Bigg Boss Kannada 12 ಸೀಸನ್ ಮಹಿಳಾ ಸ್ಪರ್ಧಿಗಳ ಶೈಕ್ಷಣಿಕ ಅರ್ಹತೆಗಳು; ಮಲ್ಲಮ್ಮ ಓದಿದ್ದೆಷ್ಟು?

Published : Oct 16, 2025, 05:56 PM IST

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಸೀಸನ್ 12ರ ಮನೆಯೊಳಗಿರುವ ಸ್ಪರ್ಧಿಗಳ ಶೈಕ್ಷಣಿಕ ಅರ್ಹತೆ ಏನು ಎಂಬುದು ಇಲ್ಲಿದೆ ನೋಡಿ. ಡಿಗ್ರಿ, ಇಂಜಿನಿಯರ್, ಟೀಚರ್‌ನಿಂದ ಏನೂ ವಿದ್ಯಾಭ್ಯಾಸ ಇಲ್ಲದ ಗೃಹಿಣಿವರೆಗಿನ ಎಲ್ಲ ನವ ದುರ್ಗೆಯರ ಮಾಹಿತಿ ಇಲ್ಲಿದೆ ನೋಡಿ…

PREV
110
ಸ್ಪಂದನಾ ಸೋಮಣ್ಣ:

ತಮ್ಮ ವೃತ್ತಿಜೀವನಕ್ಕೆ ಶಿಕ್ಷಣದ ಬಲ ನೀಡಿದ್ದು, ನಟಿ ಸ್ಪಂದನಾ ಸೋಮಣ್ಣ ಅವರು ಎಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.

210
ರಾಶಿಕಾ ಶೆಟ್ಟಿ:

ರಾಶಿಕಾ ಶೆಟ್ಟಿ ಅವರು ಸಾಮಾನ್ಯ ಪದವೀಧರೆ ಆಗಿದ್ದರೂ, ಅದಕ್ಕೆ ಪೂರಕವಾಗಿ ಫ್ಯಾಶನ್ ಡಿಸೈನಿಂಗ್ ಕೋರ್ಸ್‌ ಅನ್ನು ಕೂಡ ಮಾಡಿದ್ದಾರೆ.

310
ಅಶ್ವಿನಿ ಗೌಡ:

ಇವರ ಜೀವನದ ಪಯಣ ಸ್ವಲ್ಪ ವಿಭಿನ್ನವಾಗಿದ್ದು, ಓದುತ್ತಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಅವರು ಇತ್ತೀಚೆಗೆ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಇವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ತಮ್ಮ ಜೀವನದ ಸವಾಲುಗಳನ್ನು ಹೇಗೆ ಎದುರಿಸಿದರು ಎಂಬುದು ಕುತೂಹಲಕಾರಿಯಾಗಿದೆ.

410
ಕಾವ್ಯ ಶೈವ:

ಇವರು ಜೆಎಸ್‌ಎಸ್‌ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪಡೆದಿದ್ದಾರೆ.

510
ಮಂಜು ಭಾಷಿಣಿ:

ಕಿರುತೆರೆಯಲ್ಲಿ ಮನೆ ಮಾತಾಗಿರುವ ಮಂಜುಭಾಷಿಣಿ ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಸೈಕಾಲಜಿ ಹಾಗೂ ಜರ್ನಲಿಸಂ ವಿಭಾಗದಲ್ಲಿ ಪದವಿ (Degree) ಪಡೆದಿದ್ದಾರೆ.

610
ರಕ್ಷಿತಾ ಶೆಟ್ಟಿ:

ಮುಂಬೈನ ವಿವಾ ಕಾಲೇಜಿನಲ್ಲಿ ರಕ್ಷಿತಾ ಶೆಟ್ಟಿ ಬಿಎಎಂಎಂಸಿ (Bachelor of Arts in Mass Media Communication) ಪದವಿ ಪಡೆದಿದ್ದು, ಮಾಧ್ಯಮ ಮತ್ತು ಕಮ್ಯುನಿಕೇಷನ್ ಕ್ಷೇತ್ರದಲ್ಲಿ ಪರಿಣತಿ ಪಡೆದಿದ್ದಾರೆ.

710
ನಿರೂಪಕಿ ಜಾಹ್ನವಿ:

ನ್ಯೂಸ್ ಆಂಕರ್ ಆಗಿ ಜನಪ್ರಿಯತೆ ಪಡೆದಿರುವ ಜಾಹ್ನವಿ ಕೂಡ ಪದವೀಧರೆ. ವಿಶೇಷವೆಂದರೆ, ಮದುವೆಯಾದ ಬಳಿಕ ಅವರು ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

810
ಅಶ್ವಿನಿ ಎಸ್ ಎನ್:

ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಕಾಲೇಜು ಜಯನಗರದಲ್ಲಿ ಅಶ್ವಿನಿ ಎಸ್ ಎನ್ ತಮ್ಮ ಪದವಿ ಶಿಕ್ಷಣವನ್ನು ಪಡೆದಿದ್ದಾರೆ.

910
ಮಲ್ಲಮ್ಮ:

ಮಲ್ಲಮ್ಮ ಉತ್ತರ ಕರ್ನಾಟಕ ಮೂಲದವರಾಗಿದ್ದು, ಅವರು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದಾರೆ. ಅವರು 2 ಅಥವಾ 3ನೇ ತರಗತಿ ಓದಿದ್ದಾರೆ. ಆದರೆ, ಪೂರ್ಣವಾದ ಅಕ್ಷರ ಜ್ಞಾನ ಅವರಿಗಿಲ್ಲ. ಅವರ ಸಹಿ ಮಾತ್ರ ಮಾಡಬಲ್ಲರು.

1010
ಫಿನಾಲೆ ವಾರದಲ್ಲಿ ಯಾರು ಉಳಿಯುತ್ತಾರೆ:

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಸೀಸನ್ 12ರ ಮನೆಯೊಳಗಿರುವ ಸ್ಪರ್ಧಿಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸಿನಿಮಾ, ಕಿರುತೆರೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಗುರುತಿಸಿಕೊಂಡಿರುವ ಕೆಲವರು ಈ ಬಾರಿ ಬಿಗ್ ಬಾಸ್ ಮನೆ ಸದಸ್ಯರಾಗಿದ್ದಾರೆ. ಅವರ ವೃತ್ತಿಜೀವನದ ಜೊತೆಗೆ ನಿಜವಾದ ವಿದ್ಯಾರ್ಹತೆ ಏನು ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಇನ್ನು ಫಿನಾಲೆ ವಾರದಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳಾದ ರಾಶಿಕಾ ಮತ್ತು ಅಶ್ವಿನಿ ಗೌಡ ಅವರು ಫಿನಾಲೆ ಕಂಟೆಂಡರ್ ಆಗಿದ್ದಾರೆ. ಇದೀಗ ಉಳಿದವರ ಪೈಕಿ ಯಾರು ಸೇಫ್ ಆಗಿ ಮನೆಯಲ್ಲಿರುತ್ತಾರೆ? ಯಾರು ಮನೆಯಿಂದ ಹೊರಗೆ ಹೋಗಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

Read more Photos on
click me!

Recommended Stories