ಕನ್ನಿಕಾ ಎಂದರೆ ಸಾಕು, ಕೆನ್ನೆಯ ಮೇಲೆ ಬಿಗಿದು ಬಿಡೋಣ ಎನ್ನುವಷ್ಟು ಸಿಟ್ಟು ಭಾಗ್ಯಲಕ್ಷ್ಮಿ ಸೀರಿಯಲ್ ವೀಕ್ಷಕರದ್ದು. ಏಕೆಂದರೆ ನಾಯಕಿ ಭಾಗ್ಯಳ ಪ್ರತಿಹಂತದಲ್ಲಿಯೂ ಕೆಟ್ಟದ್ದನ್ನೇ ಬಯಸುವ ನೆಗೆಟಿವ್ ಕ್ಯಾರೆಕ್ಟರ್ ಕನ್ನಿಕಳದ್ದು. ಹೀಗೆ ನೆಗೆಟಿವ್ ಮೂಲಕ ಎಲ್ಲರನ್ನೂ ರಂಜಿಸ್ತಿರೋ ನಟಿಯ ನಿಜವಾದ ಹೆಸರು ಸುಕೃತಾ ನಾಗ್. ಸುಕೃತಾ ಭಾಗ್ಯಲಕ್ಷ್ಮಿ ಸೀರಿಯಲ್ಗೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಅಂಜಲಿ ಪಾತ್ರದ ಮೂಲಕ ಸೀರಿಯಲ್ ಪ್ರೇಕ್ಷಕರ ಮನಸ್ಸನ್ನು ಗೆದ್ದವರು.
28
ಭಾಗ್ಯಲಕ್ಷ್ಮಿ ಕನ್ನಿಕಾ ಸಕತ್ ಸ್ಟೆಪ್
ಇಂತಿಪ್ಪ ನಟಿ ಇದೀಗ ಮನಮೆಚ್ಚಿದ ಹುಡುಗಿ ಚಿತ್ರದ ಬೆಂಕಿಯಲ್ಲೂ ತಂಪು ಕಂಡೆನು... ಮತ್ತಿನಲ್ಲೂ ಸುಖವ ಕಂಡೆನು ಎನ್ನುವ ಹಿಟ್ ಹಾಡಿಗೆ ಮಾದಕವಾಗಿ ನರ್ತಿಸಿ ಕಚಗುಳಿ ಇಟ್ಟಿದ್ದಾರೆ. ಇವರ ಈ ಡಾನ್ಸ್ ನೋಡಿ ವೀಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕೆಲವರು ಪೂಜಾಳಿಗೆ ಹಿಂಸೆ ಕೊಡಬೇಡಿ ಎಂದು ಹೇಳುತ್ತಿದ್ದರೆ, ಮೊದಲು ಮದ್ವೆಯಾಗಿ ಮನೆಯಿಂದ ತೊಲಗು ಎಂದು ಕನ್ನಿಕಾ ರೋಲ್ಗೆ ಶಪಿಸುತ್ತಿದ್ದಾರೆ. ಒಟ್ಟಿನಲ್ಲಿ ನಟಿಯರು ರೀಲ್ಸ್ ಮಾಡಿದರೂ ಅವರ ಪಾತ್ರಗಳನ್ನೇ ಮುಂದುಮಾಡಿ ನೆಟ್ಟಿಗರು ಕಮೆಂಟ್ ಮಾಡುತ್ತಲೇ ಇರುತ್ತಅರೆ.
38
ಸೌಂದರ್ಯದ ಬಗ್ಗೆ ನಟಿ ಸುಕೃತಾ ನಾಗ್
ಸುಕೃತಾ ಅವರು ಸೀರಿಯಲ್ಗಳಲ್ಲಿ ಸೀರೆ ಉಟ್ಟು ಬಂದರೂ ಹೈಸ್ಕೂಲ್ ಹುಡುಗಿಯಂತೆಯೇ ಕಾಣುತ್ತಾರೆ. ಗೂಗಲ್ ದಾಖಲೆಗಳ ಪ್ರಕಾರ ಅವರ ವಯಸ್ಸೀಗ 32. ಆದರೂ ಕೂಡ ಇಷ್ಟೊಂದು ಚಿಕ್ಕ ವಯಸ್ಸಿನವರಂತೆ ಕಾಣಲು ಕಾರಣವೇನು ಎಂಬುದು ಹಲವರ ಪ್ರಶ್ನೆಯಾಗಿತ್ತು. ಈಚೆಗಷ್ಟೇ ನಟಿ ಗುಟ್ಟನ್ನು ರಿವೀಲ್ ಮಾಡಿದ್ದರು.
ನಟಿ ಹೇಳಿದ್ದೇನೆಂದರೆ, ಇದು ಪೇರೆಂಟ್ಸ್ ಗಿಫ್ಟ್. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ಎಲ್ಲರೂ ಹೀಗೇನೇ. ಚಿಕ್ಕವರಂತೆಯೇ ಇದ್ದಾರೆ. ಅದೇ ನನಗೆ ಬಂದಿರುವುದು ಎಂದಿದ್ದಾರೆ. ಇದೇ ವೇಳೆ ತಾವು ನಟನೆಗೆ ಬಂದದ್ದು ಅಚಾನಕ್ ಆಗಿ. ಬಿಸಿಎ ಮುಗಿಸಿದ್ದೇನೆ. ನಮ್ಮ ಮನೆಯಲ್ಲಿ ಓದು ಮೊದಲು ಎಂದಿದ್ದರು. ನನಗೂ ಚಿಕ್ಕವಳಿರುವಾಗ ಬಹುತೇಕ ಮಂದಿಯಂತೆ ಡಾಕ್ಟರ್, ಎಂಜಿನಿಯರ್ ಆಗಬೇಕು ಎನ್ನುವ ಆಸೆ ಇತ್ತು. ಆದರೆ ಡೆಸ್ಟಿನಿ ಇಲ್ಲಿಯವರೆಗೆ ಕರೆದುಕೊಂಡು ಬಂತು ಎಂದಿದ್ದರು.
58
ಸುಕೃತಾ ನಾಗ್ ಲವ್ ಬ್ರೇಕಪ್
ಹಿಂದೊಮ್ಮೆ ನಟಿ, ಇನ್ನೊಂದು ಸಂದರ್ಶನದಲ್ಲಿ ತಮ್ಮ ಜೀವನದ ಲವ್, ಬ್ರೇಕಪ್, ಡಿಪ್ರೆಷನ್ ಬಗ್ಗೆ ಮಾತನಾಡಿದ್ದರು. ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್ ಮತ್ತು ಬ್ರೇಕಪ್ ತುಂಬಾ ಕಾಮನ್ ಸಂಗತಿ ಆಗಿದೆ. ನಾನು ಲವ್ ಮಾಡಿದ್ದೀನಿ.. ನನಗೂ ಬ್ರೇಕಪ್ ಆಗಿದೆ. ಹಾರ್ಟ್ ಬ್ರೇಕ್ ಆಗಿದೆ. ಡಿಪ್ರೆಶನ್‌ಗೂ ಹೋಗಿದ್ದೀನಿ, ಥೆರಪಿನೂ ತೆಗೆದುಕೊಂಡಿದ್ದೀನಿ ಎಂದು ಸುಕೃತಾ ಓಪನ್ ಆಗಿ ಹೇಳಿಕೊಂಡಿದ್ದರು.
68
ಸುಕೃತಾ ನಾಗ್ ಲವ್ ಬ್ರೇಕಪ್
ಲವ್ ಬ್ರೇಕಪ್ ಆದಾಗ, ಖಿನ್ನತೆಗೆ ಜಾರಿದ್ದ ಬಗ್ಗೆ ಹೇಳಿಕೊಂಡಿರೋ ಸುಕೃತಾ, ಆ ಸಮಯದಲ್ಲಿ, ಮಾನಸಿಕ ತಜ್ಞರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಂಡಿದುದ್ದಾಗಿ ಹೇಳಿದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ಜೀವನದ ಒಂದು ಭಾಗ ಅಷ್ಟೇ. ಎರಡೂವರೆ ವರ್ಷದ ಪ್ರೀತಿ, ಬ್ರೇಕಪ್ ಆದಾಗ ಅದನ್ನ ಸಹಿಸಿಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಒಂದು ವ್ಯಕ್ತಿ ಜೊತೆಗೆ ಪ್ರೀತಿ ಮಾಡಿ, ಇವರನ್ನೇ ಮದುವೆನೂ ಆಗಬೇಕು ಅಂದ್ಕೊಂಡು, ಇಡೀ ಜೀವನವನ್ನೇ ಪ್ಲ್ಯಾನ್ ಮಾಡಿರುತ್ತೇವೆ. ಆ ವ್ಯಕ್ತಿ ದೂರ ಆದಾಗ ಬೇಜಾರಾಗುತ್ತೆ. ಅದೇ ನೋವಿನಿಂದ ಖಿನ್ನತೆಗೆ ಹೋಗಿದ್ದೆ. ಜೀವನ ಇಷ್ಟೇ ಎಂದು ಗೊತ್ತಾಯಿತು, ಏನೂ ಮಾಡಲು ಆಗಲ್ಲ ಎಂದಿದ್ದಾರೆ ನಟಿ.
78
ಸುಕೃತಾ ನಾಗ್ ರಿಯಲ್ ಲೈಫ್ ಸ್ಟೋರಿ
ನಾವು ಒನ್ನರನೊಬ್ಬರನ್ನು ತುಂಬಾ ಇಷ್ಟ ಪಟ್ಟಿದ್ದೆವು. ಆದರೆ ಒಂದು ಪಾಯಿಂಟ್‌ನಲ್ಲಿ ಸಂಬಂದ ಟೇಕನ್ ಫಾರ್ ಗ್ರ್ಯಾಂಟೆಡ್ ಅನ್ನೋ ಥರ ಆಗಿ ಬಿಟ್ಟಿತು. ಮಾತು ಕಡಿಮೆ ಆಗುತ್ತೆ ಜೊತೆಗೆ ಪ್ರೀತಿ ಕೂಡ ಕಮ್ಮಿ ಆಗುತ್ತಾ ಹೋಗುತ್ತೆ. ನನಗೆ ಪ್ರೀತಿಗಿಂತ ಮುಖ್ಯ ಇನ್ನೇನು ಇಲ್ಲ. ನನಗೆ ಮನಸಾರೆ ಪ್ರೀತಿಸಬೇಕು ಅಷ್ಟೇ ಎಂದು ಮನದ ಮಾತನ್ನು ತೆರೆದಿಟ್ಟಿದ್ದರು. ನಮ್ಮ ಹಣೆಯ ಬರಹದಲ್ಲಿ ಯಾರೊಟ್ಟಿಗೆ ಬದುಕಬೇಕು ಅಂತ ಇರುತ್ತೋ ಅದೇ ಆಗೋದು. ಅದು ನನ್ನ ಜೀವನದ ಬ್ಯೂಟಿಫುಲ್ ಪಾರ್ಟ್.
88
ಸುಕೃತಾ ನಾಗ್ ರಿಯಲ್ ಲೈಫ್ ಸ್ಟೋರಿ
ಬ್ರೇಕಪ್ ಆದಮೇಲೆಮತ್ತೆ ನನ್ನನ್ನು ಕಾಂಟ್ಯಾಕ್ಟ್ ಮಾಡಲಿಲ್ಲ. ನಾನು ಕೂಡ ಕಾಂಟ್ಯಾಕ್ಟ್ ಮಾಡಲಿಲ್ಲ. ಅವರ ಲೈಫ್‌ನಲ್ಲಿ ಅವರು ಚೆನ್ನಾಗಿದ್ದಾರೆ ಮತ್ತು ನನ್ನ ಜೀವನದಲ್ಲಿ ನಾನು ಚೆನ್ನಾಗಿದ್ದೀನಿ ಅಷ್ಟೇ ಎಂದಿದ್ದರು. ಅಷ್ಟಕ್ಕೂ ಇವರ ಲವ್ ಫೇಲ್ಯೂರ್ ಆಗಿದ್ದು, ಕೋವಿಡ್ ಟೈಮ್‌ನಲ್ಲಿ. ವ್ಯಕ್ತಿ ಸಿಗುವುದಕ್ಕೂ ಮೊದಲು ತುಂಬಾ ಎತ್ತರಕ್ಕೆ ವ್ಯಾಲ್ಯೂ ಇರುತ್ತೆ. ಸಿಕ್ಕಿದ ಮೇಲೆ ಆ ವ್ಯಾಲ್ಯೂ ತುಂಬಾ ಕೆಳಗೆ ಹೋಗುತ್ತದೆ, ಮತ್ತೆ ಕಳೆದುಕೊಂಡಾಗ ವಾಲ್ಯೂ ಹೆಚ್ಚಾಗುತ್ತೆ ಎಂದಿದ್ದರು.