ಬಾತ್ರೂಮ್ ಬಿಟ್ಟು ಹೊರಕ್ಕೆ ಹೆಚ್ಚು ರೀಲ್ಸ್ ಮಾಡದಿದ್ದ ನಿವೇದಿತಾ ಗೌಡ ಇದೀಗ ಬಿಗ್ಬಾಸ್ ಸ್ಪರ್ಧಿಗಳ ಜೊತೆ ತುಂಡುಡುಗೆಯಲ್ಲಿ ಭರ್ಜರಿ ರೀಲ್ಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಬಿಗ್ಬಾಸ್ ಖ್ಯಾತಿಯ, ರ್ಯಾಪರ್ ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ (ಕು)ಖ್ಯಾತಿ ಹೆಚ್ಚಿಸಿಕೊಂಡಿರೋ ನಟಿ ನಿವೇದಿತಾ ಗೌಡ, ಕುತೂಹಲ ಎನ್ನುವಂತೆ ಪದೇ ಪದೇ ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡುವುದು ಹೆಚ್ಚುತ್ತಿದೆ. ಐಷಾರಾಮಿ ಬಂಗಲೆ ಇದ್ದರೂ, ಒಂದು ಮಾತು ಹೇಳಿದ್ರೆ ಸಾಕು, ರೀಲ್ಸ್ಗಾಗಿಯೇ ದೊಡ್ಡ ಜಾಗವನ್ನು ಅರೇಂಜ್ ಮಾಡಿಸುವ ತಾಕತ್ತು ಇದ್ದರೂ ಬಾತ್ರೂಮ್ನಲ್ಲಿಯೇ ನಟಿ ರೀಲ್ಸ್ ಮಾಡ್ತಿರೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಆಗಿ ಹೋಗಿದೆ.
27
ಬಾತ್ರೂಮ್ ಬಿಟ್ಟು ಹೊರ ಬಂದ ನಿವೇದಿತಾ ಗೌಡ
ಫಾರಿನ್ ಟೂರ್ ಸುತ್ತಿ, ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ, ವಾಪಸ್ ಮನೆಗೆ ಬಂದಾಗಿದೆ. ದಿನದಿಂದ ದಿನಕ್ಕೆ ಈಕೆಯ ರೀಲ್ಸ್ ಹೆಚ್ಚುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್.
37
ಟ್ರೋಲ್ ಮಾಡಿಸಿಕೊಳ್ಳೋದೆಂದ್ರೆ ಸಕತ್ ಖುಷಿ
ಟ್ರೋಲ್ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್ ಖುಷ್. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್, ನೆಗೆಟಿವ್ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. ಅವರ ಸಾಲಿಗೆ ನಿವೇದಿತಾ ಸೇರಿ ವರ್ಷಗಳೇ ಕಳೆದು ಹೋಗಿವೆ.
ಇಂತಿಪ್ಪ ನಿವೇದಿತಾ ಗೌಡ, ಇದೀಗ ಬಿಗ್ಬಾಸ್ ಸ್ಪರ್ಧಿಗಳಾಗಿದ್ದ ರಜತ್, ಧನರಾಜ್ ಹಾಗೂ ನಟಿ ಅಖಿಲಾ ಪ್ರಕಾಶ್ ಜೊತೆ ಭರ್ಜರಿ ರೀಲ್ಸ್ ಮಾಡಿದ್ದಾರೆ. ಮಾಮೂಲಿನಂತೆ ತುಂಡುಡುಗೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇವರೆಲ್ಲರೂ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ಮೋನಿಕಾ ಹಾಡು ಮೊನಿಕಾಕ್ಕೆ ಸ್ಟೆಪ್ ಹಾಕಿದ್ದಾರೆ. ಕೂಲಿ ಸಿನಿಮಾದಲ್ಲಿ ಮೋನಿಕಾ ಆಗಿ ಸೊಂಟ ಬಳುಕಿಸಿದ್ದಾರೆ ಪೂಜಾ ಹೆಗ್ಡೆ. ಅದೇ ಹಾಡಿಗೆ ನಿವೇದಿತಾ ಗೌಡ ಹಾಗೂ ಸ್ನೇಹಿತರು ಭರ್ಜರಿ ಸ್ಟೆಪ್ ಹಾಕಿದ್ದು ಅದೀಗ ಭಾರಿ ವೈರಲ್ ಆಗ್ತಿದೆ.
