ಶಿಕ್ಷಕರ ದಿನದಂದು ಈ 5 ಬಾಲಿವುಡ್ ಸಿನಿಮಾಗಳು ಯಾಕೆ ನೋಡಬೇಕು ಗೊತ್ತಾ?

Published : Sep 05, 2026, 01:19 PM IST

Teacher's day Special movies 'ಗುರು' ಎಂದರೆ ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಸಿಗುವ ವ್ಯಕ್ತಿಯಲ್ಲ. ಜೀವನದ ಪ್ರಮುಖ ಪಾಠಗಳನ್ನು ಕಲಿಸುವ ಯಾರೇ ಆದರೂ ಅವರು ಗುರುಗಳೇ.. I ಶಿಕ್ಷಕರ ದಿನಾಚರಣೆಯಂದು ಈ 5 ಬಾಲಿವುಡ್ ಮೂವಿಗಳು ನೋಡಿ ಒಮ್ಮೆ

PREV
15
ತಾರೆ ಜಮೀನ್ ಪರ್

Teachers Day Special: ಇಂದು ಶಿಕ್ಷಕರ ದಿನಾಚರಣೆ. ಈ ದಿನದಂದು ನಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ನೆನಪಿಸಿಕೊಳ್ಳುವುದು ಸಹಜ. ಆದರೆ 'ಗುರು' ಎಂದರೆ ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಸಿಗುವ ವ್ಯಕ್ತಿಯಲ್ಲ. ಜೀವನದ ಪ್ರಮುಖ ಪಾಠಗಳನ್ನು ಕಲಿಸುವ ಯಾರೇ ಆದರೂ ಅವರು ಗುರುಗಳೇ..ಇಂಥ ತಿಳಿವಳಿಕೆಯನ್ನು ಮೂಡಿಸುವಲ್ಲಿ ಬಾಲಿವುಡ್‌ನ ಕೆಲವು ಸಿನಿಮಾಗಳು ಹಲವು ಬಾರಿ ಅತ್ಯಂತ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆ.

ಬಾಲಿವುಡ್ ಕೆಲವು ಸಿನಿಮಾಗಳು ಕೇವಲ ಮನರಂಜನೆ ನೀಡುವುದಲ್ಲದೆ ಜೀವನ ಸ್ಫೂರ್ತಿ ನೀಡುವಂತಹ, ಗುರು-ಶಿಷ್ಯರ ಸಂಬಂಧವನ್ನು ಕಟ್ಟಿಕೊಟ್ಟಿವೆ. ಅಂಥ ಸ್ಮರಣೀಯ ಚಿತ್ರಗಳನ್ನು ಅವುಗಳ ಪಾತ್ರಗಳು ಇಲ್ಲಿವೆ. ಶಿಕ್ಷಕರ ದಿನಾಚರಣೆಯ ದಿನವಾದ ಇಂದು ಈ ಸಿನಿಮಾಗಳನ್ನು ನೋಡುವುದು ಬಹಳ ಮುಖ್ಯವೆನಿಸುತ್ತೆ.

ತಾರೆ ಜಮೀನ್ ಪರ್

ಈ ಪಟ್ಟಿಯಲ್ಲಿ ಮೊದಲಿಗೆ ನೆನಪಾಗುವುದೇ 'ತಾರೆ ಜಮೀನ್ ಪರ್' ಚಿತ್ರದ ರಾಮ್ ಶಂಕರ್ ನಿಕುಂಜ್ ಪಾತ್ರ. ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುವ ಬಾಲಕ ಇಶಾನ್ ಅವಸ್ಥಿಯೊಳಗಿನ ಕಲಾವಿದನನ್ನು ಗುರುತಿಸಿ, ಅವನಿಗೆ ಹೊಸ ಬದುಕು ನೀಡುವ ಕಲಾ ಶಿಕ್ಷಕನಾಗಿ ಅಮೀರ್ ಖಾನ್ ಅದ್ಭುತವಾಗಿ ನಟಿಸಿದ್ದರು. ಇದೊಂದು ಪಾತ್ರವು ಶಿಕ್ಷಕನ ನಿಜವಾದ ಜವಾಬ್ದಾರಿ ಏನು ಎಂಬುದನ್ನು ತೋರಿಸಿಕೊಟ್ಟಿತು.

25
ಬ್ಲ್ಯಾಕ್'

ಇದೇ ರೀತಿಯ ಮತ್ತೊಂದು ಹೃದಯಸ್ಪರ್ಶಿ ಕಥೆ 'ಬ್ಲ್ಯಾಕ್' ಚಿತ್ರದ್ದು. ಕಿವುಡ ಮತ್ತು ಅಂಧೆಯಾಗಿದ್ದ ಮಿಶೆಲ್ ಮೆಕ್‌ನಾಲಿ (ರಾಣಿ ಮುಖರ್ಜಿ) ಎಂಬ ಹುಡುಗಿಯ ಬದುಕಿಗೆ ಬೆಳಕಾಗುವ ಶಿಕ್ಷಕ ದೇವ್‌ರಾಜ್ ಸಹಾಯ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಕತ್ತಲಲ್ಲಿದ್ದ ಬದುಕಿಗೆ ಅಕ್ಷರ ಜ್ಞಾನದ ದೀವಿಗೆಯನ್ನು ಹಿಡಿದು ದಾರಿ ತೋರಿದ ಗುರುವಿನ ಪಾತ್ರವದು.

35
ಚಕ್ ದೇ ಇಂಡಿಯಾ

ಶಿಕ್ಷಕ ಕೇವಲ ಪಾಠ ಮಾಡುವವನಲ್ಲ, ಆತ ಒಬ್ಬ ಕೋಚ್ ಕೂಡ ಆಗಿರಬಹುದು. 'ಚಕ್ ದೇ ಇಂಡಿಯಾ' ಚಿತ್ರದಲ್ಲಿ ಶಾರುಖ್ ಖಾನ್ ನಿಭಾಯಿಸಿದ ಕಬೀರ್ ಖಾನ್ ಪಾತ್ರ ಇದಕ್ಕೆ ಉತ್ತಮ ಉದಾಹರಣೆ. ಹಾಕಿ ಕೋಚ್ ಆಗಿ, ತನ್ನ ತಂಡದ ಆಟಗಾರ್ತಿಯರಲ್ಲಿ ಕೇವಲ ಆಟದ ಕೌಶಲ್ಯವನ್ನಷ್ಟೇ ಅಲ್ಲದೆ, ದೇಶಪ್ರೇಮ ಮತ್ತು ಒಗ್ಗಟ್ಟಿನ ಮನೋಭಾವವನ್ನು ತುಂಬಿ ಅವರನ್ನು ಚಾಂಪಿಯನ್ ಆಗಿ ರೂಪಿಸಿದ್ದರು.

45
3 ಈಡಿಯಟ್ಸ್

ವ್ಯವಸ್ಥೆಯ ವಿರುದ್ಧವೇ ಸವಾಲೆಸೆದು, ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಹಾದಿಯಲ್ಲಿ ಸಾಗಲು ಪ್ರೇರಣೆ ನೀಡಿದ ಗುರುವಿನ ಕಥೆಯೂ ಇದೆ. '3 ಈಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್ ಅವರ 'ರಾಂಚೊ' ಪಾತ್ರವು ತನ್ನ ಸ್ನೇಹಿತರಿಗೆ ಅಂಕಗಳಿಗಿಂತ ಜ್ಞಾನ ಮುಖ್ಯ, ಪ್ಯಾಷನ್ ಅನ್ನು ಹಿಂಬಾಲಿಸಿ ಎಂದು ಕಲಿಸಿತು. ಇದು ಬಾಲಿವುಡ್‌ನ ಅತ್ಯಂತ ಸ್ಮರಣೀಯ 'ಸ್ನೇಹಿತ-ಗುರು' ಪಾತ್ರಗಳಲ್ಲಿ ಒಂದಾಗಿದೆ.

55
ಡಿಯರ್ ಜಿಂದಗಿ

ಇನ್ನು ಆಧುನಿಕ ಕಾಲದ ಗುರುವಿನ ಪರಿಕಲ್ಪನೆಯನ್ನು 'ಡಿಯರ್ ಜಿಂದಗಿ' ಚಿತ್ರದಲ್ಲಿ ಕಾಣಬಹುದು. ಇಲ್ಲಿ ಶಾರುಖ್ ಖಾನ್ ಮನೋವೈದ್ಯ ಡಾ. ಜಹಾಂಗೀರ್ ಖಾನ್ ಆಗಿ ಕಾಣಿಸಿಕೊಂಡರು. ಕೀರಾ (ಆಲಿಯಾ ಭಟ್) ಎದುರಿಸುತ್ತಿದ್ದ ಮಾನಸಿಕ ಗೊಂದಲಗಳಿಗೆ ಪರಿಹಾರ ತೋರಿಸಿ, ಬದುಕನ್ನು ಪ್ರೀತಿಸುವುದನ್ನು ಕಲಿಸುವ ಮೂಲಕ, ಒಬ್ಬ ಥೆರಪಿಸ್ಟ್ ಕೂಡ ಹೇಗೆ ಉತ್ತಮ ಗುರುವಾಗಬಲ್ಲ ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories