ಒಬ್ಬ ಮಹಿಳೆ ವಿಚ್ಛೇದನ ಪಡೆದಾಗ, ಅದರೊಂದಿಗೆ ಬಹಳಷ್ಟು ಅವಮಾನ ಮತ್ತು ಕಳಂಕ ಇರುತ್ತದೆ. 'ಸೆಕೆಂಡ್ ಹ್ಯಾಂಡ್, ಬಳಸಿದ ವಸ್ತು, ಜೀವನ ವ್ಯರ್ಥ' ಹೀಗೆ ಬಹಳಷ್ಟು ಟೀಕೆಗಳನ್ನು ನಾನು ಕೇಳುತ್ತೇನೆ. ನಿಮ್ಮನ್ನು ಒಂದು ಮೂಲೆಗೆ ತಳ್ಳಲಾಗುತ್ತದೆ ಮತ್ತು ಸೋತಿದ್ದೀರಿ ಜೀವನದಲ್ಲಿ ತಪ್ಪು ಮಾಡಿದ್ದೀರಿ, ವಿಫಲರಾಗಿದ್ದೀರಿ ಎಂದು ಭಾವಿಸುವಂತೆ ಮಾಡಲಾಗುತ್ತದೆ. ನೀವು ಹಿಂದೆ ಮದುವೆಯಾಗಿದ್ದೀರಿ ಮತ್ತು ಈಗ ಅಲ್ಲ ಎಂಬ ಕಾರಣಕ್ಕಾಗಿ ನೀವು ಅಪರಾಧ ಮತ್ತು ಅವಮಾನವನ್ನು ಅನುಭವಿಸಬೇಕು ಎಂದು ಸಮಾಜ ನಿರೀಕ್ಷಿಸುತ್ತದೆ ಇದು ಅವರ ಕುಟುಂಬಗಳು ಮತ್ತು ಅದನ್ನು ಅನುಭವಿಸಿದ ಹುಡುಗಿಯರಿಗೆ ತುಂಬಾ ಕಷ್ಟಕರವಾಗಿರುತ್ತದೆ ಎಂದು ಸಮಂತಾ ಹೇಳಿದ್ದಾರೆ.