ಜಗತ್ತಿನ ಅತ್ಯಂತ ಪ್ರಸಿದ್ಧ ಭವಿಷ್ಯಗಾರ್ತಿಯರಲ್ಲಿ ಒಬ್ಬರಾಗಿರುವ ಬಾಬಾ ವಂಗಾ ಅವರ ಹೆಸರು ಮತ್ತೆ ಸುದ್ದಿಯಲ್ಲಿದೆ. ಬಲ್ಗೇರಿಯಾದ ಅಂಧ ಭವಿಷ್ಯಗಾರ್ತಿಯಾಗಿದ್ದ ಬಾಬಾ ವಂಗಾ, ತಮ್ಮ ಜೀವನಕಾಲದಲ್ಲಿ ಹಲವು ಭವಿಷ್ಯವಾಣಿಗಳನ್ನು ಮಾಡಿದ್ದರು ಎನ್ನಲಾಗುತ್ತದೆ.
2025ರ ವೇಳೆಗೆ ಯುರೋಪ್‌ನಲ್ಲಿ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಬಹುದು ಎಂಬ ಭವಿಷ್ಯವಾಣಿ ಬಾಬಾ ವಾಂಗಾ ಹೆಸರಲ್ಲಿ ಹರಿದಾಡುತ್ತಿತ್ತು. ಜೊತೆಗೆ ಮಾನವಕುಲವು ಹೊಸ ತಂತ್ರಜ್ಞಾನ ಮತ್ತು ಶಕ್ತಿ ಹುಟ್ಟುತ್ತೆ ಎಂದು ಹೇಳಿದ್ದರು.
2028: ಹೊಸ ಶಕ್ತಿ ಮೂಲ ಮತ್ತು ಬಾಹ್ಯಾಕಾಶ ಸಾಧನೆ
2028ರ ವೇಳೆಗೆ ಮಾನವರು ಹೊಸ ಶಕ್ತಿ ಮೂಲವನ್ನು ಅಭಿವೃದ್ಧಿಪಡಿಸಬಹುದು ಹಾಗೂ ಶುಕ್ರ ಗ್ರಹದತ್ತ ಮಾನವ ಯಾನ ನಡೆಯಬಹುದು ಎಂಬ ಮಾತುಗಳು ಬಾಬಾ ವಾಂಗಾ ಭವಿಷ್ಯವಾಣಿಗಳ ಪಟ್ಟಿಯಲ್ಲಿ ಕಾಣಸಿಗುತ್ತವೆ.
24
ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ
2033: ಸಮುದ್ರ ಮಟ್ಟ ಏರಿಕೆ
ಹವಾಮಾನ ಬದಲಾವಣೆಯಿಂದ ಧ್ರುವ ಪ್ರದೇಶಗಳ ಹಿಮ ಕರಗಿ ಸಮುದ್ರ ಮಟ್ಟ ಹೆಚ್ಚಾಗಬಹುದು ಎಂದು ಭವಿಷ್ಯವಾಣಿಯಲ್ಲಿ ಉಲ್ಲೇಖಿಸಲಾಗಿದೆ.
2043: ಜಾಗತಿಕ ರಾಜಕೀಯ ಬದಲಾವಣೆ
2043ರ ವೇಳೆಗೆ ವಿಶ್ವ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಬಹುದು ಮತ್ತು ಯುರೋಪ್‌ನ ರಾಜಕೀಯ ಚಿತ್ರಣವೂ ಬದಲಾಗಬಹುದು ಎಂಬ ಉಲ್ಲೇಖ ಕೆಲವು ಪಟ್ಟಿಗಳಲ್ಲಿ ಕಂಡುಬರುತ್ತದೆ.
34
ಸಾಮಾಜಿಕ ವ್ಯವಸ್ಥೆಗಳಲ್ಲಿ ದೊಡ್ಡ ಬದಲಾವಣೆ
2046: ಕೃತಕ ಅಂಗಾಂಗಗಳ ಯುಗ
ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳು ನಡೆದು ಕೃತಕ ಅಂಗಾಂಗಗಳು ಸಾಮಾನ್ಯವಾಗಬಹುದು ಎಂದು ಹೇಳಲಾಗಿದೆ. ಇದರಿಂದ ಅಂಗಾಂಗ ಕಸಿ ಚಿಕಿತ್ಸೆ ಸುಲಭವಾಗಬಹುದು ಎನ್ನಲಾಗಿದೆ.
2066 ಮತ್ತು ನಂತರದ ವರ್ಷಗಳು
ಕೆಲವು ದಾಖಲೆಗಳಲ್ಲಿ 2066ರಲ್ಲಿ ಹೊಸ ತಂತ್ರಜ್ಞಾನ ಆಧಾರಿತ ಶಸ್ತ್ರಾಸ್ತ್ರಗಳು ಅಭಿವೃದ್ಧಿಯಾಗಬಹುದು ಎಂದು ಉಲ್ಲೇಖಿಸಲಾಗಿದೆ. 2076ರಲ್ಲಿ ಸಾಮಾಜಿಕ ವ್ಯವಸ್ಥೆಗಳಲ್ಲಿ ದೊಡ್ಡ ಬದಲಾವಣೆಗಳು ಉಂಟಾಗಬಹುದು ಎಂಬುದೂ ಹೇಳಲಾಗಿದೆ.
44
ಅನೇಕ ಭವಿಷ್ಯವಾಣಿ
2100ರಿಂದ 5079ರವರೆಗೆ
ಮುಂದಿನ ಶತಮಾನಗಳಲ್ಲಿ ಕೃತಕ ಸೂರ್ಯನ ನಿರ್ಮಾಣ, ಭೂಮಿಯ ಹೊರಗಿನ ಜೀವಿಗಳ ಸಂಪರ್ಕ, ಜಾಗತಿಕ ಬರಗಾಲ, ಮಂಗಳ ಗ್ರಹದ ಯುದ್ಧ ಮತ್ತು ಅಂತಿಮವಾಗಿ 5079ರಲ್ಲಿ ವಿಶ್ವದ ಅಂತ್ಯದಂತಹ ಹಲವು ಅಚ್ಚರಿಯ ಭವಿಷ್ಯವಾಣಿಗಳು ಈ ಪಟ್ಟಿಯಲ್ಲಿ ಸೇರಿವೆ. ಆದರೆ ಇವುಗಳ ವಿಶ್ವಾಸಾರ್ಹತೆಯ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ.
ನಿಜವೇ ಅಥವಾ ಕೇವಲ ಊಹಾಪೋಹವೇ?
ಬಾಬಾ ವಾಂಗಾ ಅವರ ಹೆಸರಿನಲ್ಲಿ ಹರಿದಾಡುವ ಅನೇಕ ಭವಿಷ್ಯವಾಣಿಗಳಿಗೆ ಅಧಿಕೃತ ದಾಖಲೆಗಳಿಲ್ಲ. ಹಲವು ಸಂಶೋಧಕರು ಮತ್ತು ವಿಮರ್ಶಕರು ಈ ಪಟ್ಟಿಗಳಲ್ಲಿನ ಅನೇಕ ಹೇಳಿಕೆಗಳು ನಂತರದ ವರ್ಷಗಳಲ್ಲಿ ಸೇರಿಸಲ್ಪಟ್ಟಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂಟರ್ನೆಟ್ ಸಮುದಾಯಗಳಲ್ಲಿಯೂ ಈ ಭವಿಷ್ಯವಾಣಿಗಳ ನಿಖರತೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಹೀಗಾಗಿ ಬಾಬಾ ವಾಂಗಾ ಭವಿಷ್ಯವಾಣಿಗಳನ್ನು ಕುತೂಹಲದ ದೃಷ್ಟಿಯಿಂದ ನೋಡುವುದು ಸೂಕ್ತ. ಅವುಗಳನ್ನು ವೈಜ್ಞಾನಿಕ ಸತ್ಯ ಅಥವಾ ಖಚಿತ ಭವಿಷ್ಯವೆಂದು ಪರಿಗಣಿಸುವ ಮುನ್ನ ಸೂಕ್ತ ಪರಿಶೀಲನೆ ಅಗತ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.