ಅವರು ಸಾನ್ವಿಯವರ ಶಕ್ತಿಯುತವಾದ ಗಾಯನವನ್ನು ವಿಶೇಷವಾಗಿ ಶ್ಲಾಘಿಸಿದ್ದು, "ಸಾನ್ವಿಗೆ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಹಾದಿಯನ್ನು ಕಂಡುಕೊಳ್ಳುವ ಅಪಾರ ಸಾಮರ್ಥ್ಯವಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಬ್ಬ ಯುವ ಪ್ರತಿಭೆಗೆ, ಅದರಲ್ಲೂ ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುತ್ತಿರುವವರಿಗೆ, ನಾನಿಯಂತಹ ದೊಡ್ಡ ಸ್ಟಾರ್‌ನಿಂದ ಇಂತಹ ಪ್ರೋತ್ಸಾಹ ಸಿಗುವುದು ದೊಡ್ಡ ವಿಷಯವೇ ಸರಿ.