ಕುಟುಂಬಕ್ಕೆ ಮೊದಲೇ ಬಂದ ಅತ್ತೆಗೆ ಸೊಸೆಗಿಂತ ಅಧಿಕಾರ ಸ್ವಲ್ಪ ಹೆಚ್ಚಿರುತ್ತೆ. ಹಾಗಂತ ಅತ್ತೆ ಸರ್ವಾಧಿಕಾರಿಯಲ್ಲ. ಹಿಂದಿನಿಂದಲೂ ಅತ್ತೆ ಸ್ವಭಾವಕ್ಕೆ ತಕ್ಕಂತೆ ಅವರನ್ನು ವರ್ಗೀಕರಣ ಮಾಡಲಾಗಿದೆ. ನಿಮ್ಮತ್ತೆ ಯಾವ ಸ್ಥಾನದಲ್ಲಿ ಬರ್ತಾರೆ ನೀವೇ ನೋಡಿ.
ಅತ್ತೆ – ಸೊಸೆಯನ್ನು ಹಾವು – ಮುಂಗುಸಿಗೆ ಹೋಲಿಕೆ ಮಾಡೋರೇ ಹೆಚ್ಚು. ಒಂದು ಕಾಲದಲ್ಲಿ ಸೊಸೆಯಾಗಿದ್ದವಳೇ ಮುಂದೆ ಅತ್ತೆಯಾಗಿ ಬಡ್ತಿ ಪಡೆಯೋದು. ಸೊಸೆಯಾಗಿದ್ದಾಗ ಏನೆಲ್ಲ ಸವಾಲುಗಳಿದ್ವೋ ಅದ್ರಿಂದ ಬುದ್ಧಿ ಕಲಿತು ತನ್ನ ಸೊಸೆಯನ್ನು ಈ ಎಲ್ಲ ಕಷ್ಟದಿಂದ ರಕ್ಷಣೆ ಮಾಡುವ ಅತ್ತೆಯಂದಿರ ಸಂಖ್ಯೆ ಬಹಳ ಕಡಿಮೆ. ಅತ್ತೆ – ಸೊಸೆ ಸಂಬಂಧದ ಬಗ್ಗೆ ನಿರಂತರ ಚರ್ಚೆ ನಡೆಯುತ್ತೆ. ಈ ಅತ್ತೆ – ಸೊಸೆ ಸಂಬಂಧ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಿಂದಲೂ ಸಂಬಂಧದ ಬಗ್ಗೆ ಸ್ಪಷ್ಟ ವಿಶ್ಲೇಷಣೆ ನಡೆಯುತ್ತ ಬಂದಿದೆ. ಮನುಸ್ಮೃತಿ, ಮಹಾಭಾರತ, ಯಜ್ಞವಲ್ಕ್ಯ ಸ್ಮೃತಿಯಂತಹ ಧಾರ್ಮಿಕ ಗ್ರಂಥಗಳು ಅತ್ತೆಯರನ್ನು ಅವರ ನಡವಳಿಕೆಯ ಆಧಾರದ ಮೇಲೆ ವಿಂಗಡಿಸಲಾಗಿದೆ.
26
ಅಹಂಕಾರಿ ಅತ್ತೆ
ಪ್ರಾಚೀನ ಭಾರತದ ನಾಗರಿಕತೆ ಪ್ರಕಾರ, ಪಟ್ಟಿಯಲ್ಲಿ ಮೊದಲು ಬರೋದು ಅಹಂಕಾರಿ ಅತ್ತೆ. ಕುಟುಂಬವನ್ನು ಅವರು ಕಂಟ್ರೋಲ್ ಮಾಡ್ತಾರೆ. ಮನೆಯ ಗೌರವ, ಮನೆಯವರನ್ನು ನಿಯಂತ್ರಣ ಮಾಡುವ ಗೀಳನ್ನು ಹೊಂದಿರುತ್ತಾರೆ. ಸೊಸೆಯನ್ನು ಪ್ರತಿ ಸ್ಪರ್ಧಿಯಾಗಿ ನೋಡ್ತಾರೆ. ಮಗನ ಮೇಲೆ ತನ್ನ ನಿಯಂತ್ರಣ ಹೇರಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಭಾವನಾತ್ಮಕ ಒತ್ತಡ, ಮಾನಸಿಕ ನಿಯಂತ್ರಣಕ್ಕೆ ಪ್ರಯತ್ನ ಮಾಡ್ತಾರೆ. ಮಗನನ್ನು ಕಳೆದುಕೊಂಡ್ರೆ ಎನ್ನುವ ಭಯ ಅವರಲ್ಲಿ ಸದಾ ಇರುತ್ತದೆ.
36
ಪ್ರೀತಿಯ ಅತ್ತೆ
ಇವರು ಎರಡನೇ ಸ್ಥಾನದಲ್ಲಿ ಬರ್ತಾರೆ. ಸೊಸೆಯನ್ನು ಮಗಳಂತೆ ನೋಡಿಕೊಳ್ತಾರೆ. ಸೊಸೆಗೆ ಗೌರವ ನೀಡ್ತಾರೆ. ಹೊಸ ಮಗಳಂತೆ ಅವಳಿಗೆ ಪ್ರೀತಿ ತೋರಿಸ್ತಾ, ಮಾರ್ಗದರ್ಶನ ನೀಡ್ತಾರೆ. ಸಂಬಂಧದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸೊಸೆಯನ್ನು ಸ್ನೇಹದಿಂದ ನೋಡೋದು ಮುಖ್ಯ ಎಂದು ಅವರು ಭಾವಿಸ್ತಾರೆ.
ಈ ಸಾಲಿನಲ್ಲಿ ಬರುವ ಅತ್ತೆಯಂದಿರುವ ಮೇಲಿನಿಂದ ತುಂಬಾ ಒಳ್ಳೆಯವರಾಗಿ ಕಾಣ್ತಾರೆ. ಆದ್ರೆ ಒಳಗೊಳಗೇ ಸೊಸೆಯ ಮೇಲೆ ಕತ್ತಿ ಮಸಿಯುತ್ತಿರುತ್ತಾರೆ. ನೇರವಾಗಿ ಸೊಸೆಯನ್ನು ಎದುರಿಸೋದಿಲ್ಲ. ಸೊಸೆಯನ್ನು ವಿರೋಧಿಸುವುದಿಲ್ಲ. ಆದ್ರೆ ತಮ್ಮದೇ ಸ್ಟ್ರಾಟಜಿ ಮಾಡಿ, ರಾಜಕೀಯ ಮಾಡಿ ತಮ್ಮೆಲ್ಲ ಅಭಿಪ್ರಾಯವನ್ನು ಮನೆಯವರ ಮೇಲೆ, ಸೊಸೆ ಮೇಲೆ ಹೇರುತ್ತಾರೆ.
56
ಸೊಸೆಗೆ ಬೆಂಬಲ ನೀಡುವ ಅತ್ತೆ
ನಾಲ್ಕನೇ ಸಾಲಿನಲ್ಲಿ ಬರುವ ಅತ್ತೆಯಂದಿರು ಕಾಲಾನಂತರದಲ್ಲಿ ತಮ್ಮ ಸೊಸೆಯಂದಿರ ಬಗ್ಗೆ ಸಕಾರಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾರೆ. ಮನೆಯಲ್ಲಿ ಸೊಸೆಯನ್ನು ಎಲ್ಲರಂತೆ ಸಮಾನರಾಗಿ ನೋಡುತ್ತಾರೆ. ಈ ಅತ್ತೆಯಂದಿರು ತಮ್ಮ ಸೊಸೆಯ ಬಗ್ಗೆ ಸ್ನೇಹಪರ ಮನೋಭಾವ ಹೊಂದಿರುತ್ತಾರೆ. ಮನೆಯವ ವಿಷ್ಯದಲ್ಲಿ ಸೊಸೆಯನ್ನು ಬೆಂಬಲಿಸುತ್ತಾರೆ.
66
ಸೊಸೆ ಬರ್ತಿದ್ದಂತೆ ಹಿಂದೇಟು
ಈ ಪಟ್ಟಿಯಲ್ಲಿ ಬರುವ ಅತ್ತೆಯಂದಿರು, ಸೊಸೆ ಮನೆಗೆ ಬರ್ತಿದ್ದಂತೆ ಎಲ್ಲ ಜವಾಬ್ದಾರಿಯನ್ನು ಅವಳ ಹೆಗಲ ಮೇಲೆ ಹಾಕಿ ತಾವು ದೂರ ಸರಿಯುತ್ತಾರೆ. ಇದು ಅವರ ದೌರ್ಬಲ್ಯವಲ್ಲ. ಸೊಸೆಯನ್ನು ನಿಯಂತ್ರಣ ಮಾಡುವ ಬದಲು ಕುಟುಂಬವನ್ನು ಮುನ್ನಡೆಸಲು ಸೊಸೆಗೆ ಜವಾಬ್ದಾರಿ ನೀಡುತ್ತಾರೆ. ಸದಾ ಶಾಂತಿಯಿಂದ, ಪ್ರೀತಿಯಿಂದ ಇರುವ ಅವರು ಸೊಸೆಗೆ ಬೆಂಬಲವಾಗಿ ನಿಲ್ತಾರೆ. ಸೊಸೆ ಸಂತೋಷವಾಗಿರುವುದು ಅವರಿಗೆ ಮುಖ್ಯವಾಗಿರುತ್ತದೆ. ಅತ್ತೆಯ ಈ ಸ್ವಭಾವ ಸೊಸೆಯನ್ನು ಜವಾಬ್ದಾರಿಯುತ ಮಹಿಳೆ ಮಾಡುವ ಜೊತೆಗೆ ಸಂತೋಷವಾಗಿರಲು ಸಹಾಯ ಮಾಡುತ್ತದೆ.