ಗಂಡನ ರೂಪದ ಹಾವಿನ ಜೊತೆ ಸಂಸಾರ; 15 ಹಾಡುಗಳ ಸೂಪರ್ ಹಿಟ್ ಸಸ್ಪೆನ್ಸ್ ಕನ್ನಡ ಸಿನಿಮಾ

Published : Aug 30, 2026, 12:58 PM IST

Sandalwood Film 1997ರಲ್ಲಿ ಬಿಡುಗಡೆಯಾದ ಕಾದಂಬರಿ ಆಧಾರಿತ ಜಾನಪದ ಸಿನಿಮಾ. ಗಂಡನ ರೂಪದಲ್ಲಿ ಬರುವ ಹಾವಿನೊಂದಿಗೆ ನಾಯಕಿ ಸಂಸಾರ ನಡೆಸುವ ಈ ರೋಚಕ ಕಥೆಯುಳ್ಳ ಚಿತ್ರವು ಸಂಗೀತಮಯವಾಗಿದ್ದು, 5 ರಾಜ್ಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

PREV
16
ಕಾದಂಬರಿ ಆಧರಿತ ರೋಮಾಂಚನ ಕಥೆಯುಳ್ಳ ಸಿನಿಮಾ

ಕೆಲವೊಂದು ಕನ್ನಡದ ಹಳೆಯ ಸಿನಿಮಾಗಳನ್ನು ನೋಡುವಾಗ ಥಿಯೇಟರ್‌ನಲ್ಲಿ ನೋಡಿದ್ರೆ ಚೆನ್ನಾಗಿರುತ್ತಿತ್ತು ಎಂಬ ಆಸೆಯುಂಟಾಗುತ್ತದೆ. ಇಂದಿನ ಜೆನ್‌ ಜಿ ಸಮುದಾಯ ಕನ್ನಡದ ಹಳೆ ಸಿನಿಮಾಗಳನ್ನು ನೋಡುತ್ತಿದ್ದಾರೆ. ವೀಕೆಂಡ್ ಬಂದ್ರೆ ಸಾಕು ಕಾದಂಬರಿ ಅಥವಾ ನಾಟಕಗಳನ್ನಾಧರಿತ ಸಿನಿಮಾಗಳನ್ನು ನೋಡಲು OTT ಮೊರೆ ಹೋಗುತ್ತಾರೆ. ಇಂದು ನಾವು ಹೇಳುತ್ತಿರುವ ಕನ್ನಡದ ಸಸ್ಪೆನ್ಸ್ ಆಂಡ್ ಮ್ಯೂಸಿಕಲ್ ಹಿಟ್ ಸಿನಿಮಾ 1997ರಲ್ಲಿ ಬಿಡುಗಡೆಯಾಗಿತ್ತು.

26
1997ರ ಸೂಪರ್ ಹಿಟ್ ಸಿನಿಮಾ

ಹೌದು, 1997ರಲ್ಲಿ ಬಿಡುಗಡೆಯಾದ ಸಿನಿಮಾಗೆ ಖ್ಯಾತ ನಿರ್ದೇಶಕರಾಗಿರುವ ಟಿ.ಎಸ್.ನಾಗಾಭರಣ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಇಚ್ಛಾಧಾರಿ ಸರ್ಪಕ್ಕೆ ಮದುವೆಯಾಗಿ ಬಂದಿರುವ ವಧು ಮೇಲೆ ಆಸೆಯಾಗುತ್ತದೆ. ಈ ಆಸೆಯಿಂದ ಯುವತಿಗಾಗಿ ಆಕೆಯ ಗಂಡನ ರೂಪ ಪಡೆದುಕೊಳ್ಳುತ್ತದೆ. ಈ ವಿಷಯನ್ನು ತಿಳಿಯದ ನಾಯಕಿ ಗಂಡನ ರೂಪದಲ್ಲಿರುವ ಹಾವಿನ ಜೊತೆ ಸಂಸಾರ ನಡೆಸುತ್ತಾಳೆ. ನಂತರ ಈ ಹಾವಿನಿಂದಲೇ ನಾಯಕಿ ಗರ್ಭಿಣಿಯಾಗುತ್ತಾಳೆ.

36
ಕನ್ನಡದ ನಾಗಮಂಡಲ Nagamandala ಸಿನಿಮಾ

ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ರಚಿತ ಕಾದಂಬರಿ 'ನಾಗಮಂಡಲ' ಆಧಾರಿತ ಸಿನಿಮಾ ಆಗಿದೆ. ಸಿನಿಮಾಗೂ ಸಹ ಕಾದಂಬರಿ ಹೆಸರನ್ನೇ ಇರಿಸಲಾಗಿದೆ. ಜಾನಪದ ಕತೆಯಾಧಾರಿತ ನಾಟಕಕ್ಕೆ ಈ ಚಿತ್ರದಲ್ಲಿ ಕಲಾವಿದರು ಅಕ್ಷರಶಃ ಜೀವ ತುಂಬುವ ಮೂಲಕ ಪಾತ್ರಗಳಲ್ಲಿ ಜೀವಿಸಿದ್ದಾರೆ.

46
ಎತ್ತಿನ ಬಂಡಿ ಕಟ್ಕೊಂಡು ಸಿನಿಮಾ ನೋಡಲು ಹೋಗ್ತಿದ್ರು

ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಜನರು ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ಸಿನಿಮಾ ನೋಡಲು ಹೋಗುವಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು. ಅಷ್ಟು ಮಾತ್ರವಲ್ಲ 5 ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಅವಾರ್ಡ್‌ಗಳನ್ನು ಪಡೆದುಕೊಂಡಿದೆ.

56
ಮ್ಯೂಸಿಕಲ್ ಹಿಟ್ ಸಿನಿಮಾ

ಕಥೆ ಗಟ್ಟಿಯಾಗಿದ್ರೆ ಸಾಕು ಸಿನಿಮಾ ಗೆಲ್ಲುತ್ತೆ ಎಂಬುವುದು ಇಂದು ಹೇಳುವ ಮಾತಿದೆ. ಆದ್ರೆ ಕಥೆ ಜೊತೆ ಮ್ಯೂಸಿಕಲ್ ಸೂಪರ್ ಹಿಟ್ ಸಿನಿಮಾ ಇದಾಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ 15 ಹಾಡುಗಳನ್ನು ನಾಗಮಂಡಲ ಹೊಂದಿತ್ತು. ಅದ್ಭುತ ಕಥೆ ಹೂವಿನ ಹಾರಕ್ಕೆ ಹಾಡುಗಳು ಮುತ್ತು ಪೋಣಿಸಿದಂತಾಗಿತ್ತು. ಒಂದೇ ಒಂದು ಕ್ಷಣವೂ ಚಿತ್ರ ನಿಮಗೆ ಬೇಸರವನ್ನುಂಟು ಮಾಡಲ್ಲ. ನಿರ್ದೇಶಕರು ಅಷ್ಟು ಚೆಂದವಾಗಿ ಕತೆಯನ್ನು ತೆರೆ ಮೇಲೆ ತೆಗೆದುಕೊಂಡು ಬಂದಿದ್ದಾರೆ.

66
ಎಲ್ಲಿ ನೋಡಬಹುದು ಈ ಸಿನಿಮಾ?

ಪ್ರಕಾಶ್ ರಾಜ್, ವಿಜಯಲಕ್ಷ್ಮೀ, ಮಂಡ್ಯ ರಮೇಶ್, ಬಿ.ಜಯಶ್ರೀ ಮತ್ತು ವನಿತಾ ವಾಸು ಸೇರಿದಂತೆ ದೊಡ್ಡ ತಾರಾಬಳಗವನ್ನು ನಾಗಮಂಡಲ ಹೊಂದಿದೆ. ಇಂದಿನ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಗೆಲುವಿಗಾಗಿ ನಾಗಮಂಡಲ ಸಿನಿಮಾ ಹಾಡುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಿನಿಮಾವನ್ನು sunnxt ಪ್ಲಾಟ್‌ಫಾರಂನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories