21ನೇ ವಯಸ್ಸಿಗೆ ವಿಶ್ವಸುಂದರಿ ಪಟ್ಟ ಗೆದ್ದ ಐಶ್ವರ್ಯಾ ರೈಗೆ 'ನಾಚ್‌ನೇ ವಾಲಿ' ಎಂದ ರಾಹುಲ್‌ ಗಾಂಧಿ!

Published : Feb 21, 2024, 05:27 PM IST

ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯ ವೇಳೆ ಐಶ್ವರ್ಯಾ ರೈ ಅವರನ್ನು ನಾಚ್‌ನೇ ವಾಲಿ (ಕುಣಿಯುವವಳು) ಎಂದು ರಾಹುಲ್‌ ಗಾಂಧಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಐಶ್‌ ಅಭಿಮಾನಿಗಳು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

PREV
110
21ನೇ ವಯಸ್ಸಿಗೆ ವಿಶ್ವಸುಂದರಿ ಪಟ್ಟ ಗೆದ್ದ ಐಶ್ವರ್ಯಾ ರೈಗೆ 'ನಾಚ್‌ನೇ ವಾಲಿ' ಎಂದ ರಾಹುಲ್‌ ಗಾಂಧಿ!

ರಾಹುಲ್‌ ಗಾಂಧಿ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯ ವೇಳೆ ಆಡುತ್ತಿರುವ ಮಾತುಉಗಳು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ನಟಿ ಐಶ್ವರ್ಯಾ ರೈ ವಿರುದ್ಧ ನೀಡಿದ ಹೇಳಿಕೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

210

ವಾರಣಾಸಿಯಲ್ಲಿ ಮಾತನಾಡುತ್ತಾ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದ ರಾಹುಲ್‌ ಗಾಂಧಿ, ಇಂದು ದೇಶದ ಮಾಧ್ಯಮಗಳೆಲ್ಲವೂ ಅದಾನಿ, ಅಂಬಾನಿ ಕೈಯಲ್ಲಿದೆ ಎಂದಿದ್ದರು.

310

ಹಾಗೆ ಹೇಳುವ ಸಮಯದಲ್ಲಿ ಈ ಮಾಧ್ಯಮಗಳು ಒಂದೋ ಕುಳಿಯುತ್ತಿರುವ ಐಶ್ವರ್ಯಾ ರೈ ಅನ್ನು ತೋರಿಸುತ್ತಾರೆ. ಇಲ್ಲದೇ ಇದ್ದಲ್ಲಿ ಪ್ರಧಾನಿ ಮೋದಿ ಅವರನ್ನು ತೋರಿಸ್ತಾರೆ ಎಂದಿದ್ದರು.

410

ರಾಹುಲ್‌ ಗಾಂಧಿಯ ಈ ಕಾಮೆಂಟ್‌ಗಳು ಐಶ್ವರ್ಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್‌ ಗಾಂಧಿ ಐಶ್ವರ್ಯಾ ರೈ ಅವರನ್ನು ನಾಚ್‌ನೇ ವಾಲಿ ಎಂದು ಕರೆದಿರುವುದು ಸರಿಯಲ್ಲ ಎಂದಿದ್ದಾರೆ.

510

'ತನ್ನ 21 ವಯಸ್ಸಿನಲ್ಲಿ 'ಮಿಸ್ ವರ್ಲ್ಡ್' ಕಿರೀಟ ಗೆದ್ದ ಐಶ್ವರ್ಯ ರೈ ಬಚ್ಚನರನ್ನು "ನಾಚ್ ನೆ ವಾಲಿ" ಅಂತ ಕರೆಯುವ 54 ವರ್ಷದ 'ಯುವ ನಾಯಕ'ರಿಗೆ ನಾವು ಏನೆನ್ನಬೇಕು ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.

610

ಇನ್ನು ಐಶ್ವರ್ಯಾ ರೈಗೆ ನಾಚ್‌ನೇ ವಾಲಿ ಎಂದು ರಾಹುಲ್‌ ಗಾಂಧಿ ಕರೆದಿದ್ದರೂ, ಏನೂ ಪ್ರತಿಕ್ರಿಯೆ ನೀಡದ ಜಯಾ ಬಚ್ಛನ್‌ ವಿರುದ್ಧವೂ ಅಭಿಮಾನಿಗಳು ಕಿಡಿಕಾರಿದ್ದಾರೆ.

710

ಬೇರೆಲ್ಲಾ ವಿಚಾರಗಳ ಬಗ್ಗೆ ಮಾತನಾಡುವ ಜಯಾ ಬಚ್ಛನ್‌, ತಮ್ಮ ಸೊಸೆಯ ವಿರುದ್ಧ ರಾಹುಲ್‌ ಗಾಂಧಿ ಆಡಿರುವ ಮಾತುಗಳನ್ನು ಖಂಡಿಸಲೂ ಇಲ್ಲ ಎಂದಿದ್ದಾರೆ.

810

ಹಾಗಂತ ರಾಹುಲ್‌ ಗಾಂಧಿ ಐಶ್ವರ್ಯಾ ರೈ ಅವರನ್ನು ಟಾರ್ಗೆಟ್‌ ಮಾಡಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ರಾಮ ಮಂದಿರ ವಿಚಾರದಲ್ಲೂ ಐಶ್ವರ್ಯಾ ರೈ ಅವರನ್ನು ಟೀಕಿಸಿದ್ದರು.

910

ರಾಮ ಮಂದಿರಕ್ಕೆ ಅಮಿತಾಬ್‌ ಬಚ್ಛನ್‌ ಹಾಗೂ ಐಶ್ವರ್ಯಾ ರೈಗೆ ಆಹ್ವಾನ ಇರುತ್ತದೆ. ಆದರೆ, ದೇಶದ ಹಿಂದುಳಿದ ವರ್ಗದ ಜನರಿಗೆ ಇದನ್ನು ನೋಡುವ ಭಾಗ್ಯವಿಲ್ಲ ಎಂದಿದ್ದರು.

1010

ವಿಚಾರ ಏನೆಂದರೆ, ಐಶ್ವರ್ಯಾ ರೈಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವಿದ್ದರೂ, ಆ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಅಮಿತಾಬ್‌ ಬಚ್ಛನ್‌ ಹಾಗೂ ಅಭಿಷೇಕ್‌ ಬಚ್ಛನ್‌ ಈ ಕಾರ್ಯಕ್ರಮಕ್ಕೆ ಹೋಗಿದ್ದರು.

Read more Photos on
click me!

Recommended Stories