ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೂನಂ ಪಾಂಡೆ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ!

First Published | Feb 13, 2024, 5:29 PM IST

ತನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಕಾರಣಕ್ಕಾಗಿ ನಟಿ ಹಾಗೂ ಮಾಡೆಲ್‌ ಪೂನಮ್‌ ಪಾಂಡೆ ವಿರುದ್ಧ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿದೆ.

ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಮ್‌ ಪಾಂಡೆ ಸಾವು ಕಂಡಿದ್ದಾರೆ ಎಂದು ಸುದ್ದಿಯಾದ ಕೆಲವೇ ದಿನದಲ್ಲಿ ಈ ಸುದ್ದಿ ಫೇಕ್‌ ಎಂದು ಸ್ವತಃ ಪೂನಮ್ ಪಾಂಡೆ ಹೇಳಿದ್ದು ಎಲ್ಲರಿಗೂ ಗೊತ್ತಿರಬಹುದು.

ಗರ್ಭಕಂಠದ ಕ್ಯಾನ್ಸರ್‌ ಕುರಿತಾಗಿ ಜಾಗೃತಿ ಮೂಡಿಸಲು ತಾನು ಈ ಕೃತ್ಯ ಮಾಡಿದ್ದಾಗಿ ನಟಿ ಹಾಗೂ ಮಾಡೆಲ್‌ ಆಗಿರುವ ಪೂನಮ್‌ ಪಾಂಡೆ ಹೇಳಿದ್ದರೂ, ಇದು ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಕಾರಣವಾಗುವ ಸಾಧ್ಯತೆ ಇದೆ.

Tap to resize

ಈಗ ಪೂನಮ್‌ ಪಾಂಡೆ ಮಾತ್ರವಲ್ಲ ಆಕೆಯ ಮಾಜಿ ಪತಿ ಸ್ಯಾಮ್‌ ಬಾಂಬೆ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಫೈಜಾನ್‌ ಅನ್ಸಾರಿ ಹೆಸರಿನ ವ್ಯಕ್ತಿ ಇಬ್ಬರ ವಿರುದ್ಧವೂ ಮಾನಹಾನಿಯ ಕೇಸ್‌ ದಾಖಲು ಮಾಡಿದ್ದಾರೆ.

ತಮ್ಮ ಬಾಲಿಶ ವರ್ತನೆಯ ಮೂಲಕ ಕಾನ್ಸರ್‌ನ ಗಂಭೀರತೆಯನ್ನು ಅವರು ಕಡಿಮೆ ಮಾಡಿದ್ದಾರೆ. ಲಕ್ಷಾಂತರ ಜನರ ಭಾವನೆಗಳು ಹಾಗೂ ನಂಬಿಕೆ ವಿರುದ್ಧ ಆಟವಾಡಿದ್ದಾರೆ ಎಂದು ದೂರಿರುವ ಫೈಜಾನ್‌ ಅನ್ಸಾರಿ, ಪೂನಂ ಪಾಂಡೆ ಹಾಗೂ ಅಕೆಯ ಮಾಜಿ ಪತಿಯನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕಾನ್ಪುರ ಪೊಲೀಸ್‌ ವರಿಷ್ಠಾಧಿಕಾರಿಯ ಬಳಿಯಲ್ಲಿಯೇ ಫೈಜಾನ್‌ ಅನ್ಸಾರಿ ತಮ್ಮ ಕೇಸ್‌ಅನ್ನು ದಾಖಲು ಆಡಿದ್ದಾರೆ. ಪೂನಂ ಪಾಂಡೆ ಹಾಗೂ ಆಕೆಯ ಪತಿ ಸ್ಯಾಮ್‌ ಬಾಂಬೆ ಅಕೆಯ ಸಾವಿನ ಸುಳ್ಳು ಸುದ್ದಿಯನ್ನು ಹೇಳಿದ್ದಾರೆ.

ಇದರಿಂದಾಗಿ ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆಯನ್ನು ಲೇವಡಿ ಮಾಡಿದ್ದರೆ. ತನ್ನ ವೈಯಕ್ತಿಕ ಪಬ್ಲಿಸಿಟಿಗೆ ಕ್ಯಾನ್ಸರ್‌ನಂಥ ವಿಚಾರವನ್ನು ಬಳಸಿಕೊಳ್ಳುವ ಮೂಲಕ ಲಕ್ಷಾಂತರ ಭಾರತೀಯರ ಭಾವನೆ ಹಾಗೂ ನಂಬಿಕೆಗೆ ಘಾಸಿ ಮಾಡಿದ್ದಾರೆ ಎಂದು ದೂರಿದ್ದಾರೆ.

ಫೆಬ್ರವರಿ 2 ರಂದು ಪೂನಂ ಪಾಂಡೆ ಅವರ ಅಧಿಕೃತ ಇನ್ಸ್‌ಟಾಗ್ರಾಮ್‌ ಪೇಜ್‌ ಹಾಗೂ ಅವರ ಮ್ಯಾನೇಜರ್‌ ಕೂಡ ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಆಕೆ ಸಾವು ಕಂಡಿದ್ದರು ಎಂದಿದ್ದರು.

ಇಂದಿನ ಬೆಳಗ್ಗೆ ನಮಗೆ ಬಹಳ ಕಠಿಣವಾಗಿದೆ. ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ನಾವು ನಮ್ಮ ಪ್ರೀತಿ ಪಾತ್ರ ಪೂನಂ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ ಎಂದು ಪೋಸ್ಟ್‌ ಮಾಡಲಾಗಿತ್ತು.

ಕಾನ್ಪುರದ ಅವರ ನಿವಾಸದಲ್ಲಿಯೇ ಸಾವು ಕಂಡಿದ್ದಾಗಿ ತಿಳಿಸಲಾಗಿತ್ತಲ್ಲದೆ, ಕಾನ್ಪುರದಲ್ಲಿಯೇ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾಗಿತ್ತು.

ಮಧ್ಯಾಹ್ನದ ವೇಳೆ ಬಂದ ಸುದ್ದಿ ರಾತ್ರಿಯ ವೇಳೆ ಫೇಕ್‌ ಎನ್ನುವುದು ಖಚಿತವಾಗಿತ್ತು. ಮರುದಿನ ಸ್ವತಃ ಪೂನಂ ಪಾಂಡೆ ತಾನು ಬದುಕಿದ್ದಾಗಿ ಘೋಷಣೆ ಮಾಡಿದ್ದರು.

Latest Videos

click me!