಡೋದು.
811
ಯಾವುದೋ ಒಂದು ಸುಂದರ ಜಾಗದಲ್ಲಿ ಅಥವಾ ಹಿಲ್ ಮೇಲೆ ಕ್ಯಾಂಪಿಂಗ್ ಮಾಡಬೇಕು. ಇದು ಸ್ಪಷ್ಟವಾದ ಆಕಾಶವಿರುವ ಮತ್ತು ತೊಂದರೆ ನೀಡಲು ಯಾವುದೇ ಗದ್ದಲವಿಲ್ಲದ ಸ್ಥಳವಾಗಿರಬೇಕು. ನಿಮ್ಮ ಸಂಗಾತಿಯೊಂದಿಗೆ ಇಂತಹ ಜಾಗದಲ್ಲಿ ನಕ್ಷತ್ರಗಳನ್ನು ನೋಡುತ್ತಾ ಒಂದು ರಾತ್ರಿ ಕಳೆಯಿರಿ, ನಕ್ಷತ್ರಗಳನ್ನು ಎಣಿಸಿ. ಇದು ಜೀವಮಾನಕ್ಕೆ ಸಾಕಾಗುವಷ್ಟು ನೆನಪನ್ನು ಹೊತ್ತು ತರುತ್ತೆ.
911
ಜೊತೆಯಾಗಿ ಒಂದು ಹವ್ಯಾಸ ಪೂರ್ಣಗೊಳಿಸಿ
ನೀವು ಯಾವಾಗಲೂ ಅಭ್ಯಾಸ ಮಾಡಲು ಬಯಸುವ ಚಟುವಟಿಕೆ ಒಂದಿದ್ದು, ಆದರೆ ಕೆಲಸ ಅಥವಾ ಇತರ ಕಾರಣಗಳಿಂದಾಗಿ ನಿಮಗೆ ಅದನ್ನು ಜೊತೆಯಾಗಿ ಮಾಡಲು ಸಾಧ್ಯವಾಗಿರದಿದ್ದರೆ, ಇದೀಗ ಅದಕ್ಕಾಗಿಯೇ ಪ್ಲ್ಯಾನ್ ಮಾಡಿಕೊಂಡು ಈ ಕೆಲಸ ಮಾಡಿ ನೋಡಿ. ಉದಾಹರಣೆಗೆ ಪೇಂಟಿಂಗ್ (painting), ಕುಂಬಾರಿಕೆ, ನೃತ್ಯ, ಅಡುಗೆ, ಇವು ನಿಮ್ಮ ಸಂಗಾತಿಯೊಂದಿಗೆ ನೀವು ಮಾಡಲು ಇಷ್ಟಪಡುವ ಯಾವುದೇ ವಿಷಯವಾಗಿರಬಹುದು. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲು ಬಿಡಿ.
1011
ಸನ್ ಸೆಟ್
ಕೆಲವು ಜನರು ಸೂರ್ಯೋದಯ ಮತ್ತು ಸೂರ್ಯಾಸ್ತದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ನೀವು ಸೂರ್ಯಾಸ್ತವನ್ನು ಬೆನ್ನಟ್ಟಲು ಇಷ್ಟಪಡುವವರಾಗಿದ್ದರೆ, ಸಮುದ್ರದ ಪಕ್ಕದಲ್ಲಿರುವ ರೆಸ್ಟೋರೆಂಟ್ ನಲ್ಲಿ ಡೇಟ್ ನೈಟ್ ಯೋಜಿಸಿ ಮತ್ತು ಸೂರ್ಯಾಸ್ತವನ್ನು (sunset) ನೋಡಲು ಚಾರಣಕ್ಕೆ ಹೋಗಿ. ಇದು ನಿಮ್ಮ ಸಂಗಾತಿಯೊಂದಿಗೆ ನೀವು ಮಾಡುವ ಅತ್ಯಂತ ರೊಮ್ಯಾಂಟಿಕ್ ಚಟುವಟಿಕೆಗಳಲ್ಲಿ ಒಂದಾಗಿರಬಹುದು.
1111
ಅಡ್ವೆಂಚರ್ ಮಾಡಿ
ನೀವು ಮತ್ತು ನಿಮ್ಮ ಸಂಗಾತಿ ಅಡ್ವೆಂಚರ್ ಇಷ್ಟಪಡುವವರಲ್ಲಿ ಒಬ್ಬರಾಗಿದ್ದರೆ, ರಾಫ್ಟಿಂಗ್, ಬಂಗೀ ಜಂಪಿಂಗ್ ಅಥವಾ ಪ್ಯಾರಾಸೈಲಿಂಗ್ ನಂತಹ ಸಾಹಸ ಚಟುವಟಿಕೆಗಳನ್ನು ಯೋಜಿಸಿ ಮತ್ತು ಒಟ್ಟಿಗೆ ಸಾಹಸವನ್ನು ಆನಂದಿಸಿ. ಒಟ್ಟಿಗೆ, ಯಾವುದೇ ಸಾಹಸ ಚಟುವಟಿಕೆಯನ್ನು (adventure) ಮಾಡೋದ್ರಿಂದ ರೊಮ್ಯಾನ್ಸ್ ಹೆಚ್ಚಾಗೋದು ಗ್ಯಾರಂಟಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.