'ಸುತ್ತಮುತ್ತಲು ಸಂಜೆ ಕತ್ತಲು' ಹಾಡಿಗೆ ಹೀಗೂ ಡಾನ್ಸ್​ ಮಾಡ್ಬೋದೆಂದು ತೋರಿಸಿದ ನಾನಿನ್ನ ಬಿಡಲಾರೆ ನಟಿಯರು!

Published : Aug 02, 2025, 12:24 PM ISTUpdated : Aug 02, 2025, 12:25 PM IST

ನಾನಿನ್ನ ಬಿಡಲಾರೆ ಸೀರಿಯಲ್​ ಮೂಲಕ ಎಲ್ಲರ ಮನಸ್ಸು ಕದ್ದಿರೋ ದುರ್ಗಾ ಉರ್ಫ್​ ರಿಷಿಕಾ ಹಾಗೂ ಆಕೆಗೆ ಬೆಂಬಲವಾಗಿ ನಿಂತಿರೋ ಶಾನ್ವಿ ಉರ್ಫ್​ ಲೇಖನಾ 'ಸುತ್ತಮುತ್ತಲು ಸಂಜೆ ಕತ್ತಲು' ಹಾಡಿಗೆ ಹೇಗೆ ಸೊಂಟ ಬಳುಕಿಸಿದ್ದಾರೆ ನೋಡಿ... 

PREV
19
ನಾ ನಿನ್ನ ಬಿಡಲಾರೆ ದುರ್ಗಾ ಮತ್ತು ಶಾನ್ವಿ

ಸದ್ಯ ನಾನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಒಂದೆಡೆ ಶರತ್​ ಮತ್ತು ಮಾಯಾ ಮದುವೆ ತಯಾರಿ ನಡೆಯುತ್ತಿದ್ದರೆ, ಅದೇ ಇನ್ನೊಂದೆಡೆ ದುರ್ಗಾ ಮತ್ತು ಶರತ್​ ಒಂದಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ದುರ್ಗಾ ಮತ್ತು ಶರತ್​ ಒಬ್ಬರನ್ನೊಬ್ಬರು ಲವ್​ ಮಾಡದೇ ಹೋದರೂ ಅವರು ಒಂದಾಗಲಿ ಎಂದು ವೀಕ್ಷಕರು ಹಾರೈಸ್ತಿರೋದು ಈ ಸೀರಿಯಲ್​ನ ಕುತೂಹಲ. ಹಿತಾ ಮತ್ತು ದುರ್ಗಾ ಜೋಡಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಅದೇ ಇನ್ನೊಂದೆಡೆ ಮಾಯಾ ವಿಲನ್​ ಆಗಿರೋದ್ರಿಂದ ಅವರಿಬ್ಬರ ಮದುವೆ ನಡೆಯಲೇಬಾರದು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ.

29
ನಾ ನಿನ್ನ ಬಿಡಲಾರೆ ದುರ್ಗಾ

ದುರ್ಗಾಳ ದಯೆಯಿಂದ ಹಿತಾ ಅಪ್ಪನ ಬಳಿ ಮಾತನಾಡುತ್ತಿದ್ದಾಳೆ. ನೇರವಾಗಿ ಅಪ್ಪ ಎಂದು ಹೇಳದಿದ್ದರೂ ಗೂಬೆರಾಯ ಎಂದು ಕರೆಯೋದು ವೀಕ್ಷಕರಿಗೆ ಸಕತ್​ ಖುಷಿ ಕೊಡುತ್ತಿದೆ. ದುರ್ಗಾ, ಹಿತಾ ಮತ್ತು ಶರತ್​ ಆ್ಯಕ್ಟಿಂಗ್​ಗೆ ಜನರು ಫಿದಾ ಆಗಿದ್ದಾರೆ. ಆದ್ದರಿಂದ ಈ ಜೋಡಿ ಒಂದಾಗಲೇಬೇಕು ಎನ್ನುವುದು ಎಲ್ಲರ ಅಭಿಮತ. ಅದೇ ರೀತಿ ಶರತ್​ ತಂಗಿ ಶಾನ್ವಿ ಕೂಡ ಶರತ್​ ಮತ್ತು ದುರ್ಗಾ ಮದುವೆಯಾಬೇಕು ಎಂದು ಬಯಸುತ್ತಿದ್ದಾಳೆ.

39
ದುರ್ಗಾ- ಶಾನ್ವಿ ಸಕತ್​ ರೀಲ್ಸ್​

ಇದು ಸೀರಿಯಲ್​ ಕಥೆಯಾದ್ರೆ, ಇದೀಗ ದುರ್ಗಾ ಮತ್ತು ಶಾನ್ವಿ ಸೇರಿ ಸಕತ್​ ಡಾನ್ಸ್​ ಮಾಡಿದ್ದಾರೆ. 1982ರಲ್ಲಿ ಬಿಡುಗಡೆಯಾಗಿದ್ದ ಶ್ರೀನಿವಾಸ ಮೂರ್ತಿ, ಆರತಿ ಅಭಿನಯದ ಪರಾಜಿತ ಚಿತ್ರದ ಸೂಪರ್​ಹಿಟ್​ ಸಾಂಗ್​ ಸುತ್ತಮುತ್ತಲೂ ಸಂಜೆ ಕತ್ತಲು... ಇಲ್ಲೇ ಬಂತು ಸ್ವರ್ಗಾ... ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಈ ಜೋಡಿಯನ್ನು ಕಂಡು ನೆಟ್ಟಿಗರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ.

49
ದುರ್ಗಾ ಪಾತ್ರಧಾರಿ ಹೆಸರು ರಿಷಿಕಾ

ಇದರಲ್ಲಿ ದುರ್ಗಾ ಪಾತ್ರಧಾರಿಯ ಹೆಸರು ರಿಷಿಕಾ ಆದರೆ ಶಾನ್ವಿ ಪಾತ್ರಧಾರಿಯ ಹೆಸರು ಲೇಖನಾ. ಇನ್ನು ದುರ್ಗಾ ಪಾತ್ರಧಾರಿ ರಿಷಿಕಾ ಕುರಿತು ಹೇಳುವುದಾದರೆ, ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. 

59
ಮೊದಲ ಸೀರಿಯಲ್​ನಲ್ಲಿ ಗಮನ ಸೆಳೆದ ನಟಿ

ಮೊದಲ ಸೀರಿಯಲ್​ನಲ್ಲಿ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

69
ನಾ ನಿನ್ನ ಬಿಡಲಾರೆ ಸೀರಿಯಲ್​ ಸ್ಟೋರಿ

ಇನ್ನು ನಾನಿನ್ನ ಬಿಡಲಾರೆ ಸೀರಿಯಲ್​ ಕುರಿತು ಹೇಳುವುದಾದರೆ, ಶರತ್ ಮತ್ತು ಅಂಬಿಕಾ ಮದುವೆಯಾಗಿ ಹಿತಾ ಎನ್ನುವ ಮಗಳು ಇರುತ್ತಾಳೆ. ಇಬ್ಬರಿಗೂ ಆಕೆಯ ಮೇಲೆ ಪಂಚಪ್ರಾಣ. ಆದರೆ ಓರ್ವ ಲೇಡಿ ವಿಲನ್​ ಸೀರಿಯಲ್​ನಲ್ಲಿ ಇರಲೇಬೇಕಲ್ವೆ? ಅವಳೇ ಮಾಯಾ.

79
ಶರತ್​- ಅಂಬಿಕಾ ಸಟೋರಿ

ಶರತ್‌ನನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಆಕೆ ಅಂಬಿಕಾಳ ಕೊ*ಲೆ ಮಾಡ್ತಾಳೆ. ಅಮ್ಮನ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ಅದೊಂದು ಸಂದರ್ಭದಲ್ಲಿ ಅಪ್ಪನ ಮೇಲೂ ಕೋಪಿಸಿಕೊಳ್ಳುವ ಸನ್ನಿವೇಶ ಎದುರಾಗಿ ಮಾತನ್ನೇ ಬಿಡುತ್ತಾಳೆ. ಇತ್ತ ಮಾಯಾ ಹಿತಾಳನ್ನೂ ಕೊಲ್ಲಲು ಸಂಚು ರೂಪಿಸ್ತಾಳೆ. ಆಗ ಸತ್ತು ಹೋದ ತಾಯಿ ಅಂಬಿಕಾ ರಕ್ಷಣೆ ಬರುತ್ತಾಳೆ.

89
ಒಳ್ಳೆಯ ಸ್ವಭಾವದ ದುರ್ಗಾ

ಶರತ್​ ಕಂಪೆನಿಯಲ್ಲಿ ಕೆಲಸ ಮಾಡುವ ಎಡವಟ್ಟು ದುರ್ಗಾ ತುಂಬಾ ಒಳ್ಳೆಯ ಸ್ವಭಾವದವಳಾಗಿದ್ದು, ಆಕೆಯನ್ನು ತನ್ನ ಪತಿಯ ಜೊತೆ ಮದ್ವೆ ಮಾಡಿಸಬೇಕು ಎನ್ನುವ ಆಸೆ ಅಂಬಿಕಾಗೆ. ಅವಳು ತಾನು ಯಾರೆಂದು ಹೇಳದೇ ದುರ್ಗಾಗೆ ಮಾತ್ರ ಕಾಣಿಸಿಕೊಂಡು ಫ್ರೆಂಡ್​ ಆಗಿದ್ದಾಳೆ.

99
ಎಡವಟ್ಟು ರಾಣಿ ಮೇಲೆ ವೀಕ್ಷಕರಿಗೆ ಲವ್​

ಆದರೆ ಆಕೆಯ ಎಡವಟ್ಟಿನಿಂದ ಶರತ್​ಗೆ ಆಕೆಯನ್ನು ಕಂಡ್ರೆ ಇನ್ನಿಲ್ಲದ ಕೋಪ. ಆದರೆ, ಈಗ ಶರತ್​-ಅಂಬಿಕಾ ಮಗಳು ಹಿತಾಳನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. ಆಕೆಯ ಮೇಲೆ ಹಿತಾಳಿಗೂ ಅದಮ್ಯ ಪ್ರೀತಿ. ಅದೇ ಇನ್ನೊಂದೆಡೆ, ಪರಿಸ್ಥಿತಿ ಒತ್ತಡಕ್ಕೆ ಸಿಕ್ಕು ವಿಲನ್​ ಜೊತೆ ಶರತ್​ ಎಂಗೇಜ್​ಮೆಂಟ್​ ಆಗಿದೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ನಾಯಕ ಶರತ್​ ಪಾತ್ರದಲ್ಲಿ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದರೆ, ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದ ನೀತಾ ಅಶೋಕ್, ಅಂಬಿಕಾ ಪಾತ್ರದಲ್ಲಿದ್ದಾರೆ. ದುರ್ಗಾಗಳಾಗಿ ರಿಷಿಕಾ ಹಾಗೂ ವಿಲನ್​ ಆಗಿ ರುಹಾನಿ ಶೆಟ್ಟಿ ನಟಿಸುತ್ತಿದ್ದಾರೆ.

Read more Photos on
click me!

Recommended Stories