ಮಲಯಾಳಂನ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; ಕೇರಳ-ತಮಿಳುನಾಡು ಗಡಿಯ ಠಾಣೆ ಕಥೆ

Published : Sep 06, 2026, 05:09 PM IST

ಜೀತು ಜೋಸೆಫ್ ನಿರ್ದೇಶನದ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಮೇಲಾಧಿಕಾರಿಯಿಂದ ಅವಮಾನಕ್ಕೊಳಗಾದ ಗಿರಿ ಎಂಬ ಪ್ರಾಮಾಣಿಕ ಪೊಲೀಸ್ ಕಾನ್ಸ್‌ಟೇಬಲ್‌ನ ಜೀವನವು, ಒಂದು ಕೊ*ಲೆ ಪ್ರಕರಣದ ತನಿಖೆಯೊಂದಿಗೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.

PREV
15
ಸಸ್ಪೆನ್ಸ್ & ಥ್ರಿಲ್ಲರ್ ಮಲಯಾಳಂ ಸಿನಿಮಾ

ನೀವು ಸಸ್ಪೆನ್ಸ್, ಇನ್‌ವೆಸ್ಟಿಗೇಷನ್ ಮತ್ತು ಥ್ರಿಲ್ಲರ್‌ ಕತೆಗಳನ್ನು ಹೊಂದಿರುವ ಸಿನಿಮಾಗಳನ್ನು ಇಷ್ಟಪಡುತ್ತಿದ್ರೆ, ಇದು ನಿಮಗೆ ಒಳ್ಳೆಯ ಆಯ್ಕೆಯಾಗಲಿದೆ. ಜೀತು ಜೋಸೆಫ್ ನಿರ್ದೇಶನದ ಈ ಮಲಯಾಳಂ ಸಿನಿಮಾ ನೋಡಲು ಆರಂಭಿಸಿದ್ರೆ ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಮರೆಯುತ್ತೀರಿ. OTT ಪ್ಲಾಟ್‌ಫಾರ್ಮ್‌ನಲ್ಲಿರುವ ಈ ಸಿನಿಮಾ 2022ರಲ್ಲಿ ಬಿಡುಗಡೆಗೊಂಡಿದೆ.

25
ಸಿನಿಮಾದ ಕಥೆ ಏನು?

ಈ ಸಿನಿಮಾದ ಕತೆ ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿರೋ ಪುಟ್ಟ ಗ್ರಾಮದಿಂದ ಆರಂಭವಾಗುತ್ತದೆ. ಬೆರಳಣಿಕೆಯಷ್ಟು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕ್ಕ ಪೊಲೀಸ್ ಠಾಣೆಯೊಂದಿರುತ್ತದೆ. ಈ ಠಾಣೆಯಲ್ಲಿರುವ ಪೊಲೀಸ್ ಕಾನ್ಸ್‌ಟೇಬಲ್ ಗಿರಿ ಎಂಬಾತನೇ ಸುತ್ತವೇ ಚಿತ್ರದ ಕಥೆ ಸುತ್ತುತ್ತದೆ. ಗಿರಿ ಓರ್ವ ದಕ್ಷ, ಪ್ರಾಮಾಣಿಕ ಮತ್ತು ಬುದ್ದಿವಂತ ಪೊಲೀಸ್ ಕಾನ್ಸ್‌ಟೇಬಲ್ ಆಗಿರುತ್ತಾನೆ.

35
ಪ್ರಕರಣದ ತನಿಖೆ ಬಳಿಕ ತಿರುವು ಪಡೆದುಕೊಳ್ಳವ ಸಿನಿಮಾ

ಒಮ್ಮೆ ತನ್ನ ಮೇಲಾಧಿಕಾರಿಗಳಿಂದ ಗಿರಿ ತೀವ್ರವಾಗಿ ಅವಮಾನಕ್ಕೆ ಒಳಗಾಗುತ್ತಾನೆ. ಇಲ್ಲಿಂದ ಸಿನಿಮಾ ಹೊಸ ತಿರುವು ಪಡೆದುಕೊಳ್ಳಲಾರಂಭಿಸುತ್ತದೆ. ಮೇಲಾಧಿಕಾರಿಯಿಂದ ಅವಮಾನಕ್ಕೊಳಗಾದ ನಂತ್ರ ಗಿರಿಯ ಆಲೋಚನಾ ಲಹರಿ ಮತ್ತು ಜೀವನವೇ ವಿಭಿನ್ನ ತಿರುವು ಪಡೆಯುತ್ತದೆ. ಚಿತ್ರದ ಸೆಕೆಂಡ್ ಹಾಫ್ ಸಂಪೂರ್ಣವಾಗಿ ಕೊ*ಲೆ ಪ್ರಕರಣದ ತನಿಖೆಯತ್ತ ಮುಖ ಮಾಡುತ್ತದೆ. ಗಿರಿ ಪಾತ್ರದಲ್ಲಿ ನಟ ಆಸಿಪ್ ಅಲಿ ಅದ್ಭುತವಾಗಿ ನಟಿಸುತ್ತಿದ್ದು, ಅವರ ಗ್ರೇ-ಶೇಡ್ ರೋಲ್ ಕಣ್ಮುಂದೆಯೇ ಬಂದಂತೆ ಭಾಸವಾಗುತ್ತದೆ.

45
153 ನಿಮಿಷದ ಕೂಮನ್ ಸಿನಿಮಾ

153 ನಿಮಿಷದ ಈ ಸಿನಿಮಾ ಹೆಸರು ಕೂಮನ್ (Kooman). ಆಸಿಫ್ ಅಲಿ, ಅಲ್ವಿನ್ ಆಂಥೋನಿ, ರೆಂಜಿ ಪನಿಕೆರ್, ಹನ್ನಾ ರೆಜಿ, ಜಾಫರ್ ಇಡುಕ್ಕಿ, ಬಾಬುರಾಜ್ ಸೇರಿದಂತೆ ಹಲವು ಕಲಾವಿದರು ಕೂಮನ್ ಸಿನಿಮಾದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಕೆ.ಆರ್.ಕೃಷ್ಣಕುಮಾರ್ ಅವರ ಕಥೆಗೆ ನಿರ್ದೇಶಕ ಜೇತು ಜೋಸೆಫ್ ಜೀವ ತುಂಬಿದ್ದಾರೆ.

ಇದನ್ನೂ ಓದಿ: ಸಂಗಾತಿಗಾಗಿ 3 ಜನ್ಮ ಕಾಯೋ ಹೆಣ್ಣು ಹಾವು; 1991ರ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ

55
ಯಾವ OTTಯಲ್ಲಿ ಈ ಸಿನಿಮಾ ಇದೆ?

ಐಎಂಡಿಬಿಯಲ್ಲಿ ಈ ಸಿನಿಮಾಗೆ 7.3 ರೇಟಿಂಗ್ ನೀಡಲಾಗಿದೆ. ಈ ಸಿನಿಮಾ ನೋಡಿದ್ಮೇಲೆ ಮನಸ್ಸಿಗೆ ಮುದ ನೀಡಿದ ಅನುಭವವನ್ನು ನೀಡುತ್ತದೆ. ಪೊಲೀಸ್ ಕಾನ್ಸ್‌ಟೇಬಲ್ ಕೆಲಸ ಹೋಗುತ್ತಾ? ತನಿಖೆ ಹೇಗೆ ನಡೆಯುತ್ತೆ ಎಂಬ ಪ್ರಶ್ನೆಗಳು ನಿಮ್ಮನ್ನು ಸಿನಿಮಾದ ಕೊನೆಯವರೆಗೂ ಕರೆದುಕೊಂಡು ಹೋಗುತ್ತದೆ. ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದ್ದು, ವೀಕ್ಷಿಸಬಹುದು.

ಇದನ್ನೂ ಓದಿ: ಗಂಡನ ರೂಪದ ಹಾವಿನ ಜೊತೆ ಸಂಸಾರ; 15 ಹಾಡುಗಳ ಸೂಪರ್ ಹಿಟ್ ಸಸ್ಪೆನ್ಸ್ ಕನ್ನಡ ಸಿನಿಮಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories