ರಾತ್ರಿ ಗಂಡಂದಿರು ಇದನ್ನು ಸರ್ಚ್ ಮಾಡುತ್ತಿದ್ದರೆ ಅಲರ್ಟ್ ಆಗಿ, ಯಾಕೆ ಓದಿ

First Published Apr 8, 2024, 4:22 PM IST

ಸ್ಮಾರ್ಟ್ ಫೋನ್ಸ್ ನಮ್ಮ ಜೀವನಶೈಲಿಯೊಂದಿಗೆ ಎಷ್ಟೊಂದು ಕನೆಕ್ಟ್ ಆಗಿವೆ ಅಂದ್ರೆ, ಕಣ್ಣು ತೆರೆಯುವ ಮತ್ತು ಮಲಗುವ ಮೊದಲೇ ಇಂಟರ್ನೆಟ್ನಲ್ಲಿ ವಿಷಯಗಳನ್ನು ಸರ್ಚ್ ಮಾಡೋದು ಮತ್ತು ಸೋಶಿಯಲ್ ಮೀಡಿಯಾ ಪೇಜ್ ಸ್ಕ್ರಾಲ್ ಮಾಡುವುದು ಸಾಮಾನ್ಯ. ಆದರೆ ಗಂಡ ಹೆಂಡತಿ ಜೊತೆಯಾಗಿರೋವಾಗ ಗಂಡ ಇಂಟರ್ನೆಟ್ ನಲ್ಲಿ ಇವುಗಳನ್ನು ನೋಡ್ತಿದ್ರೆ ಮಾತ್ರ ಹೆಂಡತಿ ಅಲರ್ಟ್ ಆಗಿರ್ಬೇಕು.
 

ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಪ್ರತಿಯೊಬ್ಬರ ಜೀವನದಲ್ಲೂ ಲೆಕ್ಕಕ್ಕಿಂತ ಅಧಿಕವಾದ ಮಹತ್ವವಾದ ಸ್ಥಾನವನ್ನೇ ಪಡೆದಿದೆ. ಯಾವಾಗ ಮನುಷ್ಯ ಮೊಬೈಲ್ ಫೋನ್ ಜೊತೆ ಕನೆಕ್ಟ್ ಆಗೋಕೆ ಆರಂಭವಾಗಿದ್ದಾನೋ ಅಂದಿನಿಂದ ಪ್ರತಿಯೊಂದೂ ಸಂಬಂಧದ ಸ್ವರೂಪವೂ ಬದಲಾಗಿದೆ. ಜೊತೆಯಾಗಿ ಕುಳಿತರೂ, ಜನರು ಮಾತನಾಡೋದನ್ನೇ ಮರೆತು ಮೊಬೈಲ್ ಫೋನಲ್ಲೇ ಬ್ಯುಸಿಯಾಗಿರ್ತಾರೆ. ಮೊಬೈಲ್ ಫೋನ್ (mobile phone) ದಂಪತಿ ಮಧ್ಯದಲ್ಲಿದ್ದಾಗ, ಅವರ ನಡುವೆ ಸಂವಹನ ಅಂತರ ಹೆಚ್ಚಾಗುತ್ತಲೇ ಹೋಗುತ್ತದೆ. ಇದರಿಂದ ಸಂಬಂಧ ಬಿರುಕು ಬಿಡಲು ಶುರುವಾಗುತ್ತದೆ.

ಮೊಬೈಲಿನಿಂದ ಉಂಟಾದ ಸಂಬಂಧಗಳ ದೂರವನ್ನು,ಮಾತುಕತೆ ಮತ್ತು ಸ್ವಲ್ಪ ಪ್ರಯತ್ನದ ಮೂಲಕ ನಿವಾರಿಸಬಹುದು ಮತ್ತು ಬಂಧವನ್ನು ಮರಳಿ ಪಡೆಯಬಹುದು. ಆದರೆ ನಿಮ್ಮ ಪತಿ ಪ್ರತಿದಿನ ರಾತ್ರಿ ಇಂಟರ್ನೆಟ್ (using internet in night) ನಲ್ಲಿ ಸರ್ಚ್ ಮಾಡ್ತಿದ್ರೆ ಮತ್ತು ಸ್ಕ್ರಾಲ್ ಮಾಡಿದರೆ, ನೀವು ಜಾಗರೂಕರಾಗಿರಬೇಕು.
 

ನಾವಿದನ್ನು ಏಕೆ ಹೇಳುತ್ತಿದ್ದೇವೆ ಅನ್ನೋದನ್ನು, ಕೆಳಗೆ ನೀಡಲಾದ ಮಾಹಿತಿ ಆಧಾರದ ಮೇಲೆ ನೀವು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಈ ಅಭ್ಯಾಸದಿಂದ ಭಯಪಡುವ ಅಗತ್ಯವಿಲ್ಲ, ಆದರೆ ಅದರ ಬಗ್ಗೆ ಗಮನ ಹರಿಸುವುದು ಮತ್ತು ನಿಮ್ಮ ಗಂಡನೊಂದಿಗೆ ನೇರವಾಗಿ ಮಾತನಾಡುವುದು ಬಹಳ ಮುಖ್ಯ. ಇಲ್ಲದಿದ್ದರೆ, ವಿಷಯಗಳು ತಪ್ಪಾಗಬಹುದು.
 

ಯಾವ ಸರ್ಚಿಂಗ್ ಬಗ್ಗೆ ಮಾತಾನಾಡ್ತಿದ್ದೀವಿ ಗೊತ್ತಾ? 
ಇಲ್ಲಿ ಯಾವುದೇ ಅಡಲ್ಟ್ ಕಂಟೆಂಟ್ (adult content) ಸರ್ಚ್ ಬಗ್ಗೆ ಮಾತನಾಡುತ್ತಿಲ್ಲ ಅನ್ನೋ ಬಗ್ಗೆ ಈಗ್ಲೇ ಹೇಳ್ತೀವಿ. ಬದಲಾಗಿ ಇದು ಸಾಮಾನ್ಯವಾಗಿ ತುಂಬಾ ಗಂಭೀರವಾಗಿ ಪರಿಗಣಿಸದ ವಿಷಯ. ವಾಸ್ತವವಾಗಿ, ಇಲ್ಲಿ ಪುರುಷರು ಆನ್ಲೈನ್ ಲಭ್ಯವಿರುವ ಮಹಿಳಾಮಣಿಗಳ ಪ್ರೊಫೈಲ್ಸ್ ಮತ್ತು ಅವರ ಚಿತ್ರಗಳನ್ನು ಸರ್ಚ್ ಮಾಡುವ ಬಗ್ಗೆ ಮಾತನಾಡಲಾಗಿದೆ.

ನಿಮ್ಮ ಪತಿ ನಿಮ್ಮೊಂದಿಗೆ ಮಾತನಾಡುವ ಅಥವಾ ರಾತ್ರಿಯಲ್ಲಿ ಸಮಯ ಕಳೆಯುವ ಬದಲು ಇತರ ಮಹಿಳೆಯರ ಚಿತ್ರಗಳನ್ನು ಸ್ಕ್ರಾಲ್ (scrolling women photo) ಮಾಡಲು ಮತ್ತು ಅವರ ಫೋಟೋಗಳಿಗೆ, ರೀಲ್ಸ್‌ಗೆ ಲೈಕ್ ಮಾಡಿ ಸಮಯ ಕಳೆಯುತ್ತಿದ್ದರೆ, ಅದು ಕಾಳಜಿಯ ವಿಷಯವಾಗಬಹುದು.
 

