ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಸಾಹಸ ದೃಶ್ಯಗಳು, ಯಶ್ ಅವರ ಸ್ಟೈಲಿಶ್ ಲುಕ್ ಮತ್ತು ಕಿಯಾರಾ ಜೊತೆಗಿನ ಕೆಮಿಸ್ಟ್ರಿ ಪ್ರಮುಖ ಆಕರ್ಷಣೆಯಾಗಿದೆ.
ಯಶ್ ಅಭಿನಯದದ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಿದ್ದು, ವೀಕ್ಷಕರು ಥಿಯೇಟರ್‌ನಿಂದ ಹೊರಬರುತ್ತಿದ್ದಾರೆ. ಚಿತ್ರಮಂದಿರದಿಂದ ಹೊರ ಬಂದಿರುವ ವೀಕ್ಷಕರು ಸಿನಿಮಾ ಹೇಗಿದೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಸಿನಿಮಾ ಆರಂಭದಿಂದಲೂ ತೆರೆ ಮೇಲೆ ಯಶ್ ಸಖತ್ ಆಗಿ ಮಿಂಚಿದ್ದು, ಅಭಿಮಾನಿಗಳಿಗೆ ಹುಗ್ಗಿ-ಹಾಲು-ತುಪ್ಪ ಸವಿದಷ್ಟು ಖುಷಿಯಾಗಿದ್ದಾರೆ.
25
ಸಾಹಸ ದೃಶ್ಯಗಳು
ಮೊದಲಾರ್ಧ ಭಾಗದಲ್ಲಿ ಯಶ್ ಸೇರಿದಂತೆ ಸಿನಿಮಾದ ಪಾತ್ರಗಳನ್ನು ಹಂತ ಹಂತವಾಗಿ ವೀಕ್ಷಕರಿಗೆ ಪರಿಚಯಿಸಲಾಗಿದೆ. ಹಾಗೆಯೇ ಇದರ ಜೊತೆಯಲ್ಲಿಯೇ ಬರುವ ಸಾಹಸ ದೃಶ್ಯಗಳು (Action scenes) ನೋಡುಗರನ್ನು ಕುರ್ಚಿಯ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿದೆ. ಆಕ್ಷನ್ ಸೀನ್ಸ್ ಜೊತೆಯಲ್ಲಿ ಬರುವ ಗ್ರ್ಯಾಂಡ್ ಬಿಜಿಎಂ ಮತ್ತು ಕಲರ್‌ಫುಲ್ ಹಾಡುಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
35
ಎಲ್ಲಾ ತಾರೆಯರ ಖಡಕ್ ಎಂಟ್ರಿ
ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿರೋದರಿಂದ ಮೊದಲಾರ್ಧ ಕಥೆ ನಿಧಾನಕ್ಕೆ ಸಾಗಿದಂತೆ ಭಾಸವಾದ್ರೂ, ಸ್ಕ್ರೀನ್‌ಪ್ಲೇ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವಲ್ಲಿ ಸಕ್ಸಸ್ ಆಗಿದೆ. ಮೊದಲಾರ್ಧದಲ್ಲಿ ಯಶ್ ಸೇರಿದಂತೆ ಎಲ್ಲಾ ತಾರೆಯರ ಖಡಕ್ ಎಂಟ್ರಿ ವಿಶೇಷವಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರು ಅಲ್ಟ್ರಾ ಸ್ಟೈಲಿಶ್ ಆಗಿ ಮಿಂಚಿದ್ದು, ತೆರೆ ಮೇಲೆ ಸಿನಿಮಾವನ್ನು ಕಣ್ಣಿಗೆ ಕಟ್ಟುವಂತೆ ತೆಗೆದುಕೊಂಡು ಪ್ರಯತ್ನ ಜನರಿಗೆ ಇಷ್ಟವಾಗಿದೆ. ಆಕ್ಷನ್ ಜೊತೆ ಗ್ಲಾಮರ್ ಸಹ ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್. ಟಾಕ್ಸಿಕ್ ಸಿನಿಮಾದಲ್ಲಿ ಐವರು ನಟಿಯರು ನಟಿಸಿದ್ದು, ಒಂದೊಂದು ಪಾತ್ರದ ಚಿತ್ರದ ಕಥೆಗೆ ಹೊಸ ತಿರುವ ನೀಡುತ್ತಿದೆ
55
ಯಶ್ ಮತ್ತು ಕಿಯಾರಾ ಕೆಮಿಸ್ಟ್ರಿ
ತೆರೆ ಮೇಲಿನ ಯಶ್ ಮತ್ತು ಕಿಯಾರಾ ಅವರ ಕೆಮಿಸ್ಟ್ರಿ ವರ್ಕೌಟ್ ಆಗಿದ್ದು, ನೋಡುಗರಿಗೆ ಇಷ್ಟವಾಗುತ್ತಿದೆ. ಬ್ರೇಕ್ ಬಳಿಕ ಶುರುವಾಗುವ ಸಿನಿಮಾ ಕಥೆ ಹೊಸ ಮೈಲೇಜ್ ಪಡೆದುಕೊಳ್ಳುತ್ತದೆ. ನಂತರ ರಾಯ ಏನಾಗುತ್ತಾನೆ? ಚಿತ್ರದ ಕಥೆ ಹೇಗೆ ಕೊನೆಯಾಗುತ್ತೆ ಎಂಬುದನ್ನು ತಿಳಿಯಲು ನಿಮ್ಮ ಸಮೀಪದ ಚಿತ್ರಮಂದಿರಕ್ಕೆ ತೆರಳಿ ಟಾಕ್ಸಿಕ್ ಸಿನಿಮಾ ನೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.