ಆಸ್ಕರ್ ಅಂಗಳಕ್ಕೆ ಕಾಲಿಟ್ಟ 'ರಾಮಾಯಣ: ಭಾಗ 1'- ಯಶ್ ಸಿನಿಮಾಗೆ 99ನೇ ಅಕಾಡೆಮಿ ಪ್ರಶಸ್ತಿ ಮೇಲೆ ಕಣ್ಣು!

Published : Nov 11, 2026, 02:44 PM IST

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗಾಗಿ ಸಲ್ಲಿಸಲಾಗಿದೆ. ಭಾರತೀಯರ ಹೆಮ್ಮೆಯ ರಾಮಾಯಣ ಕಥೆ ಈಗ ಆಸ್ಕರ್ ವೇದಿಕೆಯಲ್ಲೂ ಮಿಂಚಲಿದೆಯೇ ? ಈ ಸುದ್ದಿಯಿಂದ ಹೊಸ ಕುತೂಹಲ ಶುರುವಾಗಿದೆ.

PREV
16

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಬಹುನಿರೀಕ್ಷಿತ 'ರಾಮಾಯಣ ಪಾರ್ಟ್ 1' ಸಿನಿಮಾ ಇದೀಗ ಜಾಗತಿಕ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಚಿತ್ರಮಂದಿರಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸುತ್ತಿರುವ ಈ ಪೌರಾಣಿಕ ಚಿತ್ರ ಈಗ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳ ಸ್ಪರ್ಧೆಯಲ್ಲೂ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದೆ. ಹೌದು, ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗಾಗಿ ಸಲ್ಲಿಸಲಾಗಿದೆ ಎಂಬ ವರದಿ ಹೊರಬಿದ್ದಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಅಭಿಮಾನಿಗಳಲ್ಲಿ ಹೊಸ ಕುತೂಹಲ ಶುರುವಾಗಿದೆ. ಭಾರತೀಯರ ಹೆಮ್ಮೆಯ ರಾಮಾಯಣ ಕಥೆ ಈಗ ಆಸ್ಕರ್ ವೇದಿಕೆಯಲ್ಲೂ ಮಿಂಚಲಿದೆಯೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.

26

99ನೇ ಆಸ್ಕರ್ ಪ್ರಶಸ್ತಿಗಳ ರೇಸ್‌ನಲ್ಲಿ ರಾಮಾಯಣ!

ಎನ್‌ಡಿಟಿವಿ ವರದಿಯ ಪ್ರಕಾರ, ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ ಪಾರ್ಟ್ 1' ಚಿತ್ರವನ್ನು ನಿರ್ಮಾಪಕರು 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗಾಗಿ ಸಲ್ಲಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷೆಯ ಈ ಸಿನಿಮಾ ಈಗಾಗಲೇ ತನ್ನ ಅದ್ಧೂರಿ ನಿರ್ಮಾಣ, ತಾರಾಬಳಗ ಮತ್ತು ತಾಂತ್ರಿಕ ಗುಣಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇದೀಗ ಆಸ್ಕರ್ ವಿಚಾರವೂ ಮುನ್ನೆಲೆಗೆ ಬಂದಿರುವುದು ಚಿತ್ರತಂಡದ ಪಾಲಿಗೆ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.

36

ಆದರೆ ಇಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಆಸ್ಕರ್ ಪ್ರಶಸ್ತಿಗಳ ಪರಿಗಣನೆಗಾಗಿ ಸಿನಿಮಾ ಸಲ್ಲಿಕೆಯಾಗಿದೆ ಎಂದ ಮಾತ್ರಕ್ಕೆ ಅದು ನಾಮನಿರ್ದೇಶನಗೊಂಡಿದೆ ಅಥವಾ ಪ್ರಶಸ್ತಿ ಗೆಲ್ಲುವುದು ಖಚಿತ ಎಂದರ್ಥವಲ್ಲ. ಅಕಾಡೆಮಿ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿದ ಬಳಿಕವಷ್ಟೇ ಮುಂದಿನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ರಾಮಾಯಣದ ಆಸ್ಕರ್ ಪಯಣ ಇನ್ನೂ ಹಲವು ಹಂತಗಳನ್ನು ದಾಟಬೇಕಿದೆ.

46

ಭಾರತದ ಅಧಿಕೃತ ಪ್ರವೇಶ ಬೇರೆ, ರಾಮಾಯಣದ ಸ್ಪರ್ಧೆ ಬೇರೆ!

ಈ ಬಾರಿಯ ಆಸ್ಕರ್ ಪ್ರಶಸ್ತಿಗಳ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಸಿನಿಮಾ 'ಗೊಂಧಲ್' ಆಯ್ಕೆಯಾಗಿದೆ. ಹಾಗೆಂದ ಮಾತ್ರಕ್ಕೆ ಬೇರೆ ಭಾರತೀಯ ಸಿನಿಮಾಗಳಿಗೆ ಆಸ್ಕರ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವೇ ಇಲ್ಲ ಎಂದಲ್ಲ. ಅಕಾಡೆಮಿಯ ನಿಯಮಗಳನ್ನು ಪೂರೈಸುವ ಸಿನಿಮಾಗಳು ಇತರ ಅರ್ಹ ವಿಭಾಗಗಳಲ್ಲಿ ಸ್ವತಂತ್ರವಾಗಿ ಪರಿಗಣನೆಗೆ ಸಲ್ಲಿಕೆಯಾಗಬಹುದು.

