ಪ್ರತಿ 10 ನಿಮಿಷಕ್ಕೊಂದು ಭಯಾನಕ ತಿರುವು; OTTಯಲ್ಲಿರೋ ನಿಗೂಢ ಮಲಯಾಳಂ ಹಾರರ್ ಸಿನಿಮಾ

Published : Aug 29, 2026, 04:08 PM IST

2021ರಲ್ಲಿ ಬಿಡುಗಡೆಯಾದ ಮಲಯಾಳಂನ ಒಂದು ನಿಗೂಢ ಹಾರರ್ ಸಿನಿಮಾವಾಗಿದೆ. ಆರೋಪಿಯೊಬ್ಬನನ್ನು ಬಂಧಿಸಲು ಕಾಡಿನ ಗ್ರಾಮಕ್ಕೆ ಮಾರುವೇಷದಲ್ಲಿ ಬರುವ ಪೊಲೀಸರು, ಅಲ್ಲಿನ ವಿಚಿತ್ರ ಘಟನೆಗಳಿಂದ ಭಯಭೀತರಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ರೋಚಕ ಸಿನಿಮಾ ಸೋನಿ ಲಿವ್ ಓಟಿಟಿಯಲ್ಲಿ ಲಭ್ಯವಿದೆ.

PREV
15
ಪ್ರತಿ 10 ನಿಮಿಷಕ್ಕೊಮ್ಮೆ ರೋಚಕ ತಿರುವು

ಇದೊಂದು ಮಲಯಾಳ ಹಾರರ್ ಸಿನಿಮಾ ಆಗಿದ್ದು, ಪ್ರತಿ 10 ರಿಂದ 15 ನಿಮಿಷಕ್ಕೊಮ್ಮೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಸಿನಿಮಾ ಆರಂಭದ 10 ನಿಮಿಷ ಸಾಮಾನ್ಯ ಕಥೆಯಂತೆ ಅನ್ನಿಸಿದ್ರೂ ಮುಂದೆ ತೆಗೆದುಕೊಳ್ಳುವ ಭಯಾನಕ ಟ್ವಿಸ್ಟ್‌ಗಳು ನಿಮ್ಮನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ. ಸಿನಿಮಾ ಮುಗಿದ್ರೂ ಕಥೆಯ ಬಗ್ಗೆಯೇ ಚಿಂತನೆ ಮಾಡುವಂತೆ ಮಾಡುತ್ತದೆ.

25
ಕೇವಲ 19 ದಿನಗಳಲ್ಲಿಯೇ ಚಿತ್ರೀಕರಣ

ಈ ಸಿನಿಮಾದ ಮತ್ತೊಂದು ಅಚ್ಚರಿ ವಿಷಯ ಏನಂದ್ರೆ ಇದು ಕೇವಲ 19 ದಿನಗಳಲ್ಲಿಯೇ ಚಿತ್ರೀಕರಣಗೊಂಡಿದೆ. ಈ ಕಾರಣದಿಂದ ಸಿನಿಮಾ ಬಿಡುಗಡೆಗೊಂಡು ಇಷ್ಟು ವರ್ಷಗಳಾದ್ರೂ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಚರ್ಚೆಗಳು ನಡೆಯುತ್ತದೆ. ಸಿನಿಮಾ ಮುಗಿಯುವರೆಗೂ ಈ ಚಿತ್ರ ಹಲವು ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಈ ಚಿತ್ರವನ್ನು ಒಂದಲ್ಲ ಎರಡು ಬಾರಿ ನೋಡಬೇಕು ಅನ್ನೋದು ವೀಕ್ಷಕರ ಅಭಿಪ್ರಾಯವಾಗಿದೆ.

35
2021ರಲ್ಲಿ ಬಿಡುಗಡೆಯಾದ ಚುರುಲಿ ಸಿನಿಮಾ

ಮಲಯಾಳಂ ಭಾಷೆಯ ಚುರುಲಿ (Churuli) ಸಿನಿಮಾ 2021ರಲ್ಲಿ ಬಿಡುಗಡೆಯಾಗಿದ್ರೂ, ಇಂದಿಗೂ ಒಟಿಟಿಯಲ್ಲಿ ಸಂಚಲನ ಸೃಷ್ಟಿಸುತ್ತಿರುತ್ತದೆ. ಕೋವಿಡ್ ಆರಂಭಕ್ಕೂ ಮುನ್ನವೇ ದಟ್ಟ ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು. ಪ್ರತಿಯೊಂದು ದೃಶ್ಯವನ್ನು ಅರಣ್ಯ ಪ್ರದೇಶದಲ್ಲಿಯೇ ಚಿತ್ರೀಕರಣ ಆಗಿದ್ದರಿಂದ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

45
ಚಿತ್ರದ ಕಥೆ ಏನು?

ಓರ್ವ ಸಾಧು, ಒಂದು ದೆವ್ವ ಮತ್ತು ವಿಚಿತ್ರವಾದ ಚೆಂಡು ಸುತ್ತ ಸಾಗುವ ನಿಗೂಢ ಕಥೆಯೇ ಚುರುಲು. ಈ ಕಥೆ ಹೇಗೆ ಸಾಗುತ್ತೆ ಎಂಬುದನ್ನು ನಿಮ್ಮಿಂದ ಊಹಿಸಲು ಅಸಾಧ್ಯವಾಗುತ್ತದೆ. ಈ ಸಿನಿಮಾ ನೋಡುತ್ತಾ ನೀವು ಸಹ ಕಥೆಯ ಒಂದು ಭಾಗವಾಗುತ್ತದೆ. ಕೆಲ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಲು ಕಾಡಿನಲ್ಲಿರುವ ಗ್ರಾಮಕ್ಕೆ ಮಾರುವೇಷದಲ್ಲಿ ಬರುತ್ತಾರೆ.

55
ಯಾವ ಓಟಿಟಿ ಪ್ಲಾಟ್‌ಫಾರಂನಲ್ಲಿದೆ ಈ ಸಿನಿಮಾ?

ಈ ಕಾಡಿನ ಗ್ರಾಮದಲ್ಲಿ ಆಚರಣೆ, ಜನರ ಸ್ವಭಾವ ಕಂಡು ಪೊಲೀಸರು ಭಯಗೊಳ್ಳುತ್ತಾರೆ. ತಾವು ಪ್ರವೇಶಿಸಿದ ಗ್ರಾಮದಿಂದ ಮತ್ತೆ ಹಿಂದಿರುಗುವ ದಾರಿ ಇಲ್ಲ ಎಂಬ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಚಿತ್ರದ ಅಸಲಿ ಕಥೆ ಶುರುವಾಗುತ್ತದೆ. ಈ ಚುರುಲಿ ಸಿನಿಮಾ ಸೋನಿ ಲಿವ್ ಓಟಿಟಿ ಪ್ಲಾಟ್‌ಫಾರಂನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಚಿತ್ರದಲ್ಲಿ ವಿನಯ್ ಪೋರ್ಟ್, ಜೋಜು ಜಾರ್ಜ್, ಸಜಿನ್ ಗೋಪು, ಜಾಫರ್ ಇಡುಕ್ಕಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದು,ಲಿಜೋ ಜೋಸ್ ಪೆಲ್ಲಿಸ್ಸೆರಿ ಆಕ್ಷನ್ ಕಟ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories