South Cinema: 2023ರಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವು ಇದೀಗ OTTಯಲ್ಲಿ ಲಭ್ಯವಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸರಣಿ ಕೊ*ಲೆ ಪ್ರಕರಣವನ್ನು ತನಿಖೆ ಮಾಡುವ ರೋಚಕ ಕಥೆಯನ್ನು ಈ ಚಿತ್ರ ಹೊಂದಿದೆ.
ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಸಿನಿಮಾ ನೋಡುವ ಖುಷಿಯೇ ಬೇರೆಯಾಗಿರುತ್ತದೆ. ಯಾವುದಾದ್ರೂ ಹೊಸ ಕಥೆಯ ಸಿನಿಮಾಗಾಗಿ ವೇಟ್ ಮಾಡುತ್ತಿದ್ರೆ, ಇಂದು ನಾವು ಹೇಳುವ ಚಿತ್ರ ನಿಮಗೆ ಖಂಡಿತ ಇಷ್ಟವಾಗುತ್ತದೆ. ವಿಶೇಷವಾಗಿ OTTಯಲ್ಲಿ ಥ್ರಿಲ್ಲಿಂಗ್ ಕಥೆಯುಳ್ಳ ಸೌಥ್ ಸಿನಿಮಾ ಹೊತ್ತು ತೆಗೆದುಕೊಂಡು ಬಂದಿವೆ. ಇದು OTTಯ ಬೇರೆ ಬೇರೆ ಪ್ಲಾಟ್‌ಫಾರಂಗಳಲ್ಲಿ ಲಭ್ಯವಿದೆ.
25
ಮಂತ್ರಮುಗ್ಧರನ್ನಾಗಿಸೋ ಸಿನಿಮಾದ ಸದೃಢ ಕಥೆ
ಈ ಸಸ್ಪೆನ್ಸ್ ಸಿನಿಮಾ ನೋಡುಗರನ್ನು ಮಂತ್ರಮುಗ್ಧಗೊಳಿಸುವ ತಾಕತ್ತನ್ನು ಹೊಂದಿದೆ. ಈ ಸಿನಿಮಾ ಅತ್ಯಂತ ಸದೃಢವಾದ ಕಥೆಯನ್ನು ಹೊಂದಿರುವ ಕಾರಣ ಜನರಿಂದಲೇ ಇದಕ್ಕೆ ಹೆಚ್ಚು ಪ್ರಚಾರ ಸಿಕ್ಕಿತ್ತು. 2023ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಇಂದು ನಾವು OTT ಪ್ಲಾಟ್‌ಫಾರಂನಲ್ಲಿ ನೋಡಬಹುದಾಗಿದೆ. OTTಯಲ್ಲಿ ಈ ಚಿತ್ರಕ್ಕೆ ಹೆಚ್ಚು ಮೆಚ್ಚುಗೆ ಸಿಕ್ಕಿದೆ.
35
ತಮಿಳು ಸಿನಿಮಾ-Por Thozhil
ಈ ಚಿತ್ರದ ಹೆಸರು 'ಪೋರ್ ತೋಝಿಲ್' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಇದು ಸೇರ್ಪಡೆಯಾಯ್ತು. ವಿಮರ್ಶಕರಿಂದಲೂ ವ್ಯಾಪಕ ಮೆಚ್ಚುಗೆ ಪಡೆದುಕೊಂಡ ಫೋರ್ ತೋಝಿಲ್ ಸಿನಿಮಾಗೆ IMDBಯಲ್ಲಿ 10ಕ್ಕೆ 8 ರೇಟಿಂಗ್ ಸಿಕ್ಕಿದೆ. ವಿಘ್ನೇಶ್ ರಾಜಾ ನಿರ್ದೇಶನದ, ಆರ್ ಶರತ್‌ಕುಮಾರ್ ನಟನೆಯ ಈ ಸಿನಿಮಾದ ಕಥೆ ಏನು ಎಂಬುದನ್ನು ನೋಡೋಣ ಬನ್ನಿ.
ಪೋರ್ ತೋಝೀಲ್ ಸಿನಿಮಾದ ಕಥೆ ಇಬ್ಬರು ಪೊಲೀಸ್ ಅಧಿಕಾರಿಗಳ ಸುತ್ತವೇ ಸಾಗುತ್ತದೆ. ಸೀನಿಯರ್ ಇನ್‌ಸ್ಪೆಕ್ಟರ್ ಲಲ್ಲನ್ ಮತ್ತು ಹೊಸಬ ಹಾಗೂ ಬುದ್ಧಿವಂತನಾಗಿರುವ ಪ್ರವೀಣ್ ಜೊತೆಯಾಗಿ ಸರಣಿ ಕೊ*ಲೆ ಪ್ರಕರಣಗಳನ್ನು ತನಿಖೆ ಮಾಡಲು ಆರಂಭಿಸುತ್ತಾರೆ. ಪ್ರವೀಣ್ ಹೊಸಬನಾಗಿದ್ರೂ ನಿಯಮಗಳನ್ನು ಪಾಲನೆ ಮಾಡುವ ಅಧಿಕಾರಿಯಾಗಿರುತ್ತಾನೆ. ಇಬ್ಬರ ಕೆಲಸದ ವೈಖರಿ ಭಿನ್ನವಾಗಿರೋದು ಕಥೆಗೆ ರೋಚಕ ತಿರುವುಗಳನ್ನು ನೀಡುತ್ತಿರುತ್ತದೆ.
55
ಈ ಸಿನಿಮಾ ಯಾವ ಪ್ಲಾಟ್‌ಫಾರಂನಲ್ಲಿದೆ?
ಪ್ರಕರಣದ ತನಿಖೆ ನಡೆಯುತ್ತಿದ್ದಂತೆ ಪೋರ್ ತೋಝಿಲ್ ಸಿನಿಮಾ ಹೊಸ ತಿರುವುಗಳನ್ನು ಪಡೆದುಕೊಳ್ಳಲು ಆರಂಭಿಸುತ್ತದೆ. ಈ ಸಿನಿಮಾವನ್ನು ನೀವು ಈಗ Sony LIV ಪ್ಲಾಟ್‌ಫಾರಂನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಶರತ್ ಕುಮಾರ್ ಜೊತೆಯಲ್ಲಿ ಅಶೋಕ್ ಸೆಲ್ವನ್ ಮತ್ತು ನಿಖಿಲಾ ವಿಮ್ಲಾ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.