ಅಭಿನವ್ ಕುಮಾರ್ ಎಂಬುವವರ ಟ್ವಿಟ್ಟರ್‌ನಲ್ಲಿ ಹಾಗೂ 𝗜𝗺𝗮𝗴𝗶𝗻-𝗔𝗜-𝘁𝗶𝗼𝗻 ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ಫೋಟೋಗಳು ಪೋಸ್ಟ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ. ಈ ಪೋಸ್ಟ್‌ನ್ನು ಐದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಫ್ರೆಂಡ್ಸ್ ಸೀರಿಸ್‌ನ ಎಲ್ಲಾ ಜನಪ್ರಿಯ ಪಾತ್ರಧಾರಿಗಳ ಫೋಟೋಗಳು ಇದರಲ್ಲಿವೆ, ಮೋನಿಕಾ ಮತ್ತು ಚಾಂಡ್ಲರ್, ರಾಸ್ ಮತ್ತು ರಾಚೆಲ್, ಫೋಬೆ ಮತ್ತು ಮೈಕ್. ಹಾಗೂ ರಾಚೆಲ್, ಮೋನಿಕಾ ಮತ್ತು ರಾಸ್ ಅವರ ಸಿಂಗಲ್ ಫೋಟೋಗಳು ಇದರಲ್ಲಿವೆ.