ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!

Published : May 01, 2025, 12:09 PM ISTUpdated : May 01, 2025, 12:27 PM IST

ನಟ ಷಣ್ಮುಖ ಗೋವಿಂದರಾಜ್ ಚೆನ್ನಾಗಿಲ್ಲ, ಮೂಗು ಕೆಟ್ಟದಾಗಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಕಾಮೆಂಟ್‌ಗೆ ಸ್ವತಃ ಅವರೇ  ರಿಯಾಕ್ಷನ್‌ ಕೊಟ್ಟಿದ್ದಾರೆ... ಹೌದು, ಷಣ್ಮುಖ ಗೋವಿಂದರಾಜ್ ಅವರು ತಮ್ಮ ಮೂಗಿನ ಬಗ್ಗೆ ಬಂದಿರುವ ಟೀಕೆಗೆ.. 

PREV
112
ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!

ಸದ್ಯ, ನಟ ಡಾ ರಾಜ್‌ಕುಮಾರ್ ಕುಟುಂಬದ ಸಂಬಂಧಿ ಷಣ್ಮುಖ ಗೋವಿಂದರಾಜ್ (Shanmukha Govindaraj) ಅವರು ಸುದ್ದಿಯಲ್ಲಿದ್ದಾರೆ. ಕಾರಣಗಳು ಎರಡು.. ಒಂದು, ಅವರು ಸಿನಿಮಾರಂಗಕ್ಕೆ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಎರಡು, ಷಣ್ಮುಖ ಗೋವಿಂದರಾಜ್ ಅವರ ಮೂಗಿನ ಬಗ್ಗೆ ಬರುತ್ತಿರುವ ಕೆಟ್ಟ ಕಾಮೆಂಟ್‌ಗಳು.

212

ಅಂದ್ರೆ, ನಟ ಷಣ್ಮುಖ ಗೋವಿಂದರಾಜ್ ಲುಕ್ ಚೆನ್ನಾಗಿಲ್ಲ, ಮೂಗು ಕೆಟ್ಟದಾಗಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಕಾಮೆಂಟ್‌ಗೆ ಸ್ವತಃ ಅವರೇ ಕೊಟ್ಟ ರಿಯಾಕ್ಷನ್‌. ಹೌದು ಷಣ್ಮುಖ ಗೋವಿಂದರಾಜ್ ಅವರು ತಮ್ಮ ಮೂಗಿನ ಬಗ್ಗೆ ಮಾಡುತ್ತಿರುವ ಕೆಟ್ಟ ಕಾಮೆಂಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. 
 

312

ಸಿನಿಮಾ ನಟರು ತಮ್ಮ ಮೂಗು, ಧ್ವನಿ, ಬಣ್ಣ, ಎತ್ತರ, ಹೀಗೆ ನಾನಾ ರೀತಿಯಲ್ಲಿ ಟೀಕೆಗೆ ಒಳಗಾಗುವುದು ಹೊಸ ಸಂಗತಿಯೇನೂ ಅಲ್ಲ. ಡಾ ರಾಜ್‌ಕುಮಾರ್ ಕೂಡ ಅವರ ಮೂಗಿನ ಬಗ್ಗೆ ಟೀಕೆ ಅನುಭವಿಸಿದ್ದರು. ಅಮಿತಾಭ್ ಬಚ್ಚನ್ ಧ್ವನಿ, ರಜನಿಕಾಂತ್ ಮೈಬಣ್ಣ ಹೀಗೆ ಅನೇಕರು ನಾನಾ ವಿಧದಲ್ಲಿ ಟೀಕೆಗೆ ಗುರಿಯಾಗಿದ್ದರು. 

412

ಆದರೆ, ಅವರು ಅದನ್ನೆಲ್ಲಾ ಮೀರಿ ಅಗಾಧ ಎಂಬ ರೀತಿಯಲ್ಲಿ ಬೆಳೆದರು. ಆದರೆ, ಕೆಲವರು ಟೀಕೆಗೆ ಹೆದರಿ, ಅಥವಾ ಬೇರೆ ಬೇರೆ ಕಾರಣಗಳಿಗೆ ಸಾಧನೆ ಮಾಡಲು ಸಾಧ್ಯವಾಗದೇ ಮೂಲೆಗುಂಪಾಗಿದ್ದೂ ಇದೆ. 

512

ಹಾಗಿದ್ದರೆ, ಈ ಷಣ್ಮುಖ ಗೋವಿಂದರಾಜ್ ಯಾರು? ಅವರು ಈ ಮೊದಲು ಎನು ಮಾಡುತ್ತಿದ್ದರು? ಇಷ್ಟು ದಿನ ಅವರೆಲ್ಲಿ ಇದ್ದರು? ಈಗ ಸಿನಿಮಾ ನಟನೆಗೆ ಎಂಟ್ರಿ ಕೊಟ್ಟಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ನೋಡಿ.. 
 

