ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ. ಇದರ ಜೊತೆ ನಂದಗೋಕುಲ ಕಥೆಯನ್ನು ಸೇರಿಸಲಾಗಿದ್ದು, ಇವೆರಡೂ ಸೀರಿಯಲ್ಗಳ ಮಹಾಸಂಗಮ ಸದ್ಯ ನಡೆಯುತ್ತಿದೆ. ವಕೀಲಿಕೆ ಮೂಲಕ ಅನ್ಯಾಯದ ವಿರುದ್ಧ ಹೋರಾಡುವ ಛಲಗಾತಿ ಭಾರ್ಗವಿಯ ಕಥೆಯಿರುವ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಕುತೂಹಲ ಕೆರಳಿಸುತ್ತಿದ್ದರೆ, ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆ’ಯನ್ನು ಹೇಳುತ್ತದೆ ನಂದ ಗೋಕುಲ. ಇವೆರಡು ಸೀರಿಯಲ್ಗಳ ಮಹಾಸಂಗಮ ನಡೆಯುತ್ತಿರುವ ನಡುವೆಯೇ ಬೃಂದಾ ಪಾತ್ರಧಾರಿ ಚೈತ್ರಾ ರಾವ್ ಅವರು ನೇರಪ್ರಸಾರದಲ್ಲಿ ಬಂದು ವೀಕ್ಷಕರ ಜೊತೆ ಸಂವಾದ ನಡೆಸಿದ್ದಾರೆ.
27
ವಿಲನ್ ರೋಲ್ನಲ್ಲಿ ಕಾಣಿಸಿಕೊಳ್ತಿರೋ ಚೈತ್ರಾ ರಾವ್
ಆದರೆ, ಬೃಂದಾ ಎಂದ್ರೆ ಸಾಕು, ಈ ಸೀರಿಯಲ್ ವೀಕ್ಷಕರಿಗೆ ನಖಶಖಾಂತ ಉರಿ ಹತ್ತುತ್ತದೆ. ಇದಕ್ಕೆ ಕಾರಣ, ಆಕೆಯ ನೆಗೆಟಿವ್ ರೋಲ್. ಸ್ವಂತ ಅಪ್ಪ- ಅಮ್ಮ ತಂಗಿಯ ವಿರುದ್ಧವೇ ಪಿತೂರಿ ಮಾಡುತ್ತಾ, ಅಪ್ಪನನ್ನು ಕೊಲ್ಲಿಸಲೂ ಯೋಚಿಸದ ಕ್ಯಾರೆಕ್ಟರ್ ಈಕೆಯದ್ದು. ಜನರು ವಿಲನ್ ಪಾತ್ರಕ್ಕೆ ಅದೆಷ್ಟರ ಮಟ್ಟಿಗೆ ಉಗಿಯುತ್ತಾರೆ ಎಂದರೆ, ಆ ಪಾತ್ರಕ್ಕೆ ಆ ಪಾತ್ರಧಾರಿಗಳು ಅದೆಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ನಿಜ ಜೀವನದಲ್ಲಿ ನಡೆಯುವ ಪಾತ್ರಗಳೇ ಸೀರಿಯಲ್ಗಳಲ್ಲಿಯೂ ಪಾತ್ರಧಾರಿಗಳ ರೂಪದಲ್ಲಿ ಮೈದಳೆದರೂ, ಟಿವಿಯಲ್ಲಿ ಅದನ್ನು ನೋಡುವಾಗ ವಿಲನ್ಗಳ ಮೇಲೆ ಹರಿಹಾಯುವುದು ಉಂಟು.
37
ವಿಲನ್ ರೋಲ್ನಲ್ಲಿ ಕಾಣಿಸಿಕೊಳ್ತಿರೋ ಚೈತ್ರಾ ರಾವ್
ಅದೆಷ್ಟರ ಮಟ್ಟಿಗೆ ಎಂದರೆ ವಿಲನ್ ಪಾತ್ರಧಾರಿಗಳು ಎಲ್ಲಿಯಾದರೂ ಹೊರಗೆ ಬಂದರೆ, ಅಲ್ಲಿಯೂ ಜನರಿಗೆ ಉಗಿಸಿಕೊಳ್ಳುವುದೂ ಇದೆ, ಅವರನ್ನು ನೋಡಿ ಅಸಹ್ಯ ಪಟ್ಟುಕೊಳ್ಳುವ ವರ್ಗವೂ ಇದೆ. ಅಷ್ಟರಮಟ್ಟಿಗೆ ಸೀರಿಯಲ್ಗಳು ವೀಕ್ಷಕರ ಮೇಲೆ ಪ್ರಭಾವ ಬೀರ್ತಿದೆ ಎಂದರ್ಥ.
ಅದೇ ರೀತಿ ಭಾರ್ಗವಿ ಸೀರಿಯಲ್ ಬಗ್ಗೆ ಮಾತನಾಡಲು ಚೈತ್ರಾ ಬಂದರೆ, ಇವರು ರಿಯಲ್ ಆಗಿಯೂ ವಿಲನ್ನೇ ಎಂದು ತಿಳಿದುಕೊಂಡಿರೋ ನೆಟ್ಟಿಗರು ಕಮೆಂಟ್ ಬಾಕ್ಸ್ ತುಂಬಾ ನೆಗೆಟಿವ್ ಕಮೆಂಟ್ಗಳಿಂದ ಶಪಿಸಿದ್ದಾರೆ. ಕೆಟ್ಟ ಕೆಟ್ಟ ಶಬ್ದಗಳನ್ನು ನಟಿಯನ್ನು ಬೈದಿದ್ದಾರೆ.
ನೀನು ಅಂಥವಳು, ಇಂಥವಳು, ಮೊದಲು ತೊಲಗು... ಹಾಗೆ ಹೀಗೆ ಏನೇನೋ ಕೆಟ್ಟದ್ದಾಗಿ ಬೈದವರೇ ಹೆಚ್ಚು. ಇದರ ಅರ್ಥ ನಟಿ ಚೈತ್ರಾ ತಮ್ಮ ಪಾತ್ರದ ಮೂಲಕ ಜನರಲ್ಲಿ ಅದೆಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾರೆ ಎನ್ನುವುದು ತಿಳಿಯುತ್ತದೆ. ಅದೊಂದು ಸೀರಿಯಲ್, ಕಟ್ಟುಕಥೆ ಎನ್ನೋದನ್ನೂ ಮರೆತು ನೆಟ್ಟಿಗರು ಸೀರಿಯಲ್ ಒಳಗೇ ಪ್ರವೇಶಿಸಿ ಈ ಪರಿ ಬೈಯುತ್ತಾ ಇರುವುದರಿಂದಲೇ ಸೀರಿಯಲ್ಗಳು ಅಷ್ಟೊಂದು ಜನಪ್ರಿಯ ಆಗುತ್ತಿರುವುದು.
67
ನೇರಪ್ರಸಾರದಲ್ಲಿ ಭಾರ್ಗವಿ ಎಲ್ಎಲ್ಬಿ ಬೃಂದಾ
ಇನ್ನು ನಟಿಯ ಕುರಿತು ಹೇಳುವುದಾದರೆ, ಮನಸೇ ಓ ಮನಸೇ' ಸೀರಿಯಲ್ನ ಜಾನಕಿ ಟೀಚರ್ ಆಗಿ ನಟಿಸಿದ್ದರು. ಬಳಿಕ ಆರು ವರ್ಷಗಳ ನಂತರ ಬೃಂದಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಕಿರುತೆರೆ ಜೊತೆಗೆ ಸಿನಿಮಾದಲ್ಲಿಯೂ ಸಕ್ರಿಯರಾಗಿದ್ದಾರೆ ನಟಿ.
77
ನೇರಪ್ರಸಾರದಲ್ಲಿ ಭಾರ್ಗವಿ ಎಲ್ಎಲ್ಬಿ ಬೃಂದಾ
ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಇವರು ತೊಡಗಿಸಿಕೊಂಡವರು. ಬೃಂದಾ ಆಗಿ ಇಷ್ಟು ಕಠೋರವಾಗಿರೋ ನಟಿ ಚೈತ್ರಾ ಬಾಲ್ಯದಿಂದಲೂ ತುಂಬಾ ಮೃದು ಸ್ವಭಾವ ಎನ್ನುವ ಕಾರಣಕ್ಕಾಗಿಯೇ ಎಲ್ಲರ ಜೊತೆ ಬೆರೆಯಲಿ ಎನ್ನುವ ಕಾರಣಕ್ಕೆ ಅವರ ತಂದೆ ನಾಟಕಕ್ಕೆ ಸೇರಿಸಿದ್ದರು. ಮೊದಲ ನಾಟಕದ ತರಬೇತಿ ಸಮಯದಲ್ಲಿಯೇ ಎಲ್ಲರ ಬಳಿ ಲೀಲಾಜಾಲವಾಗಿ ಬೆರೆತ ಈಕೆ ಮುಂದೆ ಐವತ್ತಕ್ಕೂ ಹೆಚ್ಚಿನ ನಾಟಕಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಮಾಸ್ಟರ್ ಕಿಶನ್ ನಿರ್ದೇಶನದ 'ಕೇರ್ ಆಫ್ ಫುಟ್ ಪಾತ್' ಸಿನಿಮಾದಲ್ಲಿಯೂ ಚೈತ್ರಾ ರಾವ್ ಅಭಿನಯಿಸಿದ್ದಾರೆ.