ಆಂಧ್ರ ಪ್ರದೇಶದ ಡೆಪ್ಯೂಟಿ ಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಚಿಕ್ಕ ಮಗ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ಸಮ್ಮರ್ ಕ್ಯಾಂಪ್‌ಗೆ ಹೋಗಿ ಅಗ್ನಿ ಅವಘಡಕ್ಕೆ ಗುರಿಯಾಗಿದ್ದಾರೆ. ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಶ್ವಾಸಕೋಶಕ್ಕೆ ಹೊಗೆ ಹೋಗಿದೆ. ಇದರಿಂದ ಉಸಿರಾಡಲು ತೊಂದರೆಯಾಗಿದೆ. ಮಗನಿಗೆ ಅಪಘಾತವಾದ ವಿಷಯ ತಿಳಿದು ಪವನ್ ಕಲ್ಯಾಣ್ ಸಿಂಗಾಪುರಕ್ಕೆ ತಲುಪಿದ್ದಾರೆ. ಪವನ್ ಜೊತೆಗೆ ಚಿರಂಜೀವಿ, ಸುರೆಖಾ ಕೂಡ ಸಿಂಗಾಪುರಕ್ಕೆ ಹೋಗಿದ್ದಾರೆ. ಅಲ್ಲಿಗೆ ಹೋದ ಪವನ್ ಸಿಂಗಾಪುರದಿಂದ ಮಗನ ಹೆಲ್ತ್ ಅಪ್‌ಡೇಟ್ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಆರೋಗ್ಯ ಚೆನ್ನಾಗಿದೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.