612

ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಈ ಷಣ್ಮುಖ ಗೋವಿಂದರಾಜ್. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಬಿಎಂ ಓದಿರುವ ಇವರು, ಮೆಲ್ಬರ್ನ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಎಂಬಿಎ ಮುಗಿಸಿದ ಬಳಿಕ ಮೆಲ್ಬರ್ನ್‌ನಲ್ಲಿಯೇ ಕೆಲಸವನ್ನೂ ಮಾಡುತ್ತಿದ್ದರು. ನಂತರ ಬೆಂಗಳೂರಿಗೆ ಶಿಫ್ಟ್ ಆಗಿ, ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 

712

ಕಳೆದ ಕೆಲವು ವರ್ಷಗಳಿಂದ ತಂದೆ ಎಸ್‌ಎ ಗೋವಿಂದರಾಜ್ ಜೊತೆ ಫಿಲ್ಮ್ ಯೂನಿಟ್ ಹಾಗೂ ಕನ್ಸ್‌ಟ್ರಕ್ಷನ್ ಫೀಲ್ಡ್‌ನಲ್ಲೂ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ನಟರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಷಣ್ಮುಖ ಗೋವಿಂದರಾಜ್,  2018ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ವಕೀಲರಾದ ಬರೂರು ನಾಗರಾಜ್ ಅವರ ಮಗಳಾದ ಸಿಂಧೂ ಅವರನ್ನು ವಿವಾಹವಾಗಿದ್ದಾರೆ. 
 

812

ಷಣ್ಮುಖ ಗೋವಿಂದರಾಜ್ ಸದ್ಯ ' ನಿಂಬಿಯಾ ಬನಾದ ಮ್ಯಾಗ' ಸಿನಿಮಾ ಮೂಲಕ ಚೆಂದನವನ ಪ್ರವೇಶಿಸಿದ್ದಾರೆ. ಜೊತೆಗೆ,  'ಚಿನ್ನದ ಮಲ್ಲಿಗೆ ಹೂವೇ' ಎಂಬ ಇನ್ನೊಂದು ಸಿನಿಮಾದಲ್ಲಿಯೂ ನಟಿಸುತ್ತಿದ್ದು ಕಲಾವಿದರಾಗಿ ಜೀವನದಲ್ಲಿ ಮುಂದೆ ಬರಲು ಬಯಸಿ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. 
 

912

ಆದರೆ, ಅವರ ಸಿನಿಮಾದ ಪ್ರಚಾರ ಶುರುವಾಗುತ್ತಿದ್ದಂತೆ ಷಣ್ಮುಖ ಗೋವಿಂದರಾಜ್ ಅವರು ತಮ್ಮ ಮೂಗಿನ ಬಗ್ಗೆ ಟೀಕೆ ಎದುರಿಸುತ್ತಿದ್ದಾರೆ. ಹಲವರು ಷಣ್ಮುಖ ಗೋವಿಂದರಾಜ್ ಮೂಗಿನ ಬಗ್ಗೆ 'ತುಂಬಾ ಕೆಟ್ಟದಾಗಿದೆ. ಅಟ್‌ಲೀಸ್ಟ್‌ ಅದನ್ನು ರಿಪೇರಿ ಮಾಡಿಸಿಕೊಳ್ಳಬಾರದಾ? ಹಣಕ್ಕೂ ಕೊರತೆ ಏನಿಲ್ಲ' ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕುತ್ತಿದ್ದಾರೆ. 

1012

ಇನ್ನೂ ಕೆಲವರು, ಸಿನಿಮಾರಂಗದವರು ಯೋಗ್ಯತೆ ಇರುವ ಬೇರೆಯವರಿಗೆ ಅವಕಾಶ ಕೊಟ್ಟು ಬೆಳೆಸುವ ಬದಲು, ತಾವು ಹಾಗೂ ತಮ್ಮ ಕುಟುಂಬದವರೇ ನಟನೆ ಮಾಡುತ್ತ ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. 

1112

ಇನ್ನೂ ಕೆಲವರು, 'ಬಾಲಿವುಡ್ ಮಾತ್ರವಲ್ಲ, ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲಾ ಕಡೆ ನೆಪೋಟಿಸಂ ಇದೆ. ಯೋಗ್ಯತೆ, ಅರ್ಹತೆ ಇರೋರಿಗೆ  ಚಿತ್ರರಂಗದಲ್ಲಿ ಬೆಳೆಯಲು ಬಿಡಲ್ಲ. ಅವರವರೇ ನಟರು-ನಿರ್ಮಾಪಕರು ಆಗುತ್ತ, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ' ಎಂದು ಟೀಕೆ ಮಾಡುತ್ತಿದ್ದಾರೆ. 

1212

ತಮ್ಮ ಮೂಗಿನ ಬಗ್ಗೆ, ನೆಪೋಟಿಸಂ ಬಗ್ಗೆ, ಕುಟುಂಬ ಸಿನಿಮಾ-ರಾಜಕಾರಣದ ಬಗ್ಗೆ ಬಂದಿರುವ ಟೀಕೆಗಳನ್ನು ಷಣ್ಮುಖ ಗೋವಿಂದರಾಜ್ ಅವರು ಅರಿತಿದ್ದಾರೆ. ಆದ್ದರಿಂದಲೇ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ, ನೋಡಿ.. 

ನಾನು ಇರೋದ್ರ ಬಗ್ಗೆ, ನನ್ ಮೂಗಿನ ಬಗ್ಗೆ, ನನ್ ಆಕಾರದ ಬಗ್ಗೆ ಜನ ಕಾಮೆಂಟ್ ಮಾಡ್ತಾರೆ.. ಅದು ಅವ್ರಿಗೇ ಬಿಟ್ಟಿದ್ದು.. ಯಾಕೆ ಅಂದ್ರೆ ಈಗ, ಅದನ್ನ ತೀರಾ ಮನಸ್ಸಿಗೆ ತಗೊಂಡು, ಇದು ಬೇಡ ಅಂದ್ರೆ ನಾನು ಬಿಟ್ಟು ಓಡಿ ಹೋಗ್ಬೇಕು... ಅಷ್ಟೇ....  ಎಂದಿದ್ದಾರೆ ಷಣ್ಮುಖ ಗೋವಿಂದರಾಜ್. 

Read more Photos on
click me!

Recommended Stories