ಸಂಗೀತ ಪ್ರಿಯರಿಗೆ ಮೈಥಿಲಿ ಠಾಕೂರ್ (Maithili Thakur) ಹೆಸರು ಚಿರಪರಿಚಿತ. ಶಾಸ್ತ್ರೀಯ ಸಂಗೀತ ಜಾನಪದ ಸಂಗೀತದಲ್ಲಿ ಹಿನ್ನೆಲೆ ಗಾಯಕಿಯಾಗಿರುವ ಮೈಥಿಲಿ ಹಿಂದಿ , ಬಂಗಾಳಿ , ಮೈಥಿಲಿ , ಉರ್ದು , ಮರಾಠಿ , ಭೋಜ್‌ಪುರಿ , ಪಂಜಾಬಿ , ತಮಿಳು , ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾಂಪ್ರದಾಯಿಕ ಜಾನಪದ ಸಂಗೀತವನ್ನು ಹಾಡಿ ಸೈ ಎನ್ನಿಸಿಕೊಂಡಿದ್ದಾರೆ. ಅದರಲ್ಲಿಯೂ ರಾಮಾಯಣ, ಮಹಾಭಾರತ ಸೇರಿದಂತೆ ಪೌರಾಣಿಕ ಉಪಕಥೆ ರಸವತ್ತಾಗಿ ಹೇಳುವುದರಲ್ಲಿ ಈಕೆ ನಿಪುಣೆ.