ಈ ವಿಷಯ ಅರ್ಥಮಾಡಿಕೊಳ್ಳುವುದು ಮುಖ್ಯ
ಪತಿ ಸೋಶಿಯಲ್ ಮೀಡಿಯಾದಲ್ಲಿ (social media) ಮಹಿಳಾ ಸೆಲೆಬ್ರಿಟಿ ಚಿತ್ರಗಳನ್ನು ಹುಡುಕುತ್ತಿದ್ದರೆ, ನೋಡುತ್ತಿದ್ದರೆ ಮತ್ತು ಲೈಕ್ ಮಾಡ್ತಿದ್ರೆ, ಅದು ಅಭಿಮಾನಿಯಾಗಿ ಅವರಿಗೆ ಸಾಮಾನ್ಯ ಎಂದು ಅರ್ಥಮಾಡಿಕೊಳ್ಳುವುದು ಸಹ ಮುಖ್ಯ. ಆದರೆ ಅವರು ಸಾಮಾನ್ಯ ಮಹಿಳೆಯ ಫೋಟೋಗಳನ್ನು ಸಹ ಝೂಮ್ ಮಾಡಿ ನೋಡೋದು, ಪ್ರೊಫೈಲ್ ಚೆಕ್ ಮಾಡೋದು, ಲೈಕ್ ಮಾಡೋದು, ಎಲ್ಲಾ ಫೋಟೋಗಳಿಗೆ ಕಾಮೆಂಟ್ ಮಾಡೋದು ಮಾಡ್ತಿದ್ರೆ ಅದು ಸಮಸ್ಯೆ ಎಂದರ್ಥ.

ಸುಮ್ಮನಿರಬೇಡಿ
ಅಂತಹ ಪರಿಸ್ಥಿತಿಯಲ್ಲಿ, ಮೌನವಾಗಿರುವುದು ಮತ್ತು ಅದರ ಬಗ್ಗೆ ನಿರಂತರವಾಗಿ ಯೋಚಿಸುವ ಬದಲು, ನಿಮ್ಮ ಗಂಡನೊಂದಿಗೆ ಮುಕ್ತವಾಗಿ ಮಾತನಾಡುವುದು ಮತ್ತು ನಿಮಗೆ ಅವರು ಮಾಡ್ತಿರೋದು ಇಷ್ಟ ಆಗ್ತಿಲ್ಲ ಅನ್ನೋದನ್ನು ವ್ಯಕ್ತಪಡಿಸುವುದು ಉತ್ತಮ. ಅಂತಹ ವಿಷಯಗಳ ಬಗ್ಗೆ ಸಂಗಾತಿಯಿಂದ ಏನು ಮರುತ್ತರ ಬರುತ್ತೆ ಅನ್ನೋದರ ಬಗ್ಗೆ ಯೋಚಿಸಬೇಡಿ. 

ನೀವು ಮಾತನಾಡದಿದ್ದರೆ, ಅನುಮಾನವು ನಿಮ್ಮ ಮನಸ್ಸಿನಲ್ಲಿ ಗಾಢವಾಗುತ್ತದೆ ಮತ್ತು ನಿಮ್ಮ ಗಂಡ ಆನ್ ಲೈನ್ ಸರ್ಚ್ (Online Search) ಮಾಡೋದು ಮಾತ್ರವಲ್ಲ, ಅವರಿಗೆ ಕರೆ ಮಾಡ್ತಾರೆ, ಮೆಸೇಜ್ ಮಾಡುವ ಮೂಲಕ ಅವರ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವ ಸಂಶಯ ಕೂಡ ಹೆಚ್ಚಾಗುತ್ತದೆ. 
 

 ಗಂಡ ಹೆಂಡತಿ ನಡುವೆ ಸಂಶಯ ಹೆಚ್ಚಾದರೆ ಅದರಿಂದ ಸಂಬಂಧದ (Relationship) ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲವೊಮ್ಮೆ ಸಂಬಂಧ ಮುರಿದು ಬೀಳುವ ಸಾಧ್ಯತೆ ಕೂಡ ಇದೆ. ಹಾಗಾಗಿ ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡೋದು ಉತ್ತಮ. 

click me!