ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಕಾರ್ತಿಕ್ ಆರ್ಯನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆ ಕಾರ್ತಿಕ್ ತಮಾಷೆಯಾಗಿ ಪೋಸ್ಟ್ ಹಾಕಿದ್ದಾರೆ.
'ಚೈನೀಸ್ ಆಹಾರಕ್ಕಾಗಿ ಹೊಸ ಟೇಬಲ್ ಕಂಡುಬಂದಿದೆ. ಕಠಿಣ ಪರಿಶ್ರಮದ ಫಲ ಸಿಹಿಯಾಗಿದೆ ಎಂದು ಕೇಳಿದೆ, ಅದು ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ. ಭಾರತದ ಮೊದಲ ಮೆಕ್ಲಾರೆನ್ ಜಿಟಿ. ಮುಂದಿನ ಉಡುಗೊರೆ (Gift) ಖಾಸಗಿ ಜೆಟ್ ಸರ್. ಧನ್ಯವಾದಗಳು' ಎಂದು ಕಾರ್ತಿಕ್ ಬರೆದಿದ್ದಾರೆ.
ಕಾರ್ತಿಕ್ ಹಂಚಿಕೊಂಡ ಫೋಟೋದಲ್ಲಿ, ಅವರು ಕಿತ್ತಳೆ ಬಣ್ಣದ ಮೆಕ್ಲಾರೆನ್ ಕಾರಿನೊಂದಿಗೆ ಪೋಸ್ ನೀಡಿದ್ದಾರೆ. ಅವರೊಂದಿಗೆ ಭೂಷಣ್ ಕುಮಾರ್ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನಟನಿಗೆ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ
ಚಲನಚಿತ್ರ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ 'ಮುಬಾರಕ್ ಹೋ' ಎಂದು ಬರೆದಿದ್ದಾರೆ'. ಕಾರ್ತಿಕ್ ಅವರ ಸ್ನೇಹಿತ ಆಶಿಶ್ ಚಂಚಲಾನಿ ' ಇದನ್ನು ತೆಗೆದುಕೊಂಡು ಈಗ ಉಷಾ ನಗರಗೆ ಬಾ ಸ್ಯಾಂಡ್‌ವಿಚ್‌ಗಳನ್ನು ತಿನ್ನು' ಎಂದು ಬರೆದಿದ್ದಾರೆ.
'ಓಹ್ ಚೆನ್ನಾಗಿದೆ. ಅಂದಹಾಗೆ, ಮೈಲೇಜ್ ಎಷ್ಟು ನೀಡುತ್ತದೆ ಬ್ರದರ್?' ಎಂದು ಗುಲ್ಶನ್ ದೇವಯ್ಯ ಕಾಮೆಂಟ್ ಮಾಡಿದ್ದಾರೆ. ಆಯುಷ್ಮಾನ್ ಖುರಾನಾ ಅವರನ್ನು 'ಬ್ರೋ' ಎಂದು ಬರೆದಿದ್ದಾರೆ. ಹಾಗೇ ಹಾಸ್ಯನಟ ಭುವನ್ ಬಾಮ್ 'ಮೈಲೇಜ್ ಎಷ್ಟು ನೀಡುತ್ತದೆ' ಎಂದು ಕೇಳಿದ್ದಾರೆ.
ಅನೀಸ್ ಬಾಜ್ಮಿ ನಿರ್ದೇಶನದ 'ಭೂಲ್ ಭುಲೈಯಾ 2' ಚಿತ್ರವು ಮೇ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಮೊದಲ ದಿನ 14.11 ಕೋಟಿ ಗಳಿಸಿದರೆ, ಮೊದಲ ವಾರದಲ್ಲಿ 55.96 ಗಳಿಸಿದೆ ಮತ್ತು ಒಟ್ಟು 183.81 ಕೋಟಿಗಳನ್ನು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದೆ. ಕಾರ್ತಿಕ್ ಆರ್ಯನ್ ಜೊತೆಗೆ ಕಿಯಾರಾ ಅಡ್ವಾಣಿ (Kiara Advani) ಮತ್ತು ಟಬು (Tabu) ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.