ಕೇರಳ ಮೂಲದ ನಿಮಿಷಾ ಪ್ರಿಯಾ ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದೊಂದಿಗೆ ಯೆಮೆನ್‌ನಲ್ಲಿಯೇ ನಿಮಿಷಾ ಪ್ರಿಯಾ ವಾಸವಾಗಿದ್ದರು. ಜಾಗತಿಕ ಮಟ್ಟದ ಬೆಳವಣಿಗೆಯಿಂದ ಗಂಡ ಮತ್ತು ಮಗಳು ಭಾರತಕ್ಕೆ ಹಿಂದಿರುಗಿದ್ದರು. ಆದ್ರೆ ಅಲ್ಲಿಯೇ ಉಳಿದುಕೊಂಡಿದ್ದ ನಿಮಿಷಾ ಪ್ರಿಯಾ, ಯೆಮೆನ್ ಪ್ರಜೆ ತಲಾಲ್ ಪಾಲುದಾರಿಕೆಯಲ್ಲಿ ಕ್ಲಿನಿಕ್ ಆರಂಭಿಸಿದ್ದರು.