ಅತ್ಯುತ್ತಮ ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಇಬ್ಬರು ಪೊಲೀಸ್ ಅಧಿಕಾರಿಗಳ ನಡುವಿನ ಇಗೋ ಮತ್ತು ಒಂದು ನಿಗೂಢ ಪ್ರಕರಣದ ತನಿಖೆಯ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಈ ಕಮರ್ಷಿಯಲ್ ಹಿಟ್ ಸಿನಿಮಾವನ್ನು ಒಟಿಟಿಗಳಲ್ಲಿ ಕನ್ನಡದಲ್ಲೂ ವೀಕ್ಷಿಸಬಹುದು.
ವೀಕೆಂಡ್ ಬಂದ್ರೆ ಸಾಕು, ಬಹುತೇಕರು OTTಯಲ್ಲಿ ಸಿನಿಮಾ ನೋಡುತ್ತಾ ರೆಸ್ಟ್ ಮಾಡುತ್ತಾರೆ. ಇಂದು OTT ಅಪ್ಲಿಕೇಶನ್ ಓಪನ್ ಮಾಡಿದ್ರೆ ಸಾಕು ಕಣ್ಮುಂದೆ ಸಾವಿರಾರು ಸಿನಮಾಗಳು ಬರುತ್ತವೆ. ಇಂದು ನಾವು ನಿಮಗೆ ಮಲಯಾಳಂ ಭಾಷೆಯ ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಬಗ್ಗೆ ಹೇಳುತ್ತಿದ್ದೇವೆ. ನಿಮಗೆ ದೃಶ್ಯಂ ಸಿನಿಮಾ ಇಷ್ಟವಾಗಿದ್ರೆ ಇದು ಸಹ ಫೇವರೇಟ್ ಚಿತ್ರಗಳಲ್ಲಿ ಒಂದಾಗಲಿದೆ.
25
7.2 ರೇಟಿಂಗ್ ಪಡೆದಿರೋ ಕಮರ್ಷಿಯಲ್ ಹಿಟ್ ಸಿನಿಮಾ
24ನೇ ಮೇ 2024ರಂದು ಬಿಡುಗಡೆಯಾದ ಸಿನಿಮಾ ಕಮರ್ಷಿಯಲ್ ಆಗಿಯೂ ಹಿಟ್ ಆಗಿತ್ತು. ಆನಂದ್ ತೇವರ್ಕ್ಕಾಟ್ ಮತ್ತು ಶರತ್ ಪೆರುಂಬವೂರ್ ಬರೆದ ಕಥೆಗೆ ಜಿಸ್ ಜಾಯ್ ಆಕ್ಷನ್ ಕಟ್ ಹೇಳಿದ್ದಾರೆ. ಬಿಜು ಮೆನನ್ ಮತ್ತು ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಐಎಂಡಿಬಿಯಲ್ಲಿ ಈ ಸಿನಿಮಾಗೆ 7.2 ರೇಟಿಂಗ್ ನೀಡಲಾಗಿದೆ. ಹಾಗಾದ್ರೆ ಯಾವುದು ಈ ಸಿನಿಮಾ ಮತ್ತು ಯಾವ OTT ಪ್ಲಾಟ್‌ಫಾರಂನಲ್ಲಿ ಲಭ್ಯವಿದೆ ಎಂದು ನೋಡೋಣ ಬನ್ನಿ.
35
ಚಿತ್ರದ ಕಥೆ ಏನು?
ಈ ಸಿನಿಮಾವು ನಿವೃತ್ತ ಡಿವೈಎಸ್‌ಪಿ ಉದಯಭಾನು ಅವರಿಂದ ಆರಂಭವಾಗುತ್ತದೆ. ಈ ಚಿತ್ರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಒಂದು ರಹಸ್ಯಮಯ ಪ್ರಕರಣದ ತನಿಖೆ (Cheppanamthotta Case) ಆರಂಭಿಸುತ್ತಾರೆ. ತನಿಖೆ ಸಂದರ್ಭದಲ್ಲಿ ಸೀನಿಯರ್ ಮತ್ತು ಜೂನಿಯರ್ ಪೊಲೀಸ್ ಅಧಿಕಾರಿಗಳ ನಡುವೆ ಸ್ವಾಭಿಮಾನದ ಪ್ರಶ್ನೆ ಎದುರಾಗುತ್ತದೆ. ಅಧಿಕಾರಿಗಳ ನಡುವಿನ ಸಂಘರ್ಷ ಪ್ರಕರಣದ ಹೇಗೆ ಸಾಗುತ್ತೆ ಎಂಬ ಕುತೂಹಲ ನಿಮ್ಮನ್ನು ಚಿತ್ರದ ಕೊನೆಯವರೆಗೂ ಕರೆದುಕೊಂಡು ಬರುತ್ತದೆ.
ಮಲಯಾಳಂ ಭಾಷೆಯ ಥಳವನ್ (Thalavan) ಸಿನಿಮಾ ಇದಾಗಿದ್ದು, ಸಸ್ಪೆನ್ಸ್ ಕಥೆಯನ್ನು ಹೊಂದಿದೆ. ಪ್ರಕರಣದ ತನಿಖೆಯು ಸೀನಿಯರ್ ಆಫಿಸರ್‌ನಿಂದ ಜೂನಿಯರ್‌ಗೆ ವರ್ಗಾವಣೆಯಾದಾಗ ಸಿನಿಮಾ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ಪಡೆದುಕೊಳ್ಳಲು ಆರಂಭಿಸುತ್ತದೆ. ಬಿಜು ಮೆನನ್ ಮತ್ತು ಆಸಿಪ್ ಅಲಿ ನಡುವಿನ ಜುಗಲ್ಬಂಧಿ ವೀಕ್ಷಕರಿಗೆ ಇಷ್ಟವಾಗುತ್ತದೆ.
55
ಯಾವ OTT ಪ್ಲಾಟ್‌ಫಾರಂ?
ಈ ಸಿನಿಮಾವನ್ನು Sony LIV, Airtel Xstream Play and Vi Moviesನ OTT ಪ್ಲಾಟ್‌ಫಾರಂಗಳಲ್ಲಿ ನೋಡಬಹುದಾಗಿದೆ. ಈ ಸಿನಿಮಾವನ್ನು ನೀವು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿದೆ. ಈ ವೀಕೆಂಡ್‌ಗೆ ಸಿನಿಮಾ ನೋಡುವ ಪ್ಲಾನ್ ಇದ್ರೆ Thalavan ಸೇವ್ ಮಾಡಿಕೊಳ್ಳಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.