57
ಕ್ವಾಟ್ಲೆ ಕಿಚನ್ನಲ್ಲಿ ಸೌಂಡ್ ಮಾಡ್ತಿರೋ ನಟಿ
ನಿವೇದಿತಾ ಗೌಡ ಕುರಿತು ಹೇಳುವುದಾದರೆ, ಸದ್ಯ ಕ್ವಾಟ್ಲೆ ಕಿಚನ್ ಷೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರಿಗೆ ಕೆಲ ವಾರಗಳ ಹಿಂದೆ ಹಸುವಿನ ಹಾಲು ಕರೆಯುವ ಟಾಸ್ಕ್ ಕೊಡಲಾಗಿತ್ತು. ಇದನ್ನು ಕೇಳಿ ನಿವೇದಿತಾ ಸುಸ್ತಾಗಿ ಹೋಗಿದ್ದರು. ಇವರಿಗೆ ಈ ಟಾಸ್ಕ್ ಕೊಟ್ಟಿರೋದಕ್ಕೆ ಇನ್ನಿಲ್ಲದ ತಮಾಷೆಯ ಕಮೆಂಟ್ಸ್ಗಳು ಬಂದಿದ್ದವು.
67
ತುಂಡುಡುಗೆಯಿಂದ ಟ್ರೋಲ್ ಆಗ್ತಿರೋ ನಿವೇದಿತಾ ಗೌಡ
ತುಂಡುಡುಗೆ ತೊಟ್ಟು ದೇಹ ಪ್ರದರ್ಶನ ಮಾಡುತ್ತಾ ರೀಲ್ಸ್ ಮಾಡಿಕೊಂಡಿದ್ದಾಕೆಗೆ ಹಸುವಿನ ಹಾಲು ಕರೆಯುವ ಟಾಸ್ಕ್ ಕೊಟ್ಟರೆ ಗತಿ ಏನು ಎಂದು ಕೆಲವರು ಪ್ರಶ್ನಿಸಿದರೆ, ಹಸು ಹಾಲು ಕೊಡುತ್ತದೆ ಎನ್ನೋದು ಈಕೆಗೆ ಗೊತ್ತಾ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದರು.
77
ಟ್ರೋಲ್ ಆಗೋದಿದ್ರಂತೆ ಫೇಮಸ್ ಆಗ್ತಿರೋ ನಟಿ.
ಎಲ್ಲಿಂದ ಹಾಲು ಕರೆಯುವುದು ಎನ್ನುವುದು ರೀಲ್ಸ್ ರಾಣಿಗೆ ಗೊತ್ತಿದ್ಯಾ ಎಂದು ಮತ್ತೆ ಕೆಲವರು ಕೇಳುತ್ತಿದ್ದರೆ, ಇನ್ನು ಕೆಲವು ತರ್ಲೆಗಳು ಬೇಡದ ಕಮೆಂಟ್ಸ್ ಕೂಡ ಮಾಡುತ್ತಿದ್ದಾರೆ. ತಮ್ಮ ಸ್ನೇಹಿತೆ ವಾಣಿ ಎನ್ನುವವರ ಜೊತೆ ರೀಲ್ಸ್ ಮಾಡಿದ್ರೂ ಟ್ರೋಲ್ ಆಗುವುದು ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ನಿವೇದಿತಾ ಗೌಡ ಅವರನ್ನು ಸ್ಪರ್ಧೆಗೆ ಆಯ್ಕೆ ಮಾಡಿರುವುದಕ್ಕೆ ಸಹಜವಾಗಿ ಇದರ ಟಿಆರ್ಪಿ ಕೂಡ ಏರುತ್ತಿದೆ ಎನ್ನುವುದು ಈ ಕಮೆಂಟ್ಸ್ ಮೂಲಕವೇ ತಿಳಿಯುತ್ತಿದೆ! ಇದೀಗ ಕೂಲಿ ಚಿತ್ರಕ್ಕೆ ಮಾಡಿದ ರೀಲ್ಸ್ ವಿಡಿಯೋ ಈ ಕೆಳಗಿದೆ ನೋಡಿ…