ಕೋಟಿ ಕೋಟಿ ಆದಾಯ ತರೋ ಸೈಡ್ ಬ್ಯುಸಿನೆಸ್ ಇವೆ ಈ ಬಾಲಿವುಡ್ ನಟಿಯರಿಗೆ!

Published : Jul 08, 2023, 06:15 PM IST

ಬಾಲಿವುಡ್ ನ ಟಾಪ್ ನಟಿಯರು ಚಲನಚಿತ್ರಗಳಲ್ಲಿ ನಟಿಸುವುದರ ಹೊರತಾಗಿ,  ತಮ್ಮ ಸೈಡ್ ಬಿಸಿನೆಸ್ ಅನ್ನು ಸಹ ಮಾಡುತ್ತಾರೆ. ಯಾವ ನಟಿಯರು ಯಾವ ಬ್ಯುಸಿನೆಸ್ ಮಾಡ್ತಾ ಇದ್ದಾರೆ ಅನ್ನೋದರ ಬಗ್ಗೆ ತಿಳಿಯೋಣ.   

PREV
16
ಕೋಟಿ ಕೋಟಿ ಆದಾಯ ತರೋ ಸೈಡ್ ಬ್ಯುಸಿನೆಸ್ ಇವೆ ಈ ಬಾಲಿವುಡ್ ನಟಿಯರಿಗೆ!

ಬಾಲಿವುಡ್ ನಲ್ಲಿ ನಟಿಯರು (bollywwod celebraties) ಅತ್ಯುತ್ತಮ ನಟನೆಯನ್ನು ಮಾಡುವುದು ಮಾತ್ರವಲ್ಲ, ಅವರಲ್ಲಿ ಅನೇಕರು ಬ್ಯುಸಿನೆಸ್ ವುಮೆನ್ ಕೂಡ ಇದ್ದಾರೆ. ಈ ನಟಿಯರು ತಮ್ಮ ಸೈಡ್ ಬಿಸಿನೆಸ್ ನಿಂದ ಕೋಟಿ ರೂಪಾಯಿ ಗಳಿಸುತ್ತಾರೆ. ಕೃತಿ ಸನೋನ್ ರಿಂದ ಅನುಷ್ಕಾ ಶರ್ಮಾ ವರೆಗೂ ಯಾವ ಯಾವ ನಟಿಯರು, ಯಾವೆಲ್ಲಾ ಬ್ಯುಸಿನೆಸ್ ಹೊಂದಿದ್ದಾರೆ ಅನ್ನೋದನ್ನು ನೋಡೋಣ. 
 

26

ಕೃತಿ ಸನೋನ್
ಸೂಪರ್ಹಿಟ್ ಚಿತ್ರಗಳನ್ನು ನೀಡಿರುವ ನಟಿ ಕೃತಿ ಸನೋನ್ ಇತ್ತೀಚೆಗೆ ತನ್ನ ಸಹೋದರಿ ನೂಪುರ್ ಅವರೊಂದಿಗೆ ಪ್ರೊಡಕ್ಷನ್ ಹೌಸ್ (Production house)  ಪ್ರಾರಂಭಿಸಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಹೆಸರು ಬ್ಲೂ ಬಟರ್ ಫ್ಲೈ ಫಿಲ್ಮ್ಸ್ (Blue Butterfly films). ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕೃತಿ ಸನೋನ್ ಅವರ ಪ್ರೊಡಕ್ಷನ್ ಹೌಸ್ ಕೂಡ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಸಂಪರ್ಕ ಹೊಂದಿದೆ.
 

36

ಕೃತಿ ತನ್ನ ಪ್ರೊಡಕ್ಷನ್ ಹೌಸ್ ಪ್ರಾರಂಭಿಸುವುದರೊಂದಿಗೆ, ಅದರ ಅಡಿಯಲ್ಲಿ ಸಿನಿಮಾ ಮಾಡಿರುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಫೋಟೋ ಶೇರ್ ಮಾಡಿದ್ದರು. ಈ ಚಿತ್ರದ ಹೆಸರು ದೋ ಪ್ಯಾಟಿ ಮತ್ತು ಅವರು ಅದರಲ್ಲಿ ಕಾಜೋಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. 

46

ಸುಶ್ಮಿತಾ ಸೇನ್
ನಟಿ ಸುಶ್ಮಿತಾ ಸೇನ್ ಉತ್ತಮ ನಟಿ ಮತ್ತು ಆಭರಣ ಬ್ರಾಂಡ್ ನ (jewellery brand)ಮಾಲೀಕರು ಹೌದು. ಇದರೊಂದಿಗೆ, ಸುಶ್ಮಿತಾ ತಂತ್ರ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಹೌಸ್ ನ ಮಾಲೀಕರಾಗಿದ್ದಾರೆ. ಇದಲ್ಲದೆ, ನಟಿ ಅನೇಕ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಸ್  ಸಹ ಹೊಂದಿದ್ದಾರೆ. 2022 ರ ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಸುಶ್ಮಿತಾ ಸೇನ್ ಅವರ ನೆಟ್ ವರ್ತ್ 74 ಕೋಟಿ ರೂ. 

56

ಅನುಷ್ಕಾ ಶರ್ಮಾ 
ಅನುಷ್ಕಾ ಶರ್ಮಾ ಅನೇಕ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಬಾಲಿವುಡ್ ನ ಟಾಪ್ ನಟಿಯಾಗಿ ರೂಪುಗೊಂಡಿದ್ದಾರೆ. ಇದಲ್ಲದೆ, ಅನುಷ್ಕಾ ಶರ್ಮಾ ತನ್ನದೇ ಆದ ಪ್ರೊಡಕ್ಷನ್ ಹೌಸ್ ಅನ್ನು ಸಹ ಹೊಂದಿದ್ದಾರೆ. ಅನುಷ್ಕಾ ಬಟ್ಟೆ ಬ್ರಾಂಡ್ನ (dress brand) ಮಾಲೀಕರಾಗಿದ್ದಾರೆ, ಅದರ ಹೆಸರು ನುಶ್. ಅನುಷ್ಕಾ ಶರ್ಮಾ ಅವರ ನಿರ್ಮಾಣ ಕಂಪನಿ ಅಮೆಜಾನ್ ಮತ್ತು ನೆಟ್ ಫ್ಲಿಕ್ಸ್ ನೊಂದಿಗೆ 400 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. 

66

ದೀಪಿಕಾ ಪಡುಕೋಣೆ 
ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಹಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಆಲ್ ಅಬೌಟ್ ಯು (all about you) ಎಂಬ ಬಟ್ಟೆ ಬ್ರಾಂಡ್ ಅನ್ನು ನಡೆಸುತ್ತಿದ್ದಾರೆ. ಇದಲ್ಲದೆ, ದೀಪಿಕಾ ಲೈವ್ ಲವ್ ಲಾಫ್ ಫೌಂಡೇಶನ್ನ ಸ್ಥಾಪಕರೂ ಹೌದು. ಎಡಬ್ಲ್ಯುಐಬಿ ಪ್ರಕಾರ, ದೀಪಿಕಾ ಪಡುಕೋಣೆ ಅವರ ನೆಟ್ ವರ್ತ್ 498 ಕೋಟಿ ರೂ.

Read more Photos on
click me!

Recommended Stories