ತೆರೆಯ ಮೇಲಿನ ಮೊದಲ 'ಕಿಸ್'​ ಅನುಭವ ಹೇಳಿ ನಾಚಿಕೊಂಡ ಕನ್ನಡತಿ ರಂಜನಿ ರಾಘವನ್​!

Published : Aug 03, 2025, 07:22 PM IST

ಶೀಘ್ರದಲ್ಲಿಯೇ ಮದುವೆಯಾಗಲಿರುವ ಪುಟ್ಟಗೌರಿ ಮದುವೆ ಹಾಗೂ ಕನ್ನಡತಿ ಸೀರಿಯಲ್​ ಖ್ಯಾತಿಯ ರಂಜನಿ ರಾಘವನ್​ ಅವರು ತೆರೆಯ ಮೇಲೆ ತಮ್ಮ ಮೊದಲ ಕಿಸ್​ ಅನುಭವವನ್ನು ಹೇಳಿಕೊಂಡಿದ್ದಾರೆ. ಅವರು ಹೇಳಿದ್ದೇನು? 

PREV
19
ಪುಟ್ಟಗೌರಿ ಮದ್ವೆ-ಕನ್ನಡತಿ ಮೂಲಕ ಫೇಮಸ್​ ಆಗಿರೋ ರಂಜನಿ ರಾಘವನ್​

ಪುಟ್ಟಗೌರಿ ಮದುವೆ ಹಾಗೂ ಕನ್ನಡತಿ ಸೀರಿಯಲ್​ ಮೂಲಕ ಮನೆಮಾತಾದ ನಟಿ ರಂಜನಿ ರಾಘವನ್​ ಸದ್ಯ ಮದುವೆಯ ವಿಷಯದಲ್ಲಿ ಚರ್ಚೆಯಲ್ಲಿ ಇದ್ದಾರೆ. ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಸೇರಿದಂತೆ ಸಾಹಿತ್ಯದಲ್ಲಿಯೂ ಬಿಜಿಯಾಗಿದ್ದಾರೆ ನಟಿ. ಈಚೆಗಷ್ಟೇ ನಟಿ ಮದುವೆಯ ಸುದ್ದಿ ಕೊಟ್ಟು ಯುವಕರ ಹಾರ್ಟ್​ ಬ್ರೇಕ್​ ಮಾಡಿದ್ದರು. ತಾವು ಮದುವೆಯಾಗಲಿರುವ ಹುಡುಗನ ಬಗ್ಗೆ ತಿಳಿಸಿದ್ದ ನಟಿ, ಅವರ ಹೆಸರು ಸಾಗರ್‌ ಭಾರಧ್ವಜ್‌ ಎಂದು ಹೇಳಿಕೊಂಡಿದ್ದರು. ಸದ್ಯ ಮದುವೆಯ ದಿನಾಂಕದ ಬಗ್ಗೆ ಅವರು ಯಾವಾಗ ಘೋಷಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

29
ಮೊದಲ ಆನ್​ಸ್ಕ್ರೀನ್​ ಮುತ್ತಿನ ಅನುಭವ ಹೇಳಿದ ರಂಜನಿ

ಈ ಸಮಯದಲ್ಲಿ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ಅವರಿಗೆ ಮೊದಲ ಆನ್​ಸ್ಕ್ರೀನ್​ ಕಿಸ್​ ಕುರಿತು ಪ್ರಶ್ನೆ ಕೇಳಲಾಗಿದೆ. ಅಷ್ಟಕ್ಕೂ ತೆರೆಯ ಮೇಲೆ ಮುತ್ತುಕೊಡುವುದು ಕೂಡ ಅಷ್ಟೇನೂ ಸುಲಭದ ಮಾತಲ್ಲ. ಅದರಲ್ಲಿಯೂ ಹೊಸತಾಗಿ ಇಂಡಸ್ಟ್ರಿಗೆ ಕಾಲಿಟ್ಟಾಗ ಇದು ತುಸು ಕಷ್ಟವೇ. ಆದ್ದರಿಂದ ಅನುಭವ ಏನು ಎನ್ನುವ ಬಗ್ಗೆ ನಟಿಗೆ ಪ್ರಶ್ನೆ ಮಾಡಲಾಗಿದೆ.

39
ಮೊದಲ ಆನ್​ಸ್ಕ್ರೀನ್​ ಮುತ್ತಿನ ಅನುಭವ ಹೇಳಿದ ರಂಜನಿ

ಅಂದರೆ ಸಿನಿಮಾ ಅಥವಾ ಸೀರಿಯಲ್​ನಲ್ಲಿ ಮೊದಲಿಗೆ ಮುತ್ತು ಕೊಟ್ಟಿದ್ದು ಯಾರಿಗೆ? ಅದರ ಫೀಲಿಂಗ್​ ಹೇಗಿತ್ತು ಎನ್ನುವ ಬಗ್ಗೆ ಕೇಳಲಾಯಿತು. ಪ್ರಶ್ನೆ ಕೇಳುತ್ತಿದ್ದಂತೆಯೇ ನಾಚಿ ನೀರಾದ ರಂಜಿನಿಯವರು, ಅಬ್ಬಾ ಎನ್ನುತ್ತಲೇ ಉತ್ತರಿಸಿದರು. ಮೊದಲಿಗೆ ಮುತ್ತು ಕೊಟ್ಟಿದ್ದು, ಪುಟ್ಟಗೌರಿ ಮದುವೆ ಸೀರಿಯಲ್​ನಲ್ಲಿ.

49
ಮೊದಲ ಮುತ್ತು ಕೊಟ್ಟದ್ದನ್ನು ತಿಳಿಸಿದ ನಟಿ

ಅದರ ಬಗ್ಗೆ ವಿವರಿಸಿದ ನಟಿ, 'ಆಗಿನ್ನೂ ಕಾಲೇಜು ಓದುತ್ತಿದ್ದೆ. ಮುತ್ತು ಹೇಗೆ ಕೊಡುವುದು ಎಂದೇ ತಿಳಿದಿರಲಿಲ್ಲ. ಆದರೆ ನಾಯಕ ರಕ್ಷಿತ್​ ಅವರಿಗೆ ಮುತ್ತು ಕೊಡಬೇಕಿತ್ತು. ಕೆನ್ನೆಗೆ ಮುತ್ತು ಕೊಟ್ಟೆ. ಅದು ತುಂಬಾನೇ ಕಷ್ಟದ ಸನ್ನಿವೇಶ ಆಗಿತ್ತು. ಇದೇ ನನ್ನ ಮೊದಲ ಆನ್​ಸ್ಕ್ರೀನ್​ ಕಿಸ್​' ಎನ್ನುತ್ತ ನಾಚಿಕೊಂಡರು.

59
ನಟಿ ಜೊತೆ ಲೇಖಕಿಯೂ ಹೌದು

ಇನ್ನು ರಂಜನಿ ರಾಘವನ್ ಕುರಿತು ಹೇಲುವುದಾದರೆ, ಇವರು 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಶೇ‍ಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಮಾಡಿದ್ದಾರೆ ಇವರು. ನಟಿಯ ಜೊತೆಗೆ ಇವರು ಲೇಖಕಿಯೂ ಹೌದು. 2014ರಲ್ಲಿ 'ಪುಟ್ಟಗೌರಿ ಮದುವೆ' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ರಂಜಿನಿ, ಬಳಿಕ ಪೌರ್ಣಮಿ ಎಂಬ ಮಲಯಾಳಿ ಧಾರಾವಾಹಿಯಲ್ಲಿ ಅಭಿನಯಿಸಿದರು.

69
ಹಲವು ಚಿತ್ರಗಳಲ್ಲಿಯೂ ನಟಿ

2019ರಲ್ಲಿ 'ಇಷ್ಟದೇವತೆ' ಎಂಬ ಸೀರಿಯಲ್​ನಲ್ಲಿಯೂ ಅದ್ಭುತ ನಟನೆ ನೀಡಿದರು. ರಂಜನಿ 2017ರಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

79
ನಿರ್ದೇಶಕಿಯಾಗಿಯೂ ಗುರುತಿಕೊಂಡಿರೋ ನಟಿ

ಇವರು ನಟಿಯ ಜೊತೆಗೆ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡರು. ಇಷ್ಟದೇವತೆ ಸೀರಿಯಲ್‌ಗೆ ತಾವೇ ಕಥೆ ಬರೆದು ಕ್ರಿಯೇಟಿವ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. 2020ರಲ್ಲಿ ಕನ್ನಡತಿ ಎಂಬ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದರು.

89
ನಿರ್ದೇಶಕಿಯಾಗಿಯೂ ಗುರುತಿಕೊಂಡಿರೋ ನಟಿ

ಈ ಧಾರಾವಾಹಿ ಹಿಟ್ ಆಗುವುದರ ಜೊತೆಗೆ ರಂಜನಿ ಜನಪ್ರಿಯತೆ ಕೂಡ ಹೆಚ್ಚಿದೆ. ಶೀರ್ಷಿಕೆಗೆ ತಕ್ಕಂತೆ ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿತ್ತು.

99
ಕಥೆ ಡಬ್ಬಿ ಎಂಬ ಪುಸ್ತಕ ಪ್ರಕಟ

ಕಥೆ ಡಬ್ಬಿ ಎಂಬ ಪುಸ್ತಕ ಬರೆದರು. 2022ರ ಡಿಸೆಂಬರ್ 7ರಂದು ಸ್ವೈಪ್ ಅಪ್ ಎಂಬ ಇನ್ನೊಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories