ಜೈಲಿಂದಲೇ ಅಭಿಮಾನಿಗಳಿಗೆ ದೊಡ್ಡ ಮೆಸೇಜ್‌ ಕಳಿಸಿದ ದರ್ಶನ್‌, ವಿಜಯಲಕ್ಷ್ಮೀ ಹೇಳಿದ್ರು ಸೀಕ್ರೆಟ್‌

Published : Nov 20, 2025, 08:00 PM IST

ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌, ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದಿರುವ ಅವರು, ಡಿಸೆಂಬರ್ 12 ರಂದು ಬಿಡುಗಡೆಯಾಗಲಿರುವ ತಮ್ಮ 'ಡೆವಿಲ್' ಚಿತ್ರಕ್ಕೆ ಹೆಚ್ಚು ಪ್ರೀತಿ ನೀಡುವಂತೆ ಕೇಳಿಕೊಂಡಿದ್ದಾರೆ.

PREV
19

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಅವರ ಕ್ರೇಜ್‌ ಒಂದು ಪೈಸೆ ಕೂಡ ಕಡಿಮೆಯಾಗಿಲ್ಲ. ಅವರ ಬಹುನಿರೀಕ್ಷಿತ ಸಿನಿಮಾ 'ಡೆವಿಲ್‌' ಡಿಸೆಂಬರ್‌ 12 ರಂದು ಬಿಡುಗಡೆಯಾಗುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್‌ ಅವರು ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಬಲವಾದ ಸಂದೇಶ ರವಾನಿಸಿದ್ದಾರೆ.

29

ಪತ್ನಿ ವಿಜಯಲಕ್ಷ್ಮಿ ಮೂಲಕ ದರ್ಶನ್‌ ಸಂದೇಶ ಕಳಿಸಿದ್ದಾರೆ. ಡಿ 'ಡೆವಿಲ್‌' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು, ದರ್ಶನ್‌ ಜೈಲಿನಿಂದಲೇ ಅಭಿಮಾನಿಗಳ ಬಗ್ಗೆ ಆಡಿದ ಮಾತುಗಳನ್ನು ಬಹಿರಂಗಪಡಿಸಿದ್ದಾರೆ:

39

"ನನ್ನ ಅಭಿಮಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ..' ಎಂದು ದರ್ಶನ್‌ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ ಎಂದು ವಿಜಯಲಕ್ಷ್ಮಿ ಹೇಳಿದರು. ಆ ಮೂಲಕ ದರ್ಶನ್‌ ಆತ್ಮಸ್ಥೈರ್ಯದ ಮಾತುಗಳನ್ನಾಡಿದ್ದಾರೆ.

49

"ನನ್ನ ಉಳಿದ ಸಿನಿಮಾಗಳಿಗೆ ಅಪಾರ ಪ್ರೀತಿ ನೀಡಿದ್ದೀರಿ. ಆದರೆ, 'ಡೆವಿಲ್‌'ಗೆ ಹೆಚ್ಚು ಪ್ರೀತಿ ಕೊಡಿ ಅಂತ ದರ್ಶನ್‌ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ..' ಎಂದು ದರ್ಶನ್‌ ಅಭಿಮಾನಿಗಳ ಸಂಘಗಳ ಮುಖಂಡರು ಇದ್ದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಹೇಳಿದ್ದಾರೆ.

59

ಈ ಮಾತುಗಳಿಂದ ಉತ್ಸಾಹಿತರಾದ ಅಭಿಮಾನಿಗಳು, ಕಾರ್ಯಕ್ರಮದಲ್ಲಿ 'ಡಿ ಬಾಸ್.. ಡಿ ಬಾಸ್‌' ಎಂದು ಜೈಕಾರ ಹಾಕಿದ್ದಾರೆ.

69

'ತಾರಕ್‌' ಚಿತ್ರದ ನಂತರ ಪ್ರಕಾಶ್‌ ವೀರ್‌ ಅವರೊಂದಿಗೆ ದರ್ಶನ್‌ ಕೈಜೋಡಿಸಿರುವ 'ಡೆವಿಲ್‌' ಸಿನಿಮಾವು ನಟನ ವೃತ್ತಿಜೀವನಕ್ಕೆ ಅತ್ಯಂತ ಮಹತ್ವದ ಚಿತ್ರ ಎನಿಸಿಕೊಂಡಿದೆ.

79

ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಶೂಟಿಂಗ್ ಮುಗಿಸಲು ಚಿತ್ರತಂಡ ಹರಸಾಹಸ ಪಟ್ಟಿತ್ತು. ಹೈಕೋರ್ಟ್‌ ಜಾಮೀನು ನೀಡಿದ ಬಳಿಕ ದರ್ಶನ್‌ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು.

89

ಅಜನೀಶ್ ಲೋಕನಾಥ್ ಅವರು ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆದರೆ, ರಿಲೀಸ್ ಆಗಿರುವ ಹಾಡುಗಳು ಹರಿಕೃಷ್ಣ-ದರ್ಶನ್ ಕಾಂಬಿನೇಷನ್‌ನಷ್ಟು ಮೋಡಿ ಮಾಡಿಲ್ಲ ಎಂಬ ಅಭಿಪ್ರಾಯಗಳು ದರ್ಶನ್‌ ಅಭಿಮಾನಿಗಳದ್ದಾಗಿದೆ.

99

ಒಟ್ಟಿನಲ್ಲಿ, 'ಡೆವಿಲ್‌' ಚಿತ್ರವು ದರ್ಶನ್‌ ಅವರ ವೃತ್ತಿಜೀವನದ ಅಳಿವು-ಉಳಿವಿನ ದೃಷ್ಟಿಯಿಂದ ನಿರೀಕ್ಷೆ ಮತ್ತು ಒತ್ತಡ ಎರಡನ್ನೂ ಹೊಂದಿದೆ.

Read more Photos on
click me!

Recommended Stories