ಹೀಗಾಗಿ 'ಗೊಂಧಲ್' ಭಾರತದ ಅಧಿಕೃತ ಪ್ರವೇಶ ಪಡೆದಿದೆ ಎನ್ನುವ ಕಾರಣಕ್ಕೆ 'ರಾಮಾಯಣ'ದ ಆಸ್ಕರ್ ಪ್ರಯತ್ನಕ್ಕೆ ಅಡ್ಡಿಯಾಗುವುದಿಲ್ಲ. ಈ ವಿಚಾರವೇ ಇದೀಗ ಸಿನಿಪ್ರೇಮಿಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

56

ಬಾಕ್ಸ್ ಆಫೀಸ್‌ನಲ್ಲಿ 526 ಕೋಟಿ ರೂ. ಗಳಿಕೆ!

ಒಂದೆಡೆ ಆಸ್ಕರ್ ಸುದ್ದಿಯಿಂದ ಗಮನ ಸೆಳೆಯುತ್ತಿರುವ 'ರಾಮಾಯಣ', ಮತ್ತೊಂದೆಡೆ ಬಾಕ್ಸ್ ಆಫೀಸ್‌ನಲ್ಲೂ ತನ್ನ ಅಬ್ಬರವನ್ನು ಮುಂದುವರಿಸಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಈ ಸಿನಿಮಾ ಮೊದಲ ದಿನದಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಭಾರತದಲ್ಲಿ 440.45 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ತೆರಿಗೆ ಸೇರಿದಂತೆ ಚಿತ್ರದ ಒಟ್ಟು ದೇಶೀಯ ಗ್ರಾಸ್ ಕಲೆಕ್ಷನ್ 526.50 ಕೋಟಿ ರೂ. ತಲುಪಿದೆ ಎನ್ನಲಾಗಿದೆ. ಜಗತ್ತಿನಾದ್ಯಂತ ರಾಮಾಯಣದ ಗಳಿಕೆ 823.50 ಕೋಟಿ ರೂ. ಆಗಿದೆ. ಇನ್ನೇನು 2-3 ದಿನಗಳಲ್ಲಿ 1000 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟು ಮುನ್ನಗ್ಗಲಿದೆ.

66

ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಸ್ಟಾರ್ ನಟರ ಕಾಂಬಿನೇಷನ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ನಮಿತ್ ಮಲ್ಹೋತ್ರಾ ನಿರ್ಮಿಸಿರುವ ಈ ಚಿತ್ರವು ಭಾರತೀಯ ಪೌರಾಣಿಕ ಕಥೆಯನ್ನು ಜಾಗತಿಕ ಗುಣಮಟ್ಟದಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದೆ.

ಆಸ್ಕರ್ ಕನಸು ನನಸಾಗುತ್ತದೆಯೇ?

99ನೇ ಅಕಾಡೆಮಿ ಪ್ರಶಸ್ತಿಗಳ ಸಾಮಾನ್ಯ ವಿಭಾಗಗಳಲ್ಲಿ ಅರ್ಹತೆ ಪಡೆಯಲು ಅಮೆರಿಕದ ನಿಗದಿತ ಚಿತ್ರಮಂದಿರಗಳಲ್ಲಿ ಕನಿಷ್ಠ ಏಳು ಸತತ ದಿನಗಳ ಪ್ರದರ್ಶನ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಚಿತ್ರವು ಅಗತ್ಯ ದಾಖಲೆಗಳು ಮತ್ತು ಅರ್ಹತಾ ಷರತ್ತುಗಳನ್ನು ಪೂರೈಸಿದೆಯೇ ಎಂಬುದನ್ನು ಅಕಾಡೆಮಿ ಪರಿಶೀಲಿಸಬೇಕಿದೆ. ಆನಂತರವೇ ನಾಮನಿರ್ದೇಶನದ ಹಂತದ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಒಟ್ಟಿನಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ರೂಪಾಯಿ ಗಳಿಸುತ್ತಾ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ 'ರಾಮಾಯಣ ಪಾರ್ಟ್ 1' ಇದೀಗ ಅಂತರರಾಷ್ಟ್ರೀಯ ಪ್ರಶಸ್ತಿಗಳ ವೇದಿಕೆಯಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ರಾಮನಾಗಿ ರಣಬೀರ್, ರಾವಣನಾಗಿ ಯಶ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸಿರುವ ಈ ಸಿನಿಮಾ ಆಸ್ಕರ್‌ನ ಮುಂದಿನ ಹಂತಗಳಿಗೆ ತಲುಪುತ್ತದೆಯೇ? ಭಾರತೀಯ ಪೌರಾಣಿಕ ಕಥೆಗೆ ಜಾಗತಿಕ ಮನ್ನಣೆ ಸಿಗುತ್ತದೆಯೇ? ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories