'ಜಾನ್‌ ಸಿನಾ ಜೊತೆ ಜಾಹೀರಾತು ಅಂದ್ಕೊಂಡಿದ್ದೆ..' ಪೋರ್ನ್‌ ಸ್ಟಾರ್‌ ಜಾನಿ ಸಿನ್ಸ್‌ Add ಬಗ್ಗೆ ಏನಂದ್ರು ಭಾವನಾ!

First Published | Feb 16, 2024, 10:38 PM IST

ಪ್ರಖ್ಯಾತ ಹಾಗೂ ಕುಖ್ಯಾತ ಎರಡೂ ಆಗಿರುವ ಪೋರ್ನ್‌ಸ್ಟಾರ್‌ ಜಾನಿ ಸಿನ್ಸ್‌ ಜೊತೆ ಸೆಕ್ಸುವಲ್‌ ಹೆಲ್ತ್‌ಕೇರ್‌ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ನಟಿಸಿದ್ದ ಭಾವಣಾ ಚೌಹಾಣ್‌ ಈ ಬಗ್ಗೆ ಮಾತನಾಡಿದ್ದಾರೆ. ಇದೇ ಜಾಹೀರಾತಿನಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕೂಡ ಭಾಗಿಯಾಗಿದ್ದರು.
 

ಪ್ರಖ್ಯಾತ ಟಿವಿ ನಟಿ ಭಾವನಾ ಚೌಹಾಣ್‌ ಸಖತ್‌ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಒಂದು ಜಾಹೀರಾತು, ಸೆಕ್ಸುಯಲ್‌ ಹೆಲ್ತ್‌ಕೇರ್‌ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಇವರು ನಟಿಸಿರುವುದು ಪ್ರಖ್ಯಾತ ಹಾಗೂ ಕುಖ್ಯಾತ ಪೋರ್ನ್‌ಸ್ಟಾರ್‌ ಜಾನಿ ಸಿನ್ಸ್‌ ಜೊತೆ.

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕೂಡ ಈ ಜಾಹೀರಾತಿನಲ್ಲಿ ನಟಿಸಿದ್ದಾರೆ. ಇನ್ನು ಈ ಬ್ರ್ಯಾಂಡ್‌ಗೆ ರಣವೀರ್‌ ಸಿಂಗ್‌ ಹೂಡಿಕೆದಾರರೂ ಆಗಿದ್ದಾರೆ. ಅತ್ತೆ-ಸೊಸೆ ಧಾರವಾಹಿಯ ಥೀಮ್‌ನಲ್ಲಿ ಈ ಜಾಹೀರಾತು ಮೂಡಿ ಬಂದಿದೆ.

Tap to resize

ಜಾಹೀರಾತು ಪ್ರಸಾರವಾದ ಬೆನ್ನಲ್ಲಯೇ ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಅದಕ್ಕೆ ಕಾರಣ ಪೋರ್ನ್‌ ಸ್ಟಾರ್‌ ಜಾನಿ ಸಿನ್ಸ್‌. ಇನ್ನು ಭಾವನಾ ಚೌಹಾಣ್‌ ಅವರಿಗೂ ತಾವು ಜಾನಿ ಸಿನ್ಸ್‌ ಜೊತೆ ನಟಿಸುತ್ತಿರುವುದು ಕೊನೆಯವರೆಗೂ ಗೊತ್ತಿರಲಿಲ್ಲವಂತೆ!

ಈ ಬಗ್ಗೆ ಮಾತನಾಡಿರುವ ಭಾವನಾ ಚೌಹಾಣ್‌, ನಾನು ಜಾನ್ ಸೀನಾ (ಪ್ರಖ್ಯಾತ WWE ಸ್ಟಾರ್‌) ಎಂದುಕೊಂಡಿದ್ದೆ. ಅದಲ್ಲದೆ, ಸ್ಕ್ರಿಪ್ಟ್‌ ನೀಡುವಾಗ ಬರೀ ಜಾನ್‌ ಎಂದೇ ಹೆಸರು ಹಾಕಿದ್ದರಿಂದ ನಾನು ಅವರೇ ಇರಬಹುದು ಎಂದುಕೊಂಡಿದ್ದೆ.

ಆಡಿಷನ್‌ ನೀಡುವ ವೇಳೆ ಸ್ಕ್ರಿಪ್ಟ್‌ ಓದಿದಾಗ ಇದು ಬಹಳ ತಮಾಷೆಯಾಗಿದೆ ಎಂದುಕೊಂಡೆ, ನನ್ನೊಂದಿಗೆ ಪತಿಯಾಗಿ ಜಾನ್‌ ನಟಿಸುತ್ತಾರೆ ಎಂದಾಗ ನಾನು WWE ಸ್ಟಾರ್‌ ಜಾನ್‌ ಸೀನಾ ಎಂದುಕೊಂಡಿದ್ದೆ ಎಂದು ಭಾವನಾ ಹೇಳಿದ್ದಾರೆ.

ನಾನು ಯಾಕೆ ತಪ್ಪಾಗಿ ಅರ್ಥೈಸಿಕೊಂಡೇ ಎನ್ನುವುದೇ ನನಗೆ ಅರ್ಥವಾಗಿಲ್ಲ. ನನ್ನ ಕನಸಿನಲ್ಲೂ ಜಾನಿ ಸಿನ್ಸ್‌ ಇಂಥದ್ದೊಂದು ಜಾಹೀರಾತಿನಲ್ಲಿ ಭಾಗಿಯಾಗಬಹುದು ಎಂದು ನಾನು ಯೋಚನೆಯನ್ನೇ ಮಾಡಿರಲಿಲ್ಲ ಎಂದು ಭಾವನಾ ಹೇಳಿದ್ದಾರೆ.

 

ಸಾಮಾನ್ಯವಾಗಿ WWE ರೆಸ್ಲರ್‌ಗಳು ಭಾರತದಲ್ಲಿ ಕೆಲವೊಂದು ಶೂಟಿಂಗ್‌ಗಳಲ್ಲಿ ಭಾಗಿಯಾಗುತ್ತಾರೆ. ಆ ಕಾರಣದಿಂದಾಗಿ ನಾನು ಜಾನ್‌ ಸೀನಾ ಎಂದುಕೊಂಡಿದ್ದೆ. ಆದರೆ, ಅಂತಿಮ ಡೀಟೇಲ್ಸ್‌ ಗೊತ್ತಾದ ಬಳಿಕವೇ ಜಾನಿ ಸಿನ್ಸ್‌ ಎನ್ನುವುದು ಗೊತ್ತಾಗಿತ್ತು ಎಂದು ಭಾವನಾ ಚೌಹಾಣ್‌ ನಕ್ಕು ಹೇಳಿದ್ದಾರೆ.

ಅದಲ್ಲದೆ, ನನ್ನ ಕಾಸ್ಟಿಂಗ್‌ ಟೀಮ್‌ ಕೂಡ ಈ ಜಾಹೀರಾತಿಗೆ ನನ್ನ ಅಂತಿಮ ಒಪ್ಪಿಗೆಯನ್ನು ಕೇಳಿತ್ತು. ಈ ಜಾಹೀರಾತಿನಲ್ಲಿ ನಿಮ್ಮೊಂದಿಗೆ ನಟಿಸುವುದು ಯಾರು ಎನ್ನುವುದು ನಿಮಗೆ ಗೊತ್ತಿದೆಯಲ್ಲ ಎಂದು ಕೇಳುತ್ತಿದ್ದರು. ಅದಕ್ಕೆ ನಾನು, ಹೌದು ಜಾನ್‌ ಅಲ್ವಾ? ನನಗೆ ಗೊತ್ತಿದೆ. ಇದನ್ನು ಮಾಡುತ್ತೇನೆ ಎಂದು ಹೇಳಿದ್ದೆ ಎಂದಿದ್ದಾರೆ.


ಆದರೆ, ಜಾನಿ ಸಿನ್ಸ್‌ ಎಂದು ಗೊತ್ತಾದಾಗ ನನಗೆ ಶಾಕ್‌ ಆಗಿತ್ತು. ನಾನು ಮಾತ್ರ ಕಂಫರ್ಟಬಲ್‌ ಆಗಿದ್ದೆ. ಇನ್ನು ನನ್ನ ಕುಟುಂಬ ಕೂಡ ನಿರ್ಧಾರದ ಬಗ್ಗೆ ಏನೂ ಹೇಳಲಿಲ್ಲ ಎಂದಿದ್ದಾರೆ.

ಇಲ್ಲಿಯವರೆಗೂ ಆನ್‌ಸ್ಕ್ರೀನ್‌ನಲ್ಲಿ ಕಿಸ್‌ ಕೂಡ ನಾನು ಮಾಡಿಲ್ಲ. ಹಾಗಾಗಿ ನನ್ನ ಜೀವನದ ಅತ್ಯಂತ ಬೋಲ್ಡೆಸ್ಟ್‌ ಪ್ರಾಜೆಕ್ಟ್‌ ಇದೇ ಆಗಿದೆ. ಯಾಕೆಂದರೆ ನೇರವಾಗಿ ಜಾನಿ ಸಿನ್ಸ್‌ ಜೊತೆಗೇ ನಟನೆ ಮಾಡಿದ್ದೇನೆ ಎಂದಿದ್ದಾರೆ.
 

ಕೆಲವರು ಈಗಾಗಲೇ ನನಗೆ ಪ್ರಶ್ನೆ ಮಾಡುತ್ತಿದ್ದಾರೆ. ಕೆಲವೊಂದು ಸೀನ್‌ಗಳಲ್ಲಿ ನಟಿಸೋಕೆ ನಿನಗೆ ಮುಜುಗರ ಆಗ್ತಿತ್ತು. ಈ ಪ್ರಾಜೆಕ್ಟ್‌ಗೆ ಹೇಗೆ ಓಕೆ ಎಂದೆ ಎಂದು ನನ್ನ ಪ್ರಶ್ನೆ ಮಾಡ್ತಿದ್ದಾರೆ. ಆದರೆ, ಇದರ ಹಿಂದಿನ ಕಥೆ ಇದು ಎಂದು ಭಾವನಾ ತಿಳಿಸಿದ್ದಾರೆ.


ತೀರಾ ಇನ್ನಷ್ಟು ಬೋಲ್ಡ್‌ ಆಗುತ್ತಿದ್ದ ಪ್ರಾಜೆಕ್ಟ್‌ಅನ್ನು ಡ್ರಾಮಾ ಹಾಗೂ ತಮಾಷೆಯಾಗಿ ಹೇಗೆ ಹೊರತಂದರು ಎನ್ನುವುದನ್ನೂ ಕೂಡ ಭಾವನಾ ಚೌಹಾಣ್‌ ತಿಳಿಸಿದ್ದಾರೆ.

ಜಾಹೀರಾತಿನ ನಿರ್ದೇಶನ ನನ್ನ ಆಡಿಷನ್‌ ನೋಡಿ ಖುಷಿಪಟ್ಟಿದ್ದರು. ಇದೇ ರೀತಿ ನಟಿಸುವಂತೆ ಹೇಳಿದ್ದರು. ಆದರೆ, ತಮಾಷೆಯಾಗಿ ಕಾಣುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಿ ಎಂದು ಅವರು ಸೂಚಿಸಿದ್ದರು ಎಂದಿದ್ದಾರೆ.

ಇನ್ನು ಈ ಜಾಹೀರಾತಿನಲ್ಲಿ ಧಾರಾವಾಹಿಗಳ ಕಾಲೆಳೆಯಲಾಗಿದೆ ಎನ್ನುವ ಟೀಕೆಗಳ ಬಗ್ಗೆಯೂ ಭಾವನಾ ಚೌಹಾಣ್‌ ಪ್ರತಿಕ್ರಿಯೆ ನೀಡಿದ್ದಾರೆ.

ಪೋರ್ನ್ ಸ್ಟಾರ್ ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡ ನಟ ರಣವೀರ್ ಸಿಂಗ್!

ಮೂಲ ಸ್ಕ್ರಿಪ್ಟ್‌ ಇನ್ನೂ ಫನ್ನಿಯಾಗಿತ್ತು. ಆದರೆ, ಟಿವಿ ಸ್ಕ್ರೀನ್‌ನಲ್ಲಿ ಅವುಗಳನ್ನು ತೋರಿಸುವುದು ಸಮಂಜಸವಾಗಿರಲಿಲ್ಲ. ಇಂಥ ವಿಚಾರಗಳು ನಾರ್ಮಲ್‌ ಆಗಬೇಕು. ಇಲ್ಲಿ ಯಾರೂ ಧಾರವಾಹಿಗಳ ಕಾಲೆಳೆದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಭಾವನಾ ಹೇಳಿದ್ದಾರೆ.

Latest Videos

click me!