ಕಲ್ಪನೆಗೂ ಮೀರಿದ ತಿರುವುಗಳನ್ನು ನೀಡುವ ಡಾರ್ಕ್ ಕಾಮಿಡಿ ಕಥೆಯುಳ್ಳ ಮಲಯಾಳಂ ಸಿನಿಮಾ!

Published : Sep 22, 2026, 01:47 PM IST

ಇದು ಅತ್ಯುತ್ತಮ ಡಾರ್ಕ್ ಕಾಮಿಡಿ ಮಲಯಾಳಂ ಸಿನಿಮಾವಾಗಿದೆ. ಸಿನಿಮಾ ನಿರ್ದೇಶಕನಾಗುವ ಕನಸು ಹೊತ್ತ ಯುವಕನ ಸುತ್ತ ಈ ಕಥೆ ಸಾಗಲಿದ್ದು, ಕಲ್ಪನೆಗೂ ಮೀರಿದ ತಿರುವುಗಳನ್ನು ಹೊಂದಿದೆ. ಈ ಕುತೂಹಲಕಾರಿ ಸಿನಿಮಾವನ್ನು ನೀವು ಒಟಿಟಿಯಲ್ಲಿ ವೀಕ್ಷಿಸಬಹುದು.

PREV
15
ಡಾರ್ಕ್ ಕಾಮಿಡಿ ಕಥೆಯುಳ್ಳ ಮಲಯಾಳಂ ಸಿನಿಮಾ

ತುಂಬಾ ವಿಶೇಷ ಕಥೆಯುಳ್ಳ ಸಿನಿಮಾ ಹುಡುಕುತ್ತಿದ್ದೀರಾ? ಇಂದು ನಾವು ನಿಮಗೆ ಡಾರ್ಕ್ ಕಾಮಿಡಿ ಕಥೆಯನ್ನು ಹೊಂದಿರುವ ಮಲಯಾಳಂ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ವಿಮರ್ಶಕಾತ್ಮಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಸಿನಿಮಾವನ್ನು ವೀಕೆಂಡ್‌ ಲಿಸ್ಟ್‌ಗೆ ಸೇರಿಸಿಕೊಳ್ಳೋದನ್ನು ಮರೆಯಬೇಡಿ. ಈ ಸಿನಿಮಾಗೆ IMDb 10ಕ್ಕೆ 7.2 ರೇಟಿಂಗ್ ನೀಡಿದೆ.

25
ಕಲ್ಪನೆಗೂ ಮೀರಿದ ತಿರುವುಗಳು

ಈ ಚಿತ್ರದ ಮೊದಲ ಅರ್ಧ ಭಾಗ ವೀಕ್ಷಕರನ್ನು ಬಹುಬೇಗ ಆಕರ್ಷಿಸುತ್ತದೆ. ನಂತರ ಚಿತ್ರ ಮುಂದುವರಿದಂತೆ ವೀಕ್ಷಕರ ಕಲ್ಪನೆಗೂ ಮೀರಿದ ತಿರುವುಗಳನ್ನು ಪಡೆದುಕೊಳ್ಳಲು ಆರಂಭಿಸುತ್ತದೆ. ಗೊಂದಲವನ್ನುಂಟು ಮಾಡೋ ಆಲೋಚನೆಗಳು ನಿರ್ದೇಶಕ ಚಾಕಚಕ್ಯತೆಯನ್ನ ತೋರಿಸುತ್ತದೆ. ಯಾವುದು ಈ ಸಿನಿಮಾ? ಯಾವ ಓಟಿಟಿ ಪ್ಲಾಟ್‌ಫಾರಂನಲ್ಲಿದೆ ಎಂದು ನೋಡೋಣ ಬನ್ನಿ.

35
ಮಾಲಿವುಡ್ ಟೈಮ್ಸ್

ನೆಸ್ಲನ್, ಶರಾಫ್ ಯು ದೀನ್, ಸಂಗೀತ್ ಪ್ರತಾಪ್ ಅಭಿನಯದ ಮಾಲಿವುಡ್ ಟೈಮ್ಸ್ (Mollywood Times) ಸಿನಿಮಾ ವಿಮರ್ಶಕರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಭಿನವ್ ಸುಂದರ್ ನಾಯಕ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸರಳವಾದ ಕಥೆಯೊಂದು ಅತ್ಯಂತ ಸುಂದರವಾಗಿ ತೆರೆ ಮೇಲೆ ತೆಗೆದುಕೊಂಡು ಬಂದಿದ್ದಾರೆ.

45
ಚಿತ್ರದ ಕಥೆ ಏನು?

ಮಹತ್ವಾಕಾಂಕ್ಷೆಯ ವಿನೀತ್ ಮಾಧವನ್ ಎಂಬ ಯುವಕನ ಸುತ್ತ ಕಥೆ ಸಾಗುತ್ತದೆ. ಒಂದು ಹಾರರ್ ಕಥೆಯ ಸಿನಿಮಾ ನಿರ್ಮಾಣ ಮಾಡೋದು ವಿನೀತ್ ಮಾಧವನ್ ಕನಸು ಆಗಿರುತ್ತದೆ. ವಾಸ್ತವತೆ ಮತ್ತು ಕಲ್ಪನೆ ನಡುವಿನ ಅಂತರದಲ್ಲಿ ವ್ಯತ್ಯಾಸವುಂಟಾಗುವ ಕಾರಣ ಹಲವು ತಿರುವುಗಳನ್ನು ಪಡೆದುಕೊಳ್ಳಲು ಶುರುವಾಗುತ್ತದೆ. ಈ ಸಿನಿಮಾವನ್ನು ಜಿಯೋಹಾಟ್‌ಸ್ಟಾರ್‌ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.

55
ಕೊನೆಗಾಗಿ ಕಾಯುವಿಕೆ

ವಿನೀತ್ ಮಾಧವನ್ ಪಾತ್ರದಲ್ಲಿ ನೆಸ್ಲೆನ್ ಕಾಣಿಸಿಕೊಂಡಿದ್ದು, ಶಾಲಾ ಬಾಲಕನಿಂದ ಯುವಕನಾಗಿ ನೆಸ್ಲೆನ್ ನಟಿಸಿದ್ದಾರೆ. ಬಾಲ್ಯದಿಂದಳೂ ಮಲಯಾಳ ಚಿತ್ರೋದ್ಯಮದ ಅತ್ಯಂತ ಕಿರಿಯ ಮತ್ತು ಶ್ರೇಷ್ಠ ಸಿನಿಮಾ ನಿರ್ದೇಶಕನಾಗಬೇಕೆಂದು ಕನಸು ಕಂಡಿರುತ್ತಾನೆ. ಚಿತ್ರ ಹೇಗೆ ಕೊನೆಯಾಗುತ್ತೆ ಎಂಬ ಕುತೂಹಲವೇ ನಿಮ್ಮನ್ನು ಕೊನೆಯವರೆಗೂ ಕರೆದುಕೊಂಡು ಬರುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories