ಅನಂತ್‌-ರಾಧಿಕಾ ವಿವಾಹ ಇಷ್ಟು ಗ್ರ್ಯಾಂಡ್ ಆಗಿ ನಡೀತಿರೋದ್ಯಾಕೆ, ಕಾರಣ ಬಹಿರಂಗಪಡಿಸಿದ ನೀತಾ ಅಂಬಾನಿ!

First Published Mar 2, 2024, 8:43 AM IST

ಮುಕೇಶ್ ಅಂಬಾನಿ ಪುತ್ರ,ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಗಳು ಅದ್ಧೂರಿಯಾಗಿ ನಡೀತಿದೆ. ಕೋಟಿ ಕೋಟಿ ವ್ಯಯಿಸಿ ಗ್ರ್ಯಾಂಡ್ ಆಗಿ ನಡೀತಿರೋ ಮದ್ವೆ ಜನರನ್ನು ಬೆರಗಾಗಿಸ್ತಿದೆ. ಇಷ್ಟಕ್ಕೂ ಮದ್ವೆ ಇಷ್ಟು ಅದ್ಧೂರಿಯಾಗಿ ನಡೀತಿರೋದು ಯಾಕೆ? ನೀತಾ ಅಂಬಾನಿ ಕಾರಣ ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ,ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಗಳು ಆರಂಭವಾಗಿದೆ. 

ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್‌ 1ರಿಂದ ಅನಂತ್-ರಾಧಿಕಾ ರಾಯಲ್ ಪ್ರಿ ವೆಡ್ಡಿಂಗ್ ಸೆಲೆಬ್ರೇಷನ್ ಶುರುವಾಗಿದೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ಅನೇಕ ಸೆಲೆಬ್ರಿಟಿಗಳ ಜೊತೆಗೆ ಅಂತಾರಾಷ್ಟ್ರೀಯ ತಾರೆಯರು ಸಹ ಆಗಮಿಸುತ್ತಿದ್ದಾರೆ.

ಕೋಟಿ ಕೋಟಿಗಳನ್ನು ವ್ಯಯಿಸಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿವಾಹ ಪೂರ್ವ ಆಚರಣೆಯು ಥೀಮ್ 'ಕಲೆ ಮತ್ತು ಸಂಸ್ಕೃತಿ'ಯನ್ನು ಆಧರಿಸಿದೆ ಎಂದು ನೀತಾ ಮುಖೇಶ್ ಅಂಬಾನಿ ಹೇಳಿದ್ದಾರೆ.  

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್‌ ಥೀಮ್‌ನ್ನು 'ಕಲೆ ಮತ್ತು ಸಂಸ್ಕೃತಿ' ಎಂದು ಇರಿಸಲಾಗಿದೆ. ಈ ವಿಚಾರವನ್ನು ನೀತಾ ಮುಖೇಶ್ ಅಂಬಾನಿ ಮದುವೆಯ ಕುರಿತಾಗಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ಕಲೆ ಮತ್ತು ಸಂಸ್ಕೃತಿಯನ್ನು ಮದುವೆಯ ವಿಷಯವಾಗಿಸಿದ್ದು ಯಾಕೆ ಎಂಬುದರ ಬಗ್ಗೆ ನೀತಾ ಅಂಬಾನಿ ಕಾರಣವನ್ನೂ ನೀಡಿದ್ದಾರೆ. ಈ ಮೂಲಕ ಕೋಟಿ ಕೋಟಿ ವ್ಯಯಿಸಿ ಗ್ರ್ಯಾಂಡ್ ವೆಡ್ಡಿಂಗ್ ಆಯೋಜಿಸಿರುವ ಕಾರಣ ಬಹಿರಂಗಪಡಿಸಲಾಗಿದೆ.

'ನನ್ನ ವೈಯಕ್ತಿಕ ಜೀವನದಲ್ಲಿ ನಾನು ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚು ಪ್ರಭಾವಿತನಾಗಿರುವುದರಿಂದ ವಿವಾಹಪೂರ್ವ ಆಚರಣೆಯ ವಿಷಯವನ್ನು ಕಲೆ ಮತ್ತು ಸಂಸ್ಕೃತಿಯಾಗಿ ಇರಿಸಲಾಗಿದೆ. ದೇಶದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ' ಎಂದು ನೀತಾ ಅಂಬಾನಿ ಹೇಳಿದ್ದಾರೆ. 

'ಮಗನ ಈ ವಿವಾಹ ಪೂರ್ವ ಕಾರ್ಯಕ್ರಮದ ಮೂಲಕ ಕಲೆ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ನನ್ನ ಉದ್ದೇಶ. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಝಲಕ್ ಕೂಡ ಕಾರ್ಯಕ್ರಮದಲ್ಲಿ ಗೋಚರಿಸಬೇಕು. ನಮ್ಮ ಕಲಾವಿದರ ಕೈಚಳಕ ಮತ್ತು ಅವರ ಶ್ರಮ ಮತ್ತು ಸಂಸ್ಕೃತಿಯ ಛಾಪು ಗೋಚರಿಸಬೇಕು' ಎಂದಿದ್ದಾರೆ.

'ಸಂಸ್ಕೃತಿ ಮತ್ತು ಸಂಪ್ರದಾಯಗಳು ಭಾರತೀಯ ನಾಗರಿಕತೆಯ ಅಡಿಪಾಯವಾಗಿದ್ದು, ಅದಕ್ಕೆ ನಾನು ನಮಸ್ಕರಿಸುತ್ತೇನೆ' ಎಂದು ನೀತಾ ತಿಳಿಸಿದ್ದಾರೆ. 

ಮುಂಬೈನ NMACC ಕಲ್ಚರಲ್ ಸೆಂಟರ್‌ನಲ್ಲಿ ವಿವಿಧ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ. ಕಲೆಯ ಎಲ್ಲಾ ಪ್ರಕಾರಗಳನ್ನು ಪ್ರದರ್ಶಿಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಈ ಸ್ಟುಡಿಯೋದಲ್ಲಿ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ.

click me!