Anchor Anushree: ಮದ್ವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನು: ಎಲ್ಲರೆದುರೇ I Love You ಹೇಳಿ ನಾಚಿ ನೀರಾದ ನಟಿ!

Published : Aug 03, 2025, 02:31 PM ISTUpdated : Aug 03, 2025, 02:35 PM IST

ಆ್ಯಂಕರ್​ ಅನುಶ್ರೀ ಅವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡ್ತಿದ್ದರೂ ಇದುವರೆಗೆ ಅವರು ಈ ಬಗ್ಗೆ ಹೇಳಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅವರು ಮಹಾನಟಿ ವೇದಿಕೆ ಮೇಲೆ ಭಾವಿ ಪತಿಗೆ ಪ್ರಪೋಸ್​ ಮಾಡಿದ್ದಾರೆ. ಇಲ್ಲಿದೆ ವಿಡಿಯೋ... 

PREV
19
ಅನುಶ್ರೀ ಭಾವಿ ಪತಿಗೆ ಪ್ರಪೋಸ್​ ಮಾಡಿಬಿಟ್ರಾ?

ಈಗ ಎಲ್ಲೆಲ್ಲೂ ಆ್ಯಂಕರ್​ ಅನುಶ್ರೀ ಅವರ ಮದುವೆಯ ಸುದ್ದಿಯೇ ಹರಿದಾಡುತ್ತಿದೆ. ಇದುವರೆಗೆ ಅವರು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದು ನಿಜವೇ ಆಗಿದ್ದಲ್ಲಿ, ಸದ್ಯ ಆ್ಯಂಕರ್​ ಅನುಶ್ರೀ ಅವರು ಸದ್ಯ ಮದುವೆಯ ಮೂಡ್​ನಲ್ಲಿ ಇದ್ದಾರೆ. ಅಷ್ಟಕ್ಕೂ ಆ್ಯಂಕರ್​ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು.

29
ಅಭಿಮಾನಿಗಳಿಗೆ ಮದುವೆಯದ್ದೇ ಚಿಂತೆ

ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡಿದ್ದರು ಅವರ ಫ್ಯಾನ್ಸ್​. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು ನಟಿ. ಕಾರ್ಯಕ್ರಮವೊಂದರಲ್ಲಿ ನಟಿ ಮಲೈಕಾ ವಸುಪಾಲ್​ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದ್ದಾಗ, ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು.

39
ಭಾವಿ ಪತಿಯ ಬಗ್ಗೆ ಹೇಳಿದ್ದ ಅನುಶ್ರೀ

ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದರು. ಈ ವರ್ಷ 'ಅನುಪತಿ' ಬಂದೇ ಬರ್ತಾನೆ ಎಂದೂ ಹೇಳಿದ್ದರು. ಅದೇ ರೀತಿ ಅನುಶ್ರೀ ಅವರ ಮದುವೆ ಆಗಸ್ಟ್​ 28ರಂದು ಮದುವೆಯಾಗುತ್ತಿರುವುದಾಗಿ ಹೇಳಲಾಗಿದೆ. ಅವರ ಹುಡುಗನ ಬಗ್ಗೆಯೂ ಇದಾಗಲೇ ರಿವೀಲ್​ ಆಗಿದೆ.

49
ಮದುವೆಯ ಬಗ್ಗೆ ಆ್ಯಂಕರ್​ ಮೌನ

ಆದರೆ, ಅನುಶ್ರೀ ಅವರು ಇದುವರೆಗೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ವಿಸಿಟ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಗೊತ್ತಿದ್ದೇ ಅನುಶ್ರೀ ಅವರು ಇದೀಗ ಡಾ.ರಾಜ್​ಕುಮಾರ್​ ಅವರ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಅದರಲ್ಲಿ, ಡಾ.ರಾಜ್​ಕುಮಾರ್​ ಅವರು ಸಿನಿಮಾದ ಡೈಲಾಗ್​ ಒಂದಿದೆ. ಹಿನ್ನೆಲೆಯಲ್ಲಿ ನಟಿ ಅಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು.

59
ಅನುಶ್ರೀ ಕುತೂಹಲದ ಪೋಸ್ಟ್​

ಆಗ ರಾಜ್​ ಅವರು, ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಅನುಶ್ರೀ ಹೀಗೆ ಹೇಳಿದ್ದು ಯಾಕೆ ಎನ್ನುವ ಚರ್ಚೆ ಶುರುವಾಗಿದೆ.

69
ಭಾವಿ ಪತಿಗೆ ಪ್ರಪೋಸ್​ ಮಾಡಿದ ಆ್ಯಂಕರ್​ ಅನುಶ್ರೀ

ಆದರೆ ಮಹಾನಟಿ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಅನುಶ್ರೀ ಅವರು ಭಾವಿ ಪತಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್​ ಮಾಡಿದ್ದಾರೆ. ರಮೇಶ್​ ಅವರು ತಮ್ಮ ಪತ್ನಿಯ ಬಗ್ಗೆ ಗುಣಗಾನ ಮಾಡಿದರು. ನನ್ನ ಲೈಫ್​ನಲ್ಲಿ ಸಿಕ್ಕ ಅತಿ ದೊಡ್ಡ ಲಾಟರಿ ಎಂದರೆ ಅರ್ಚನಾ ಎಂದು I Love You ಎಂದರು.

79
ಭಾವಿ ಪತಿಗೆ ಪ್ರಪೋಸ್​ ಮಾಡಿದ ಆ್ಯಂಕರ್​ ಅನುಶ್ರೀ

ಬಳಿಕ ತರುಣ್​ ಸುಧೀರ್​ ಮತ್ತು ನಿಶ್ವಿಕಾ ನಾಯ್ಡು ಅವರು, ಅನುಶ್ರೀ ಅವರಿಗೆ ನೀವು ಪ್ರಪೋಸ್​ ಮಾಡಿದ್ರೆ ಹೇಗೆ ಮಾಡಬಹುದು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದರು. ಅನುಶ್ರೀ ನಾಚುತ್ತಲೇ ಬೇಡ ಬೇಡ ಎಂದರು. ಆದರೆ ಅಲ್ಲಿಗೆ ಅರ್ಧಚಂದ್ರನನ್ನು ವೇದಿಕೆ ಮೇಲೆ ಧರೆಗೆ ಇಳಿಸಲಾಯಿತು. ಆಗ ನೀವು ಪ್ರಪೋಸ್​ ಮಾಡಿ ಎಂದು ತರುಣ್​ ಸುಧೀರ್​ ಹೇಳಿದರು.

89
ಹೆಸರು ಪೂರ್ಣಚಂದ್ರನಾ?

ಆಗ ಅನುಶ್ರೀ ಅವರು ನಾಚುತ್ತಲೇ ಇದುವರೆಗೆ ನನ್ನ ಜೀವನದಲ್ಲಿ ಅರ್ಧಚಂದ್ರ ಇತ್ತು. ಪೂರ್ಣಚಂದ್ರನಾಗಿ ಬೇಗ ಬಾ ಐ ಲವ್​ ಯು ಎಂದರು. ಇವರು ಮದುವೆಯಾಗುವ ಹುಡುಗನ ಹೆಸರು ರೋಷನ್​ ಎಂದು ಹೇಳಲಾಗುತ್ತಿದ್ದರೂ, ಇದೀಗ ಭಾವಿ ಪತಿಯ ಹೆಸರು ಪೂರ್ಣಚಂದ್ರ ಇರಬಹುದೇ ಎನ್ನುವ ಚರ್ಚೆ ಕೂಡ ಶುರುವಾಗಿದೆ.

99
ಅನುಶ್ರೀ ಮದ್ವೆ ವಿಷ್ಯ ಇನ್ನೂ ಗುಟ್ಟು

ಒಟ್ಟಿನಲ್ಲಿ ನೇರವಾಗಿ ಏನನ್ನೂ ಹೇಳದ ಆ್ಯಂಕರ್​ ಅನುಶ್ರೀ ಅವರು, ಮದುವೆಯ ದಿನವೇ ಬಹಿರಂಗಪಡಿಸುವ ಉದ್ದೇಶದಲ್ಲಿ ಇದ್ದಂತಿದೆ. ಆಗಸ್ಟ್​ 18ಕ್ಕೆ ಮದುವೆ ಎಂದು ಹೇಳಲಾಗುತ್ತಿದ್ದರೂ, ಇದು ನಿಜ ಹೌದೋ ಅಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

Read more Photos on
click me!

Recommended Stories