ಇದು ರೈಲೋ, ಹನಿಮೂನ್ ರೂಮೋ? ವೈರಲ್ ಆಯ್ತು ಎಸಿ ಕೋಚ್ ಮೇಕ್‌ಓವರ್

Published : Jul 08, 2026, 03:20 PM IST

Indian Railways Honeymoon Themed Coach Sparks ಹೂವುಗಳು, ಹಾರ್ಟ್‌ ಫ್ಲವರ್‌ ಅಲಂಕಾರ ಮತ್ತು ರೊಮ್ಯಾಂಟಿಕ್ ಹನಿಮೂನ್ ಥೀಮ್‌ನಿಂದ ಸಿಂಗಾರಿಸಲಾದ ರೈಲು ಕೋಚ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. 

PREV
14
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಸಾಮಾನ್ಯವಾಗಿ ರೈಲು ಕೋಚ್‌ಗಳು ಪ್ರಯಾಣಿಕರ ಅನುಕೂಲಕ್ಕಾಗಿ ಸರಳವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಎಸಿ ರೈಲು ಕೋಚ್ ಅನ್ನು ಹನಿಮೂನ್ ಸೂಟ್‌ನಂತೆ ಅಲಂಕರಿಸಿರುವ ದೃಶ್ಯಗಳು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿವೆ.

24
ಬಲೂನ್‌ನಿಂದ ಅಲಂಕಾರವಾದ ಬೋಗಿ

ಬೋಗಿಯನ್ನು ಬಲೂನ್‌ಗಳು, ಹೂವಿನ ಅಲಂಕಾರಗಳು ಮತ್ತು ಸಾವಿರಾರು ಗುಲಾಬಿ ದಳಗಳಿಂದ ಅಲಂಕರಿಸಲಾಗಿತ್ತು, ಜೊತೆಗೆ ಗೋಡೆಯ ಮೇಲೆ "ಐ ಲವ್ ಯು" ಎಂಬ ಸಂದೇಶವೂ ಇತ್ತು. ಕೆಂಪು ಹಾರ್ಟ್‌ ಆಕಾರದ ಬಲೂನುಗಳು, ರೊಮ್ಯಾಂಟಿಕ್ ಲೈಟಿಂಗ್ ಮತ್ತು ವಿಶೇಷವಾಗಿ ಸಜ್ಜುಗೊಳಿಸಿದ ಮಲಗುವ ವ್ಯವಸ್ಥೆ ಕಾಣಿಸುತ್ತದೆ. ಮೊದಲ ನೋಟಕ್ಕೆ ಇದು ರೈಲು ಕೋಚ್‌ಗಿಂತ ಐಷಾರಾಮಿ ಹೋಟೆಲ್ ಕೊಠಡಿಯಂತೆಯೇ ಕಾಣುತ್ತದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

34
ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್

ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು "ಇದು ಹೊಸದಾಗಿ ಮದುವೆಯಾದ ದಂಪತಿಗಳಿಗೆ ವಿಭಿನ್ನ ಅನುಭವ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು "ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಅಲಂಕಾರ ಅಗತ್ಯವೇ?" ಎಂದು ಪ್ರಶ್ನಿಸಿದ್ದಾರೆ.

ಯಾವುದೇ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪ್ರಕಾರ, ಪ್ರಯಾಣಿಕರು ಮೊದಲ ಎಸಿ ಕ್ಯಾಬಿನ್‌ನಲ್ಲಿ ಎರಡೂ ಬರ್ತ್‌ಗಳನ್ನು ಬುಕ್ ಮಾಡಿದ್ದರಿಂದ, ಆ ವಿಭಾಗವನ್ನು ಖಾಸಗಿ ಬಳಕೆಗೆ ಪರಿಣಾಮಕಾರಿಯಾಗಿ ಕಾಯ್ದಿರಿಸಲಾಗಿದೆ. ಅಲಂಕಾರಗಳು ರೈಲ್ವೆ ಆಸ್ತಿಗೆ ಹಾನಿ ಮಾಡಿಲ್ಲ ಅಥವಾ ರೈಲು ಕಾರ್ಯಾಚರಣೆಗೆ ಅಡ್ಡಿಯಾಗಲಿಲ್ಲ ಮತ್ತು ಅಂತಹ ವ್ಯವಸ್ಥೆಗಳನ್ನು ನಿಷೇಧಿಸುವ ಯಾವುದೇ ನಿರ್ದಿಷ್ಟ ನಿಯಮವಿಲ್ಲ ಎಂದು ಅಧಿಕಾರಿಗಳು ಹೇಳಿದರು.

44
ಸೆಟಪ್‌ ರೆಡಿ ಮಾಡಿರುವ ಮಹಾರಾಷ್ಟ್ರ ಮೂಲದ ವ್ಯಕ್ತಿ

ಈ ಸೆಟಪ್‌ಅನ್ನು ರೆಡಿ ಮಾಡಿರುವ ಮಹಾರಾಷ್ಟ್ರ ಮೂಲದ ರಾಹತ್ ಜಲ್ನಾದ ದಂಪತಿಗಳಿಗೆ ಕ್ಯಾಬಿನ್ ಬುಕ್ ಮಾಡಲಾಗಿದೆ ಎಂದು ಹೇಳಿದರು. ದಂಪತಿಗಳು ಔರಂಗಾಬಾದ್‌ನಿಂದ ಜಲ್ನಾ ರೈಲು ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ತಂಡವು ರೈಲು ವಿಭಾಗವನ್ನು ಮುಂಚಿತವಾಗಿ ಅಲಂಕರಿಸಿದೆ ಎಂದು ಅವರು ವಿವರಿಸಿದರು. ನಂತರ ದಂಪತಿಗಳು ಜಲ್ನಾ ನಿಲ್ದಾಣದಲ್ಲಿ ರೈಲು ಹತ್ತಿದರು. ಅಲಂಕಾರಕ್ಕಾಗಿ ರೈಲ್ವೆಯಿಂದ ಯಾವುದೇ ವಿಶೇಷ ಅನುಮತಿ ಅಗತ್ಯವಿಲ್ಲ ಎಂದು ಹೇಳಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories