ಪಡ್ಡೆಗಳ ಹೃದಯ ಗೆದ್ದ ನೋರಾ ಫತೇಹಿ ಫಿಟ್ನೆಸ್ ಸೀಕ್ರೆಟ್ ಏನು?

Published : Aug 16, 2023, 06:25 PM IST

ತನ್ನ ಡ್ಯಾನ್ಸ್ ಮೂವ್ಸ್ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ನೋರಾ ಫತೇಹಿ. ಈಕೆಯ ಸ್ಟೈಲ್, ಫಿಟ್ನೆಸ್ ಮತ್ತು ಕರ್ವ್ ಫಿಗರ್ ಗೆ ಸೋಲದವರೇ ಇಲ್ಲ. ಈ ನಟಿಯ ಫಿಟ್ನೆಸ್ ಸೀಕ್ರೆಟ್ ಏನು ಅನ್ನೋದನ್ನು ನೋಡೋಣ.   

PREV
18
ಪಡ್ಡೆಗಳ ಹೃದಯ ಗೆದ್ದ ನೋರಾ ಫತೇಹಿ ಫಿಟ್ನೆಸ್ ಸೀಕ್ರೆಟ್ ಏನು?

ತನ್ನ ಅದ್ಭುತ ಡ್ಯಾನ್ಸ್ ಮೂವ್‌ಗಳಿಂದ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ನೋರಾ ಫತೇಹಿ (Nora fatehi) ಎಲ್ಲರಿಗೂ ತಿಳಿದಿದ್ದಾರೆ.  ನೋರಾ ಕರ್ವ್ ಬಾಡಿಗೆ ಫಿದಾ ಆದವರೇ ಹೆಚ್ಚು. ನೋರಾ ತನ್ನ ಫಿಟ್ನೆಸ್ ಮತ್ತು ಫ್ಯಾಷನ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಫಿಟ್ನೆಸ್ನ ರಹಸ್ಯದ ಬಗ್ಗೆ ತಿಳಿಯೋಣ. 
 

28

ಸಮತೋಲಿತ ಆಹಾರ (balanced food)
ನೋರಾ ತನ್ನನ್ನು ಸದೃಢವಾಗಿಡಲು ಸಮತೋಲಿತ ಆಹಾರ ತೆಗೆದು ಕೊಳ್ಳಲು ಇಷ್ಟ ಪಡುತ್ತಾಳೆ. ಅವರ ಆಹಾರವು ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್ ಮತ್ತು ಕೊಬ್ಬುಗಳನ್ನು ಹೊಂದಿರುತ್ತದೆ. ಜೊತೆಗೆ ಹಣ್ಣು ಮತ್ತು ತರಕಾರಿ ಸೇವಿಸಲು ಇಷ್ಟಪಡುತ್ತಾರೆ.

38

ನೃತ್ಯ ಕೂಡ ಒಂದು ಸೀಕ್ರೆಟ್ (Dance)
ನೋರಾ ಫತೇಹಿ ಫಿಟ್ನೆಸ್ನ ದೊಡ್ಡ ರಹಸ್ಯವೆಂದರೆ ಅವರ ನೃತ್ಯ. ಡ್ಯಾನ್ಸ್ ಯಾವುದೇ ತಾಲೀಮಿಗಿಂತ ಕಡಿಮೆಯಿಲ್ಲ. ಡ್ಯಾನ್ಸ್ ಅವರನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಹಾಗಾಗಿಯೇ ಅವರು ಇಷ್ಟೊಂದು ಫಿಟ್ ಆಗಿದ್ದಾರೆ. 

48

ಪಿಲೇಟ್ಸ್ ವ್ಯಾಯಾಮ (pellets exercise)
ನೋರಾ ಅವರ ನೆಚ್ಚಿನ ವ್ಯಾಯಾಮದ ಬಗ್ಗೆ ಹೇಳೋದಾದ್ರೆ, ಪಿಲೇಟ್ಸ್ ಅವರ ನೆಚ್ಚಿನ ವ್ಯಾಯಾಮ. ಇದು ಅವನ ಕರ್ವ್ ಬಾಡಿಯ ರಹಸ್ಯವಾಗಿದೆ. ಪಿಲೇಟ್ಸ್ ವ್ಯಾಯಾಮವನ್ನು ನೋರಾ ನಿಯಮಿತವಾಗಿ ಮಾಡುತ್ತಾರಂತೆ. 

58

ಹೈಡ್ರೇಟ್ ಆಗಿರೋದು  (Hydrate)
ಸದೃಢವಾಗಿಡಲು, ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ. ಇದಕ್ಕಾಗಿ, ನೋರಾ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಾರೆ. ಇದಲ್ಲದೆ, ಅವರು ಎಳನೀರು ಮತ್ತು ಗ್ರೀನ್ ಟೀ ಸಹ ಸೇವಿಸುತ್ತಾರೆ.   

68

ಡ್ರೈ ಫ್ರುಟ್ಸ್ ತಿನ್ನೋದನ್ನು ಮರೆಯೋದಿಲ್ಲ
ಇದರೊಂದಿಗೆ, ನೋರಾ ಫತೇಹಿ ಡ್ರೈ ಫ್ರುಟ್ಸ್ ಗಳನ್ನು ಯಾವಾಗಲೂ ತಮ್ಮ ಜೊತೆ ತೆಗೆದುಕೊಂಡು ಹೋಗುತ್ತಾರೆ. ಇದು ಅವರ ಫಿಟ್ನೆಸ್ ಮತ್ತು ಉತ್ತಮ ಆರೋಗ್ಯ ಎರಡಕ್ಕೂ ಮುಖ್ಯ.

78

ಜಿಮ್‌ಗೆ ಹೋಗೋದಿಲ್ಲ
ನೋರಾ ಇತರ ನಟಿಯರಂತೆ, ಪ್ರತಿದಿನ ಜಿಮ್‌ಗೆ ಹೋಗೋದಿಲ್ಲ, ಆದರೂ ಅವರು ತುಂಬಾ ಫಿಟ್ ಆಗಿದ್ದಾರೆ. ಕಾರಣ ಅವರ ಡ್ಯಾನ್ಸ್, ಎಕ್ಸರ್ ಸೈಜ್. ನಟಿ ತನಗೆ ಬೇಕು ಅನಿಸಿದಾಗ ಮಾತ್ರ ಜಿಮ್ ಗೆ ಹೋಗ್ತಾರೆ. 

88

ಬೆಳಗಿನ ಉಪಾಹಾರ (morning breakfast)
ನೋರಾ ತಮ್ಮ ಮಾರ್ನಿಂಗ್ ಬ್ರೇಕ್ ಫಾಸ್ಟ್ ಬಗ್ಗೆ ತುಂಬಾನೆ ಕೇರ್ ಫುಲ್ ಆಗಿರುತ್ತಾರೆ. ಅವರು ಬೆಳಗಿನ ಉಪಾಹಾರಕ್ಕೆ ಬಾದಾಮಿ ಹಾಲು, ಡ್ರೈ ಫ್ರುಟ್ಸ್  ಮತ್ತು ಸಲಾಡ್ ಸೇವಿಸಲು ಇಷ್ಟಪಡ್ತಾರಂತೆ, ಹಾಗಂತ ನೋರಾ ಸಂದರ್ಶನವೊಂದರಲ್ಲಿ ಹೇಳಿದ್ದರು.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories