ಗಂಧದಗುಡಿ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಯಡಿಯೂರಪ್ಪ: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

Published : Nov 03, 2022, 09:32 PM IST

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾ ಗಂಧದಗುಡಿ ಚಿತ್ರವನ್ನ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವೀಕ್ಷಿಸಿದ್ದಾರೆ. ಅಪ್ಪು ಕನಸಿನ ಸಿನಿಮಾವನ್ನು ಪುತ್ರ ರಾಘವೇಂದ್ರ ಜೊತೆ ಬಿಎಸ್‌ವೈ ವೀಕ್ಷಿಸಿದ್ದಾರೆ. 

PREV
15
ಗಂಧದಗುಡಿ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಯಡಿಯೂರಪ್ಪ: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ಕರ್ನಾಟಕ ರತ್ನ ಪುನೀತ್ ನಟನೆಯ ಗಂಧದಗುಡಿ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಚೇತನ್‌ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ಸೂಪರ್ ಡೂಪರ್ ಹಿಟ್ ಆದ್ಮೇಲೆ ಗಂಧದಗುಡಿಗಾಗಿ ಕಾಯುತ್ತಿದ್ದ ಫ್ಯಾನ್ಸ್, ಅಪ್ಪು ಕನಸಿನ ಸಿನಿಮಾ ನೋಡಿ ಖುಷಿಪಟ್ಟಿದ್ದರು. 

25

ಇದೀಗ ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್‌ನಲ್ಲಿರುವ ಭಾರತ್ ಸಿನಿಮಾಸ್ ಮಾಲ್‌ಗೆ ಭೇಟಿ ನೀಡಿ ಗಂಧದಗುಡಿ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ ಪುತ್ರ ರಾಘವೇಂದ್ರ ಕೂಡ ಸಾಥ್ ನೀಡಿದ್ದಾರೆ. 

35

ಇನ್ನು ಸಿನಿಮಾ ವೀಕ್ಷಿಸಲು ಬಂದ ವೇಳೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸದ್ಯ ಗಂಧದಗುಡಿಯಲ್ಲಿ ಅಪ್ಪು ನೈಜ ನಟನೆ ನೋಡಿ ಮಾಜಿ ಸಿಎಂ ಯಡಿರೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಮಂದಿಯೆಲ್ಲರೂ ಕುಳಿತು ಈ ಚಿತ್ರಕ್ಕೆ ಸಾಥ್ ನೀಡಿ ಎಂದಿದ್ದಾರೆ. ಜೊತೆಗೆ ಎಲ್ಲರೂ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.

45

ಗಂಧದಗುಡಿ ಸಿನಿಮಾದಲ್ಲಿ ಉತ್ತರ ಕನ್ನಡದ ದಟ್ಟ ಅಡವಿಯನ್ನು ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಕಾಳಿ ಕಣಿವೆಯಲ್ಲಿ ಅಪ್ಪು ಓಡಾಡುವ, ಉತ್ತರ ಕನ್ನಡದ ಜೀವ ವೈವಿಧ್ಯ ದೃಶ್ಯಗಳು ಅಭಿಮಾನಿಗಳ ಮನಸೂರೆಗೊಳ್ಳುತ್ತಿವೆ.

55

96 ನಿಮಿಷಗಳ ಗಂಧದಗುಡಿ ಅರಣ್ಯ ಸಂಪತ್ತು, ನೀರು, ಪ್ಲಾಸ್ಟಿಕ್ ಬಳಕೆಯ ಅನಾಹುತ ಎಲ್ಲವನ್ನು ಸಾರುವ ಅದ್ಬುತ ಸಂದೇಶ ಸಾರುವ ಸಿನಿಮಾ ಆಗಿದೆ. ಅಪ್ಪು ತಮ್ಮ ಕೊನೆಯ ಚಿತ್ರದಲ್ಲಿ ಕನ್ನಡ ನಾಡು, ನುಡಿಯ ಮಹತ್ವ ಸಾರಿದ್ದಾರೆ.

Read more Photos on
click me!

Recommended Stories