ಸ್ಪಂದನವಿಲ್ಲದ ಶೌರ್ಯನ ಪ್ರವಾಸಕ್ಕೆ ವಿಜಯ್ ರಾಘವೇಂದ್ರ ಸಾಥ್!

Published : Apr 11, 2025, 11:49 PM ISTUpdated : Apr 12, 2025, 03:28 PM IST

ನಟ ವಿಜಯ್ ರಾಘವೇಂದ್ರ ಮಗನ ಪರೀಕ್ಷೆ ಮುಗಿದ ನಂತರ ಗೋವಾ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಅಮ್ಮನ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತಿರುವ ವಿಜಯ್, ಮಗನಿಗೆ ಸಂತಸ ನೀಡುತ್ತಿದ್ದಾರೆ. ಶೌರ್ಯನ ಸ್ನೇಹಿತರೂ ಕೂಡ ಈ ಪ್ರವಾಸಕ್ಕೆ ಸಾಥ್ ನೀಡಿದ್ದಾರೆ. ಇದರಲ್ಲಿ ನಟ ರಾಘವೇಂದ್ರ ಚಿಕ್ಕ ಮಕ್ಕಳಂತಾಗಿದ್ದಾರೆ.

PREV
16
ಸ್ಪಂದನವಿಲ್ಲದ ಶೌರ್ಯನ ಪ್ರವಾಸಕ್ಕೆ ವಿಜಯ್ ರಾಘವೇಂದ್ರ ಸಾಥ್!

ಕನ್ನಡ ಚಿತ್ರರಂಗದ ಬೆಸ್ಟ್‌ ಹ್ಯೂಮನ್ ಎಂದೇ ಬಿಂಬಿತವಾಗಿರುವ ನಟ ವಿಜಯ್ ರಾಘವೇಂದ್ರ ಮಗನ ಪರೀಕ್ಷೆ ಮುಗಿದ ನಂತರವೇ ಆತನಿಗೆ ಬೇಸರವನ್ನು ಮರೆಸಲೆಂದು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಮ್ಮನ ಸ್ಥಾನವನ್ನು ತುಂಬುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.

26

ಇತ್ತೀಚೆಗೆ ಮಗನ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ನಟ ವಿಜಯ್ ರಾಘವೇಂದ್ರ ಅವರು ತನ್ನ ಮಗ ಶೌರ್ಯನಿಗೆ ಅಮ್ಮನ ನೆನಪು ಕಾಡದಿರಲಿ ಹಾಗೂ ಅಮ್ಮ ಮಾಡುತ್ತಿದ್ದ ಎಲ್ಲ ದೇವರ ಪ್ರಾರ್ಥನೆಗಳನ್ನು ತಾನೇ ಮಾಡುವುದಕ್ಕೆಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮಗನ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ದೇವರ ಆಶೀರ್ವಾದ ತುಂಬಾ ಮುಖ್ಯವಾಗಿದೆ ಎಂದು ಹೇಳಿದ್ದರು.

ಇದರಲ್ಲಿ ಆಶ್ಚರ್ಯ ಏನೆಂದರೆ ಎರಡು ವರ್ಷಗಳ ಹಿಂದೆ ವಿಜಯ್ ಧರಿಸಿದ್ದ ಶರ್ಟ್ ಹಾಗೂ ಈ ಸಲ ಭೇಟಿ ನೀಡಿದಾಗ ಧರಿಸಿರುವ ಶರ್ಟ್ ಆಗಿತ್ತು. ಈ ಕುರಿತ ಫೋಟೋವನ್ನು ನೋಡಿದ ನೆಟ್ಟಿಗರು ಸ್ಪಂದನಾ ಮೇಲಿನ ಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಗನ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು

36

ಇದೀಗ ಸ್ವತಃ ವಿಜಯ್ ರಾಘವೇಂದ್ರ ಅವರು ಮಗನಿಗೆ ಎಲ್ಲ ಖುಷಿಯಲ್ಲಿಯೂ ಅಮ್ಮ ಸ್ಥಾನ ತುಂಬಲು ತಾನೇ ಅಪ್ಪ-ಅಮ್ಮ ಎರಡು ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮಗನಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದೂ ಅಲ್ಲದೇ ಈಗ ಪರೀಕ್ಷೆ ಮುಗಿಯುತ್ತಿದ್ದಂತೆ ಶೌರ್ಯನನ್ನು ಕರೆದುಕೊಂಡು ಗೋವಾ ಪ್ರವಾಸಕ್ಕೆ ಹೋಗಿದ್ದಾರೆ.

ಈ ಹಿಂದೆ ಶೌರ್ಯನ ಜೊತೆಗೆ ಎಷ್ಟು ಸಂತಸದಿಂದ ಇದ್ದರೀ ಅಷ್ಟೇ ಸಂತೋಷವಾಗಿ ಕಾಲ ಕಳೆಯುವುದಕ್ಕೆ ಹಾಗೂ ಹಿಂದಿನ ಎಲ್ಲ ನೆನಪುಗಳನ್ನು ರೀ-ಕ್ರಿಯೇಟ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.
 

46

ಪರೀಕ್ಷೆ ಮುಗಿಯುತ್ತಿದ್ದ ಹಾಗೆ ಮಗನ ಜೊತೆಗೆ ಬೀಚ್ ವೆಕೇಷನ್‌ಗೆ ವಿಜಯ ರಾಘವೇಂದ್ರ ತೆರಳಿದ್ದಾರೆ. ಪುತ್ರ ಶೌರ್ಯ ಜೊತೆಗೆ ವಿಜಯ ರಾಘವೇಂದ್ರ ಗೋವಾದಲ್ಲಿ ವಿಹಾರ ಮಾಡುತ್ತಿದ್ದಾರೆ. ಗೋವಾದ ರೆಸಾರ್ಟ್ ಒಂದರಲ್ಲಿ ಶೌರ್ಯ ಮತ್ತು ಅವನ ಸ್ನೇಹಿತರ ಜೊತೆಗೆ ವಿಜಯ ರಾಘವೇಂದ್ರ ಸಂತಸದಿಂದ ಸಮಯ ಕಳೆಯುತ್ತಿದ್ದಾರೆ. ಈ ಕುರಿತ ಫೋಟೋಗಳನ್ನು ಕೂಡ ಸಾಮಾಜಿಕ ಜಾತಲಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲ ವಿಜಯ್ ರಾಘವೇಂದ್ರ ಪುತ್ರ; ಫೋಟೋ ನೋಡಿ ಎಲ್ಲರೂ ಶಾಕ್

56

ಮಗನಿಗೆ ಅಮ್ಮನ ನೆನಪು ಕಾಡದಿರುವಂತೆ ಮಾಡಲು ಶೌರ್ಯನಿಗೆ ಮಾ.26ರಂದು ಪರೀಕ್ಷೆ ಮುಗಿದ ದಿನವೇ 'EXAM' ಇವತ್ತು ಮುಗೀತು. ಅಮ್ಮನ ಬೆಳಕಿನಲ್ಲಿ ಬೆಳಗು ಕಂದ' ಎಂದು ಶೌರ್ಯನಿಗೆ ವಿಜಯ ರಾಘವೇಂದ್ರ ಹಾರೈಸಿದ್ದರು. ಇದಾದ ನಂತರ ಗೋವಾಕ್ಕೆ ಹಾರಿ, ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

66

ಗೋವಾದ ರೆಸಾರ್ಟ್‌ನಲ್ಲಿ ಪೂಲ್ ಬ್ರೇಕ್ ಫಾಸ್ಟ್ ಮಾಡಿದ ವಿಜಯ್ ರಾಘವೇಂದ್ರ ಮತ್ತು ಶೌರ್ಯ, ಅಪ್ಪ-ಮಗನ ಕೀಟಲೆಗಳನ್ನು ಅಲ್ಲಿಯೂ ಪ್ರದರ್ಶನ ಮಾಡಿದ್ದಾರೆ. ಅಪ್ಪ-ಮಗನ ಕೀಟಲೆ ಮುಂಚೆ ಹೇಗಿತ್ತೋ,ಈಗಲೂ ಕೂಡ ಹಾಗೆಯೇ ಇದೆ ಎಂಬುದನ್ನು ಫೋಟೋ ಸಮೇತ ತೋರಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿಯನ್ನು ವ್ಯಕ್ತಪಡಿಸಿ ಹಾರ್ಟ್ ಇಮೋಜಿಗಳನ್ನು ಕಳುಹಿಸಿದ್ದಾರೆ.

Read more Photos on
click me!

Recommended Stories