ಮಲಯಾಳಂ ಯಾಕೆ? ಕನ್ನಡದಲ್ಲಿಯೇ ಉಂಟು ಸೈಕಾಲಜಿಕಲ್, ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ

Published : Sep 16, 2026, 02:30 PM IST

1991 ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಪತ್ನಿಯ ಸಾವಿನಿಂದ ಖಿನ್ನತೆಗೆ ಒಳಗಾದ ನಾಯಕ, ಊರಿನಲ್ಲಿ ನಡೆಯುವ ಸರಣಿ ಕೊಲೆಗಳ ಬೆನ್ನತ್ತಿದಾಗ ಎದುರಾಗುವ ನಿಗೂಢ ತಿರುವುಗಳೇ ಈ ಚಿತ್ರದ ಕಥೆ. ವಿಜ್ಞಾನ ಮತ್ತು ಮೂಢನಂಬಿಕೆಯ ಸಂಘರ್ಷವನ್ನು ಹೊಂದಿರುವ ಈ ಚಿತ್ರ ಇದಾಗಿದೆ.

PREV
15
ಪ್ರೇಕ್ಷಕರನ್ನು ರಂಜಿಸುವ ಅದ್ಭುತ ಸಿನಿಮಾ

ಇತ್ತೀಚಿನ ದಿನಗಳಲ್ಲಿ ಬೆಸ್ಟ್ ಕಥೆ ಸಿನಿಮಾಗಳು ಅಂದ್ರೆ ಜನರು ಮಾಲಿವುಡ್‌ನತ್ತ ಮುಖ ಮಾಡುತ್ತಾರೆ. ಆದ್ರೆ ನಮ್ಮ ಕನ್ನಡದಲ್ಲಿಯೂ ಗಟ್ಟಿಕಥೆ ಮತ್ತು ಕಲಾವಿದರ ನೈಜ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುವ ಅದ್ಭುತ ಸಿನಿಮಾಗಳು ಬರುತ್ತವೆ. ಪ್ರಚಾರ, ಸ್ಟಾರ್‌ಡಮ್ ಸೇರಿದಂತೆ ಅನೇಕ ಕಾರಣಗಳಿಂದ ಸಿನಿಮಾಗಳು ಥಿಯೇಟರ್‌ನಲ್ಲಿ ಹೆಚ್ಚು ಸದ್ದು ಮಾಡಲು ವಿಫಲವಾಗುತ್ತವೆ. ಇಂದು ನಾವು ನಿಮಗೆ ಸ್ಯಾಂಡಲ್‌ವುಡ್‌ನ ಸೈಕಾಲಜಿಕಲ್ ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ.

25
1991ರ ಕಾಲಘಟ್ಟದ ಕಥೆ

ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಈ ಸಿನಿಮಾಗೆ IMDbಯಲ್ಲಿ 7.1 ರೇಟಿಂಗ್ ನೀಡಲಾಗಿದೆ. 1991ರ ಕಾಲಘಟ್ಟದ ಮಲೆನಾಡು ಭಾಗದಲ್ಲಿ ನಡೆಯುವ ಕತೆ ಇದಾಗಿದ್ದು, ಇಲ್ಲಿ ನಾಯಕ ನಟ, ಪೊಲೀಸ್ ಅಧಿಕಾರಿಯಾಗಿದ್ದು, ಈತನ ಪತ್ನಿ ಸಾವು ಅಪಘಾತದಲ್ಲಾಗುತ್ತದೆ. ನಂತರ ನಾಯಕ ನಟ ಮಾನಸಿಕ ಖಿನ್ನತೆ ಸಮಸ್ಯೆಗೆ ಸಿಲುಕುತ್ತಾನೆ. ನಂತರ ನಾಯಕನಿಗೆ ಸತ್ತಿರೋ ಹೆಂಡ್ತಿ ಕಾಣಿಸುತ್ತಿರುತ್ತಾಳೆ.

35
ಸಾಲು ಸಾಲು ಕೊ*ಲೆಗಳು

ನಾಯಕ ಈ ಮನಸ್ಥಿತಿಯಲ್ಲಿರುವಾಗಲೇ ಊರಿನಲ್ಲಿ ಸಾಲು ಸಾಲು ಕೊ*ಲೆಗಳು ಆಗುತ್ತವೆ. ಈ ಪ್ರಕರಣಗಳ ತನಿಖೆಗೆ ಇಳಿಯುವ ನಾಯಕನಿಗೆ ಸತ್ತ ಮಹಿಳೆಯರು ಕಾಣಿಸಿಕೊಳ್ಳಲು ಆರಂಭಿಸುತ್ತಾರೆ. ಮುಂದೆ ಈ ಸಿನಿಮಾ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಈ ಸಿನಿಮಾದಲ್ಲಿನ ವಿಲನ್ ಪಾತ್ರಧಾರಿಯೂ ಸಹ ನಾಯಕ ನಟನಂತಹ ಮಾನಸಿಕ ಖಿನ್ನತೆಯಿಂದ ಬಳಲುತ್ತಿರೋದು ಚಿತ್ರದ ಮತ್ತೊಂದು ಪ್ರಮುಖ ಟ್ವಿಸ್ಟ್.

45
ಯಾವುದು ಈ ಸಿನಿಮಾ?

ರಾಜ್ ಬಿ. ಶೆಟ್ಟಿ, ಅನಿರುದ್ಧ ಭಟ್, ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ ನಟನೆಯ ರಕ್ಕಸಪುರದೊಳ್ ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಕತೆಯನ್ನು ಹೊಂದಿದೆ. ರವಿ ಸಾರಂಗ ನಿರ್ದೇಶನದ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಕೊನೆಯ 20 ನಿಮಿಷ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಸೈಕೋ ವಿಲನ್ ಪಾತ್ರಕ್ಕೆ ನಟ ಅನಿರುದ್ಧ ಭಟ್ ಜೀವ ತುಂಬಿದ್ದಾರೆ. ಸಿನಿಮಾದ ಕೊನೆಗೆ ಕಾಣಿಸಿಕೊಳ್ಳೋ ಅನಿರುದ್ಧ ಭಟ್ ನಟನೆ ಕಣ್ಣಿಗೆ ಕಟ್ಟಿದಂತಾಗುತ್ತದೆ.

55
ಯಾವ ಓಟಿಟಿ ಪ್ಲಾಟ್‌ಫಾರಂ?

ಒಂದು ಸಾಲಿನಲ್ಲಿ ಹೇಳೋದಾದ್ರೆ ರಕ್ಕಸಪುರದೊಳ್ ಸಿನಿಮಾ ವಿಜ್ಞಾನ ಮತ್ತು ಮೂಢನಂಬಿಕೆಯ ನಡುವಿನ ಸಂಘರ್ಷವನ್ನು ತೋರಿಸುತ್ತದೆ. 7.1 ರೇಟಿಂಗ್ ಪಡೆದುಕೊಂಡಿರುವ ಸಿನಿಮಾವನ್ನು ನೀವು Prime Video ಓಟಿಟಿ ಪ್ಲಾಟ್‌ಫಾರಂನಲ್ಲಿ ವೀಕ್ಷಣೆ ಮಾಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories